17 ಏಪ್ರಿಲ್ 2021

ಸಂಗಮ .ಹನಿ


 



*ಸಂಗಮ*


ಓ ನನ್ನ ನಲ್ಲೆ

ನೀನು ಬಿಸಿಲು,

ನಾನು ಮಳೆ ,

ಎಂದು ಏಕೆ

ಓಡುವೆ ನಿಲ್ಲು|

ಎರಡೂ ಸೇರಲು

ಆಗುವುದು

ಮಳೆಬಿಲ್ಲು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

15 ಏಪ್ರಿಲ್ 2021

ಕುಂಚ .ಪ್ರಪಂಚ


 ಕುಂಚ_ ಪ್ರಪಂಚ 


ಕುಂಚ .ಪ್ರಪಂಚ

ಕಲಾವಿದರು ಕೈಯಲ್ಲಿ

ಹಿಡಿದರೆ ಕುಂಚ|

ತೋರಿಸುವರು

ನಾವು ಕಾಣದ

ಸುಂದರ ಪ್ರಪಂಚ||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



ನಮನ ( ವಿಶ್ವ ಕಲಾದಿನದ ಶುಭಾಷಯಗಳು)


 ವಿಶ್ವ  ಚಿತ್ರಕಲಾ ದಿನದ ಶುಭಾಶಯಗಳು



*ನಮನ*


ಭಾವನೆಗಳನು ಹೊರಸೂಸಲು

ಚಿತ್ತಾರ ಬಿಡಿಸಿ

ಚಿತ್ರಗಳಿಗೆ ಬಣ್ಣಗಳ ಪೂಸಿ

ಬರೆದ ಚಿತ್ರಗಳು ಸೆಳೆಯುವವು

ನಮ್ಮ ಮನ|

ಚಿತ್ರ ಬರೆವ ಚಿತ್ರಕಲಾವಿದರೆ

ನಿಮಗಿದೋ ನಮ್ಮ ನಮನ||

13 ಏಪ್ರಿಲ್ 2021

ಬದುಕು .ಹನಿ


 



ಬದುಕು


ಬೇವು ಬೆಲ್ಲದಂತೆ ಬದುಕು

ಉತ್ತಮರ  ಮಾರ್ಗದಲಿ ಬದುಕು

ಏಳು ಬೀಳುಗಳಿದ್ದರೂ ಬದುಕು

ನಾವು ನಾವಾಗಿದ್ದಾಗ ಮಾತ್ರ

ಸುಂದರ ಈ ಬದುಕು 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ