*ಗಜ಼ಲ್ ೨೭*
ಅಜ್ಞಾನದಿಂದ ಸುಜ್ಞಾನ ಪಡೆಯಲು ತೆರೆದಿರಲಿ ಬಾಗಿಲು
ಅಂಧಕಾರವನಳಿಸಿ ಬೆಳಕು ಪಸರಿಸಲು ತೆರೆದಿರಲಿ ಬಾಗಿಲು
ಅಸೂಯೆ ದ್ವೇಷ ಸ್ವಜನ ಪಕ್ಷಪಾತ ಕಲುಷಿತ ಮನಗಳು
ಸರ್ವರ ಬೆಳೆಸಲು ಪ್ರೀತಿಸಲು ತೆರೆದಿರಲಿ ಬಾಗಿಲು
ಸರ್ವರ ಬೆಳೆಸಲು ಪ್ರೀತಿಸಲು ತೆರೆದಿರಲಿ ಬಾಗಿಲು
ಕರಕಲು ಕೊಳೆತ ಕಲುಷಿತ ಕರ್ಮಟ ವಾಸನೆ ಎಲ್ಲೆಡೆ
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು
ದೇಶ ಭಾಷೆ ಬಣ್ಣ ಜಾತಿ ಮತಗಳ ಹೆಸರಲಿ ಕಿತ್ತಾಟ
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು
ನಾನು ನನ್ನದೆಂಬ ಸ್ವಾರ್ಥತೆ ತೊರೆಯಲು ಸೀಜೀವಿಯ ಆಶಯ
ಸಂಕುಚಿತತೆ ತೊರೆದು ವೈಶಾಲ್ಯತೆ ಬೆಳೆಸಲು ತೆರೆದಿರಲಿ ಬಾಗಿಲು
ಸಂಕುಚಿತತೆ ತೊರೆದು ವೈಶಾಲ್ಯತೆ ಬೆಳೆಸಲು ತೆರೆದಿರಲಿ ಬಾಗಿಲು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ