03 ಡಿಸೆಂಬರ್ 2020

ಕನಕ ದಾಸರ ಜಯಂತಿಯ ಪ್ರಯುಕ್ತ ಹಾಯ್ಕುಗಳು


 *ಹಾಯ್ಕುಗಳು*


ಕನಕದಾಸರ ಜಯಂತಿಯ ಶುಭಾಶಯಗಳು


೧೦೭


ದಾಸ ಶ್ರೇಷ್ಠರು 

ಕನಕ ದಾಸರಿಗೆ 

ನಮನಗಳು 


೧೦೮


ಧನಕನಕ

ತೊರೆದರೆ ಕನಕ 

ನಾವೂ ಕನಕ 


೧೦೯


ಬಾಡಾದ ಕವಿ

ತಿಮ್ಮಪ್ಪ ನಾಯಕನು

ಬಾಡದ ಪುಷ್ಪ 


೧೧೦


ಕನಕದಾಸ

ಸಮಾಜ ಸುಧಾರಕ

ಕೀರ್ತನಕಾರ 


೧೧೧


ರಾಗಿಯೇ ಶ್ರೇಷ್ಠ

ರಾಮಧಾನ್ಯ ಚರಿತೆ

ಕನಕರಾಗಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

27 ನವೆಂಬರ್ 2020

ಅಸಮಾನ


 *ಅಸಮಾನ*


ನಮ್ಮೆಲ್ಲರ 

ಕೈಬೆರಳುಗಳು 

ಸಮವಿಲ್ಲ|

ಅವುಗಳು 

ಒಗ್ಗೂಡಿದ

ಮುಷ್ಟಿಗೆ 

ಯವುದೂ

ಸಮವಿಲ್ಲ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


08 ನವೆಂಬರ್ 2020

ಬೆಳಕು ಹನಿ


   *ಬೆಳಕು*


   ಆತುರದ ನಿರ್ಧಾರವು ತಳ್ಳುವುದು

   ಬದುಕನ್ನು  ಬೆಂಕಿಗೆ |

   ಅರಿತು ಮಾಡುವ ನಿರ್ಧಾರ

   ಬೆಳಕು ನೀಡುವುದು ಬದುಕಿಗೆ ||

   

*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

   

25 ಅಕ್ಟೋಬರ್ 2020

ಆಯುಧಗಳು ( ಹನಿ)


 #ಸಿಹಿಜೀವಿಯ_ಚುಟುಕು


ಈಗಿನ ಕರೋನ

ಕಾಲದಲ್ಲಿ ಮಾಸ್ಕ್ ,ಗ್ಲಾಸ್, 

ಸ್ಯಾನಿಟೈಸರ್ ಗಳೆ 

ನಮ್ಮ ಆಯುಧಗಳು|

ಇವನ್ನು ಮರೆತರೆ 

ನಮ್ಮ ಪೋಟೋಗೆ

ಹಾರ ಹಾಕುವರು

ನಮ್ಮ ಸಂಬಂದಿಗಳು||


#ಸಿಹಿಜೀವಿ


ಸಿ ಜಿ ವೆಂಕಟೇಶ್ವರ

ತುಮಕೂರು