13 ಮೇ 2021

ಒಲವು .ಹನಿಗವನ


 ಒಲವು

ಬೇಕು

ಬದುಕಲು,

ದಿಟವದು

ಒಲವಿಲ್ಲದ

ಬಾಳು

ಬರಡು ,

ಒಲವೇ

ಜೀವನ .

ಕರೆದೊಯ್ಯು .ಹನಿಗವನ


 


*ಕರೆದೊಯ್ಯು*


ಕರೆದೊಯ್ಯು 

ನಿನ್ನ ಲೋಕಕೆ

ಒಲವ ನಾಕಕೆ

ಪ್ರೇಮದ ಆಟಕೆ

ಮಧುಮಂಚಕೆ

ಪ್ರೇಮಲೋಕಕೆ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಜಾಗೃತವಾಗಿರಿ .ಹನಿಗವನ


 


*ಸದಾ ಜಗೃತವಾಗಿರಿ*


ಸದಾ ಜಾಗೃತವಾಗಿರಿ

ಮೈಯಲ್ಲಾ ಕಣ್ಣಾಗಿರಿ

ಕಷ್ಟಗಳು ಸಾಮಾನ್ಯ

ಹತ್ತುವಾಗ ಗಿರಿ|

ತುತ್ತ ತುದಿ ಏರಿದಾಗ 

ಸಂತಸದಿಂದಿರಿ

ಆದರೆ ...

ತುತ್ತು ಕೊಟ್ಟವಳ 

ಮರೆಯದಿರಿ....||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ "ಆ... ಬಾಕ್ಸ್"* ಸಿಹಿಜೀವಿ ಸಿ ಜಿ ವೆಂಕಟೇಶ್ವರ ೧೩/೫/೨೧


 

12 ಮೇ 2021

ತಗೊಂಡಿದಿರಾ?. ಹನಿಗವನ


 



*ತಗೊಂಡಿದ್ದೀರಾ?*


ಎದುರುಗಡೆ ಸಿಕ್ಕಿದವರಿಗೆಲ್ಲ 

ಸುಮ್ಮನೆ ಕೇಳಿದೆ  

ತಗೊಂಡಿದ್ದೀರಾ?|


90% ಜನ  ಅಂದರು

ವೈನ್ ಶಾಪ್ ಬಂದ್ ಆಗಿದೆ 

ನೀವೇ ನೋಡಿದ್ದೀರಾ ||


5%  ಜನರೆಂದರು ನಾವು 

ಎಣ್ಣೆ ಹಾಕಲ್ಲ ಏನ್ 

ಇಂಗ್ ಕೇಳ್ತಿದ್ದೀರಾ?|


5% ಜನ ಮಾತ್ರ ಕೇಳಿದರು

ಲಸಿಕೆ ಸ್ಟಾಕ್ ಇದ್ದಾಗ

ಪ್ಲೀಸ್ ತಿಳಿಸ್ತೀರಾ?||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು