ಉಂಡಾಡಿಗುಂಡ*
ನಮ್ಮೂರ ರಾಮನಿಗೆ ಮಕ್ಕಳಿರಲಿಲ್ಲ
ದೇವರಿಗೆ ಬೇಡುವುದ ಮರೆಯಲಿಲ್ಲ
ಹಾಲುಕುಡಿದಪ್ಪನಿಗೆ ಹರಕೆ ಹೊತ್ತನು
ದಿನಕಳೆಯುತಲಿ ಸಂತಾನ ಪಡೆದನು//
ಮಗನ ಬಾಲ ಲೀಲೆಗೆ ಮನಸೋತನು
ಅತಿಯಾಗಿ ಪ್ರೀತುಸಿ ಮುದ್ದಿಸಿದನು
ಮಗ ಉಡಾಳರ ಸಂಘ ಮಾಡಿ ಕೆಟ್ಟನು
ವಿದ್ಯೆ ಕಲಿಯಲು ಬಿಟ್ಟು ಅಲೆದನು //
ಅಪ್ಪನ ಅಮ್ಮನ ಮಾತಿಗೆ ಬೆಲೆಯುಲ್ಲ
ಊರಸುತ್ತುವದ ಅವನು ಮರೆಯಲಿಲ್ಲ
ಹಣವನ್ನು ಖರ್ಚು ಮಾಡಿದ ನೀರಿನಂತೆ
ಅಪ್ಪ ಅಮ್ಮರಾದರು ಭಿಕ್ಷುಕರಂತೆ //
ಮದುವೆ ಮಾಡಿದರು ವಧುವ ತಂದು
ಚಿಗುರಿತು ಆಸೆ ಮಗ ಸುಧಾರಿಸುವನೆಂದು
ನಾಯಿಬಾಲ ಡೊಂಕು ಅವನು ಉಂಡಾಡಿ
ಸಾಕುತ್ತಿದ್ದಾಳೆ ಸೊಸೆ ಎಲ್ಲರ ಕೂಲಿ ಮಾಡಿ//
ರಾಮನಿಗೆ ಆಸೆ ಮೊಮ್ಮಕ್ಕಳ ನೋಡಲು
ಮಗನ ಹಾತೊರೆವ ಹೆಂಡ ಕುಡಿಯಲು
ಸೊಸೆಗೂ ಆಸೆ ಮಗುವ ತಾಯಿಯಾಗಲು
ಆದರೆ ನಿರ್ಧಾರ ಮಡಿದಳು ಬಂಜೆಯಾಗಲು //
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ನಮ್ಮೂರ ರಾಮನಿಗೆ ಮಕ್ಕಳಿರಲಿಲ್ಲ
ದೇವರಿಗೆ ಬೇಡುವುದ ಮರೆಯಲಿಲ್ಲ
ಹಾಲುಕುಡಿದಪ್ಪನಿಗೆ ಹರಕೆ ಹೊತ್ತನು
ದಿನಕಳೆಯುತಲಿ ಸಂತಾನ ಪಡೆದನು//
ಮಗನ ಬಾಲ ಲೀಲೆಗೆ ಮನಸೋತನು
ಅತಿಯಾಗಿ ಪ್ರೀತುಸಿ ಮುದ್ದಿಸಿದನು
ಮಗ ಉಡಾಳರ ಸಂಘ ಮಾಡಿ ಕೆಟ್ಟನು
ವಿದ್ಯೆ ಕಲಿಯಲು ಬಿಟ್ಟು ಅಲೆದನು //
ಅಪ್ಪನ ಅಮ್ಮನ ಮಾತಿಗೆ ಬೆಲೆಯುಲ್ಲ
ಊರಸುತ್ತುವದ ಅವನು ಮರೆಯಲಿಲ್ಲ
ಹಣವನ್ನು ಖರ್ಚು ಮಾಡಿದ ನೀರಿನಂತೆ
ಅಪ್ಪ ಅಮ್ಮರಾದರು ಭಿಕ್ಷುಕರಂತೆ //
ಮದುವೆ ಮಾಡಿದರು ವಧುವ ತಂದು
ಚಿಗುರಿತು ಆಸೆ ಮಗ ಸುಧಾರಿಸುವನೆಂದು
ನಾಯಿಬಾಲ ಡೊಂಕು ಅವನು ಉಂಡಾಡಿ
ಸಾಕುತ್ತಿದ್ದಾಳೆ ಸೊಸೆ ಎಲ್ಲರ ಕೂಲಿ ಮಾಡಿ//
ರಾಮನಿಗೆ ಆಸೆ ಮೊಮ್ಮಕ್ಕಳ ನೋಡಲು
ಮಗನ ಹಾತೊರೆವ ಹೆಂಡ ಕುಡಿಯಲು
ಸೊಸೆಗೂ ಆಸೆ ಮಗುವ ತಾಯಿಯಾಗಲು
ಆದರೆ ನಿರ್ಧಾರ ಮಡಿದಳು ಬಂಜೆಯಾಗಲು //
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment