17 March 2018

ನಮ್ಮೆಲ್ಲರ ಹಬ್ಬ ( ಯುಗಾದಿ ಹಬ್ಬದ ಶುಭಾಶಯಗಳು)

*ನಮ್ಮೆಲ್ಲರ ಹಬ್ಬ*

ಬಂದಿತು ಬಂದಿತು  ನಮ್ಮೆಲ್ಲರ ಹಬ್ಬ
ಯುಗದ ಆದಿಯ ಜಗದ  ಹಬ್ಬ
ಸಕಲರ ಪಾಲಿನ ಸವಿಯಾದ ಹಬ್ಬ
ಅದುವೆ ನೋಡಿ  ಯುಗಾದಿ ಹಬ್ಬ

ಅಭ್ಯಂಜನ ಸ್ನಾನ ಮಾಡೋಣ
ಹೊಸ ಉಡುಪಲಿ ಸಂಭ್ರಮಿಸೋಣ
ಹೋಳಿಗೆ ತುಪ್ಪ ಸವಿಯೋಣ
ಪಂಚಾಂಗ ಪಠಣ ಮಾಡೋಣ

ಮಾಮರ ನಲಿಯುತ ಚಿಗುರುವುದು
ಕೋಗಿಲೆ ಕಂಠದಿ ಕರೆಯುವುದು
ಬೇವು ಬೆಲ್ಲ ಹಂಚಿ ಸವಿಯೋಣ
ಸುಖಃ ದುಃಖಗಳಿದ್ದರೂ ಬಾಳೋಣ

ಕಳೆಯಿತು ಶೋಭಕೃತ  ಸಂವತ್ಸರ
ಕಾಲಿಟ್ಟಿದೆ  ಕ್ರೊಧಿ    ಸಂವತ್ಸರ
ಸುಭೀಕ್ಷವಾಗಲಿ ಧರೆಯೆಲ್ಲಾ
ಶಾಂತಿಯು  ನೆಲೆಸಲಿ ಜಗವೆಲ್ಲಾ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: