27 ಜನವರಿ 2021

ಸಿಹಿಜೀವಿಯ ಹಾಯ್ಕುಗಳು

 ಹಾಯ್ಕುಗಳು 

ಗಾಳಿಗೂ ಕೋಪ

ತಿರ್ರನೆ ತಿರುಗಿದೆ

ಸುಂಟರಗಾಳಿ



ಸೂತ್ರದಾರನ

ಗಾಳಿಪಟ ಹಾರಾಟ

ಗಗನಚುಂಬಿ 



ಜೀವಾನಿಲವು

ರೊಚ್ಚಿಗೆದ್ದಿದೆ ನೋಡು

ಸುಂಟರಗಾಳಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಸಿಹಿಜೀವಿಯ ಹನಿ

 *ಸಿಹಿಜೀವಿಯ ಹನಿ*


ಅಧಿಕಾರ ,ಅಂತಸ್ತು

ಸಂಪತ್ತು, ಅದೃಷ್ಟದಿಂದ

ಲಭಿಸಿದರೆ ಏರುವುದು

ಮಧ| 

ನಮ್ಮ ಬುದ್ಧಿವಂತಿಕೆಯಿಂದ

ಕಷ್ಟಪಟ್ಟು ಗಳಿಸಿದ 

ಅಲ್ಪದರಲ್ಲೂ ಸಿಗುವುದು

ಆನಂದ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


25 ಜನವರಿ 2021

ಮತದಾನ ಕುರಿತ ೫ ಹನಿ

 *ರಾಷ್ಟ್ರೀಯ ಮತದಾರರ ದಿನದ ಕುರಿತಾದ ಸಿಹಿಜೀವಿ ಯ ಹನಿಗಳು*



ಮಾರಿಕೊಳ್ಳದಿರು

ನೋಟಿಗಾಗಿ ನಿನ್ನ

ಓಟನ್ನು |

ಅರ್ಹ ಅಭ್ಯರ್ಥಿಗೆ

ತಪ್ಪದೇ ಒತ್ತು

ಇ. ವಿ .ಎಮ್ 

ಬಟನ್ನು ||



ಮಾಡೋಣ ನಾವೆಲ್ಲರೂ

ಕಡ್ಡಾಯವಾಗಿ 

ಮತದಾನ|

ಎತ್ತಿ ಹಿಡಿಯೋಣ

ನಮ್ಮ ಸಂವಿಧಾನ||




ನಿಮ್ಮ ಮತವನ್ನು

ಯಾರಿಗೂ

ಮಾರಬೇಡಿ|

ಆಮಿಷಗಳಿಗೆ ಮರುಳಾಗಿ

ಯಾಮಾರಬೇಡಿ||




ಮತದಾನ ಮಾಡಿ,

ಮಾಡಿದರೆ ನಮ್ಮ

ಕರ್ತವ್ಯ|

ಸುಂದರವಾಗುವುದು

ನಮ್ಮ ಭವಿತವ್ಯ||



ತಪ್ಪದೇ ನಾವು

ಚಲಾವಣೆ ಮಾಡಿದರೆ

ನಮ್ಮ ಮತ|

ಮುಂದೆ ನಮ್ಮ

ನಾಡಿಗಾಗುವುದು ಹಿತ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ





ವಿಜಯನಗರ ವೈಭವ

 *ವಿಜಯ ನಗರ ವೈಭವ*


ವಿಜಯನಗರದ ಸುವರ್ಣಯುಗ

ಅಂತ್ಯವಾಗಲು ಸಾಕ್ಷಿಯಾಗಿತ್ತು

ಅಂದು ತಾಳಿಕೋಟೆ|

ಗಣರಾಜ್ಯೋತ್ಸವ  ದಂದು 

ಸ್ತಬ್ಧಚಿತ್ರವಾಗಿ ಮತ್ತೆ  ಭಾರತಕ್ಕೆ

ವಿಜಯನಗರ ವೈಭವ ನೋಡಲು

ಸಾಕ್ಷಿಯಾಗಲಿದೆ ಕೆಂಪುಕೋಟೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


(ಇಂದು ತಾಳಿಕೋಟೆ ಕದನಕ್ಕೆ ೪೫೬ ವರ್ಷ)

22 ಜನವರಿ 2021

ಬುದ್ದಿವಾದ .ಹನಿ

 ಬುದ್ದಿವಾದ


ಎಲ್ಲರನೂ ಕರೆದು

ಹೇಳುತ್ತಿತ್ತು ನಾನು

ಸುಂದರ, ಹೊಚ್ಚ

ಹೊಸದು, 

ಮನಮೋಹಕ ಎಂದು

ಚಿಗುರು|

ಬೀಗದಿರು, ಶಾಶ್ವತವಲ್ಲ

ನಿನ್ನ ರೂಪ, ಸೌಂದರ್ಯ.

ಬುದ್ದಿ ಹೇಳಿತು 

ಬೇರು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ