17 March 2018

ಉದುರುವ ಎಲೆ (ಭಾವಗೀತೆ ,ತಾಯಿ ಮಗ ಮತ್ತು ಹೆಂಡತಿಯ ಸಂಬಂಧಗಳ ಕುರಿತು ಭಾವಗೀತೆ). ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ



*ಉದುರುವ ಎಲೆ*

ಮನ್ನಿಸು ನನ್ನ ಹೆತ್ತಮ್ಮ
ಹೀನನು ನಾನು ಕ್ಷಮಿಸಮ್ಮ
ಜನ್ಮದಾತೆಯ ದೂಡಿದೆ ನಾ
ನನ್ನ ಮೇಲೆ ನಿನಗೆ ಕೋಪಾನಾ?|೧|

ಮರುಗುವೆಯೇಕೆ  ಸುತನೆ
ನಿನ್ನದೇನು ತಪ್ಪೇನಿಲ್ಲ ಮಗನೆ
ನಿನ್ನವಳ ಬುದ್ದಿಯು ಬಲಿತಿಲ್ಲ
ನಾನವಳಿಗೆ ಕೆಡುಕ ಬಯಸಲ್ಲ|೨|

ಹೊತ್ತು ಹೆತ್ತು ನಿನ್ನ ಸಾಕಲಿಲ್ಲ
ನನ್ನ ಪಾಪಕೆಂದು  ಕ್ಷಮೆಯಿಲ್ಲ
ಕೈತುತ್ತನ್ನು  ನೀಡಿದೆ ನೀನು
ಕೈಹಿಡಿದು ಸಲಹಲಿಲ್ಲ ನಾನು|೩|

ಮನೆಬೆಳೆಗಲು ಅವಳ ತಂದೆ
ಅವಳ ಕಾಟಕೆ ಮನೆ ಬಿಟ್ಟು ಬಂದೆ
ಬಾಳಿರಿ ನೂರ್ಕಾಲ ಸಂತಸದಿ
ಉದುರುವ ಎಲೆ ನಾ ಕಾನನದಿ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: