*ಈ ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ "ಚಿನ್ನಮ್ಮನ ಸೈಕಲ್"*
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
25 ಅಕ್ಟೋಬರ್ 2021
24 ಅಕ್ಟೋಬರ್ 2021
ತಂದೆಯ ಕನಸು. ನ್ಯಾನೋ ಕಥೆ
*ತಂದೆಯ ಕನಸು* 
ನ್ಯಾನೋ ಕಥೆ
"ನನ್ನ ಕನಸು ನನಸಾಯಿತು. ಇಂದು ನೀನು ಇಂಜಿನಿಯರಿಂಗ್ ಪದವಿ ಪಡೆದಿರುವೆ. ನಿನಗೆ ಒಳ್ಳೆಯ ಉದ್ಯೋಗ ಖಂಡಿತವಾಗಿ ಸಿಗುತ್ತದೆ. ಅದು ಖಾಸಗಿ ಅಥವಾ ಸರ್ಕಾರಿ ಕೆಲಸವಾಗಲಿ ನಾನು ಕಷ್ಟ ಪಟ್ಟು ನಿನ್ನ ಓದಿಸಿದ್ದು ಸಾರ್ಥಕವಾಯಿತು. ತಾಯಿ ಭಾರತಾಂಬೆಯ ಸೇವೆ ಗೆ ನಿನ್ನ ಜೀವ ಮುಡಿಪಾಗಿರಲಿ" ಶ್ಯಾಮರಾಯರು ಮಗನೆಡೆ ಸಂತೋಷದ ನೋಟ ಬೀರುತ್ತಾ ಹೆಮ್ಮೆಯಿಂದು ನುಡಿದರು.
ತಲೆಕೆರೆದು ಕೊಳ್ಳುತ್ತಾ" ಅಪ್ಪಾ ನಾನು ಈಗಾಗಲೇ ಜರ್ಮನಿಯ ಒಂದು ಕಂಪನಿಯ ಜಾಬ್ ಆಪರ್ ಒಪ್ಪಿ ಸಹಿ ಮಾಡಿರುವೆ . ಮುಂದಿನ ತಿಂಗಳು ವೀಸಾ ಪಾಸ್‌ಪೋರ್ಟ್ ರೆಡಿ ಆದಮೇಲೆ ,ಇವಳನ್ನು ಮದುವೆಯಾಗಿ  ಜರ್ಮನಿಗೆ ಕರೆದುಕೊಂಡು ಹೋಗುವೆ, ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಹಾಕುವೆ " ಎಂದು ತಾನು ಮದುವೆ ಆಗಬೇಕಿರುವ ಹುಡುಗಿಯ ಪೋಟೋ ತೋರಿಸಿದ ಪುರುಶೋತ್ತಮ.
ಪೋಟೋ ನೋಡಿದ ಶ್ಯಾಮರಾಯರು ನಿಧಾನವಾಗಿ ತಮ್ಮ ಕೊಠಡಿಯ ಕಡೆ ಹೆಜ್ಜೆ ಹಾಕಿದರು. ಅವರ ಕಣ್ಣಲ್ಲಿದ್ದ ಎರಡು ಹನಿಗಳನ್ನು ಅವರ ಹೆಂಡತಿ ಸುನಂದಮ್ಮ ಮಾತ್ರ ಗುರುತಿಸಿದರು...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
ಗೋಮಾತೆ.ಹನಿ
*ಗೋಮಾತೆ*
ನಾಟಿ ಹಸು,ಹಳ್ಳಿಕಾರ್
ಜೆರ್ಸಿ,ಸಿಂಧಿಇತ್ಯಾದಿ
ಗೋಮಾತೆಯಲಿ
ನಾನಾ ತಳಿ|
ಯಾವುದಾದರೇನು
ಗೋಮಾತೆ ಒಂದೇ,
ಮಾತೆಯಲಿ ಅಡಗಿವೆ
ಸಾವಿರ ದೇವತೆಗಳು
ನೀ ತಿಳಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

 



