ನಾನೇಕೆ ಬರೆಯುತ್ತೇನೆ
ಬರವಣಿಗೆಯು ಮಾನವನ ಅಭಿವ್ಯಕ್ತಿಯ ಮಾಧ್ಯಮ ಆಗಿರುವುದರಿಂದ ಹಲವರು ಈ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬರವಣಿಗೆ ಸಹಕಾರಿ
ನಾನು ಬರವಣಿಗೆ ಆರಂಭಿಸಲು ಪರೋಕ್ಷವಾಗಿ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಯುತ ಟಿ.ಎನ್ ತಿಪ್ಪೇಸ್ವಾಮಿ ರವರು ಕಾರಣ ನಾನು ನಾಲ್ಕನೇ ತರಗತಿ ಓದುತ್ತಿದ್ದಾಗಲೇ ನನಗೆ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ಅದನ್ನು ಪ್ರತ್ಯೇಕವಾದ ಪುಸ್ತಕ ಇಟ್ಟು ಬರೆಯಲು ಹೇಳಿದ್ದರು. ಆರಂಭದಲ್ಲಿ ಅವರನ್ನು ಬೈಯ್ದುಕೊಂಡು ಬರೆಯಲು ಆರಂಭ ಮಾಡಿದ ಆ ಕೆಲಸ ಕ್ರಮೇಣ ಇಚ್ಚೆ ಪಟ್ಟು ಒಳ್ಳೆಯ ಕಾರ್ಯ ಮಾಡುವ ಜೊತೆ ದಿನಚರಿಯ ಬರೆಯುವ ಅಭ್ಯಾಸ ಆಯಿತು.
ಮುಂದೆ ನಮ್ಮ ಗುರುಗಳು ನನಗೆ ಪತ್ರ ಬರೆಯಲು ಅವರ ಹಣದಲ್ಲಿ ಪೋಸ್ಟ್ ಕಾರ್ಡ್ ತಂದು ನಮ್ಮ ಸಂಬಂಧಿಗಳಿಗೆ ವಾರಕ್ಕೋಂದಾದರೂ ಪತ್ರ ಬರೆಸುತ್ತಿದ್ದರು ಈಗೆ ನನ್ನ ಮೊದಲ ಬರಹಗಳು ಆರಂಭವಾದರೆ
ಹೈಸ್ಕೂಲ್ ಮತ್ತು ಪಿ.ಯು.ನಲ್ಲಿ ನನ್ನ ಬರಹ ಕಡಿಮೆಯಾಗಿ ಕೇವಲ ಪರೀಕ್ಷೆಗೆ ಸೀಮಿತವಾಗಿತ್ತು. ಪದವಿಯಲ್ಲಿ ವಿವಿಧ ಸಂಸ್ಥೆಯ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ನನ್ನ ಬರವಣಿಗೆ ಪಯಣ ಮುಂದುವರೆಯಿತು .ಅಂದಿನ ಪ್ರಧಾನ ಮಂತ್ರಿಯಾದ ಮಾನ್ಯ ವಾಜಪೇಯಿ ಸರ್ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಾಚಕರ ವಾಣಿಯ ಲ್ಲಿ ಮೊದಲಿಗೆ ನಾನು ಬರೆದ ಬರಹ ಪ್ರಕಟವಾದಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿ ಬರೆಯಲು ಮುಂದುವರೆಸಿದೆ ಅದುಇಂದಿಗೂ ನಾಡಿನ ಬಹುತೇಕ ಪತ್ರಿಕೆಯಲ್ಲಿ ಮತ್ತು ನಿಯತಕಾಲಿಕಗಳಲ್ಲಿ ನನ್ನ ಬರಹಗಳು ಪ್ರಕಟವಾಗುವ ಮೂಲಕ ಮುಂದುವರೆದಿದೆ
*ಅಷ್ಟಕ್ಕೂ ನಾನು ಏಕೆ ಬರೆಯುವೆ*
ನಾನು ಸಮಾಜದಲ್ಲಿ ಕಾಣುವ ಒಳ್ಳೆಯ ಮತ್ತು ಕೆಟ್ಟ ಅಂಶಗಳ ಆಧಾರದ ಮೇಲೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬರವಣಿಗೆಯನ್ನು ಆರಂಬಿಸಿದೆ ಸರ್ಕಾರಿ ನೌಕರಿ ಸಿಗುವ ಮೊದಲು ಸರ್ಕಾರದ ತಪ್ಪು ನಿರ್ಧಾರಗಳನ್ನು ಮತ್ತು ರಾಜಕಾರಣಿಗಳ ಗುಣಾವಗುಣಗಳ ಬಗ್ಗೆ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು.
ಈಗ ನನ್ನ ಆತ್ಮ ಸಂತೋಷಕ್ಕಾಗಿ ಮತ್ತು ಸಹೃದಯರ ಓದಿಗಾಗಿ ಕವನ,ಹನಿಗವನ,ನ್ಯಾನೋ ಕಥೆ, ಗಜಲ್, ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಬಿಡುವಿದ್ದಾಗ ನನ್ನ ಬರವಣಿಗೆಯನ್ನು ನಿಮ್ಮಂತಹ ಸಹೃದಯರೊಂದಿಗೆ ಹಂಚಿಕೊಂಡು ಸಲಹೆ ವಿಮರ್ಶೆ ಸ್ವೀಕರಿಸಿ ಬರವಣಿಗೆಯನ್ನು ಮುಂದುವರೆಸಿರುವೆನು.
ಒಟ್ಟಿನಲ್ಲಿ ಬರವಣಿಗೆ ನನಗೆ ಒಂದು ಆತ್ಮತೃಪ್ತಿ.ಆನಂದ ನೆಮ್ಮದಿ ನೀಡಿದೆ ಜೊತೆಗೆ ಓದುಗ ಮಿತ್ರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿ ದಾಗ ಆಗುವ ಆನಂದ ವರ್ಣಿಸಲಸದಳ.
ಒಟ್ಟಿನಲ್ಲಿ ಬರವಣಿಗೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ನನ್ನ ನೋಡಿ ನನ್ನ ಮಕ್ಕಳು ಬರೆಯಲು ಆರಂಬಿಸಿರಿವುದು ಮತ್ತೊಂದು ಸಂತೋಷ.
ವಂದನೆಗಳೊಂದಿಗೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment