13 ಏಪ್ರಿಲ್ 2021

ಬದುಕು .ಹನಿ


 



ಬದುಕು


ಬೇವು ಬೆಲ್ಲದಂತೆ ಬದುಕು

ಉತ್ತಮರ  ಮಾರ್ಗದಲಿ ಬದುಕು

ಏಳು ಬೀಳುಗಳಿದ್ದರೂ ಬದುಕು

ನಾವು ನಾವಾಗಿದ್ದಾಗ ಮಾತ್ರ

ಸುಂದರ ಈ ಬದುಕು 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ಹೊಸ ವರುಷ


 


*ಹೊಸ ವರುಷ*


ಹರುಷ ತರಲಿ ನಮಗೆ

ಹೊಸ  ವರುಷ 

ತ್ಯಜಿಸೋಣ ದ್ವೇಷ

ಕಳಚೋಣ ಕೆಟ್ಟ ವೇಷ|

ಮಾಡೋಣ ಒಳ್ಳೆಯ

ಗುಣಗಳ, ಒಳ್ಳೆಯವರ

ಸತ್ಸಂಗ ಸಮಾವೇಶ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಯುಗಾದಿ ಹಬ್ಬದ ಶುಭಾಶಯಗಳು


 


ಕಳೆದು ಹೋಗಿರುವ 
ಶಾರ್ವರಿ ನಾಮ ಸಂವತ್ಸರದಿ
ಬೇವಿಗಿಂತ ಬೆಲ್ಲವನೇ
ಹೆಚ್ಚು ನೀಡಿ ಕೊರೋನದೊಂದಿಗೆ
ಬಾಧಿಸಿತು ಎಲ್ಲರ |
ಬರುವ ನೀನಾದರೂ 
ಸಕಲರಿಗೆ ನೆಮ್ಮದಿಯ ಕರುಣಿಸು
ಓ  ಪ್ಲವನಾಮಸಂವತ್ಸರ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ