*ನ್ಯಾನೋ ಕಥೆ*
*ಕನಸು*
"ನಮ್ಮ ಮಗಳು ನಮ್ಮಂತೆ ಕಟ್ಟಡ ಕೆಲಸಗಾರರಾಗದೇ ಇಂತಹ ದೊಡ್ಡ ಕಟ್ಟಡದ ಒಡತಿಯಾಗಬೇಕು ಇದು ನನ್ನ ಕನಸು" ಎಂದು ದೂರದ ಬಳ್ಳಾರಿಯಿಂದ ಬೆಂಗಳೂರಿನಲ್ಲಿ ಕಟ್ಟಡ ಕೆಲಸ ಮಾಡಲು ಬಂದ ಮಾರಣ್ಣ ತನ್ನ ಶೆಡ್ ನಲ್ಲಿ ಹೆಂಡತಿಗೆ ರಾತ್ರಿ ಊಟಮಾಡುವಾಗ ಹೇಳಿದನು .ಆಗ ಮಗುವು ತಣ್ಣಗೆ ನಿದ್ರಿಸುತ್ತಿತ್ತು
ಮಾರನೆಯ ದಿನ ತನ್ನ ಮಗುವನ್ನು ಸೀರೆಯಿಂದಾದ ಜೋಲಿಯಲ್ಲಿ ಮಲಗಿಸಿ ಕೆಲಸಕ್ಕೆ ಹೊರಟರು .ಮಧ್ಯಾಹ್ನದ ವೇಳೆಗೆ ಮಾರಣ್ಣ ಕೆಲಸದಲ್ಲಿ ನಿರತನಾಗಿದ್ದಾಗ ಮಗಳು ಜೋಲಿಯಿಂದಿಳಿದು ಕಟ್ಟಡದ ಕೆಲಸ ಮಾಡುವ ಕಡೆಗೆ ಅಂಬೆಗಾಲಿಟ್ಟು ಬಂದಳು .ಹತ್ತು ಅಂತಸ್ತಿನ ನಿರ್ಮಾಣದ ಕಟ್ಟಡದಿಂದ ಮೇಲಿನಿಂದ ಒಂದು ಚೂಪಾದ ಸರಳು ಇನ್ನೇನು ಮಗುವಿನ ಮೇಲೆ ಬೀಳುವ ವೇಳೆಗೆ ಓಡಿ ಬಂದ ಮಾರಣ್ಣ ಮಗಳನ್ನು ದೂರ ತಳ್ಳಿ ತಾನು ಮುಂದೆ ಸಾಗಲು ಪ್ರಯತ್ನಿಸಿದ ಅದಾಗಲೇ ಸರಳು ಅವನ ದೇಹ ಸೀಳಿ ರಕ್ತ ಚಿಮ್ಮಿ ಪ್ರಾಣ ಪಕ್ಷಿ ಹಾರಿತ್ತು ಕಣ್ಣು ಮಾತ್ರ ಮುಚ್ಚದೇ ಅವನ ಮಗಳ ಭವಿಷ್ಯದ ಮನೆ ಕಣ್ಣುಗಳಲ್ಲಿ ಪ್ರತಿಫಲನ ಆಗುತ್ತಿತ್ತು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment