25 ಜನವರಿ 2021

ವಿಜಯನಗರ ವೈಭವ

 *ವಿಜಯ ನಗರ ವೈಭವ*


ವಿಜಯನಗರದ ಸುವರ್ಣಯುಗ

ಅಂತ್ಯವಾಗಲು ಸಾಕ್ಷಿಯಾಗಿತ್ತು

ಅಂದು ತಾಳಿಕೋಟೆ|

ಗಣರಾಜ್ಯೋತ್ಸವ  ದಂದು 

ಸ್ತಬ್ಧಚಿತ್ರವಾಗಿ ಮತ್ತೆ  ಭಾರತಕ್ಕೆ

ವಿಜಯನಗರ ವೈಭವ ನೋಡಲು

ಸಾಕ್ಷಿಯಾಗಲಿದೆ ಕೆಂಪುಕೋಟೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


(ಇಂದು ತಾಳಿಕೋಟೆ ಕದನಕ್ಕೆ ೪೫೬ ವರ್ಷ)

22 ಜನವರಿ 2021

ಬುದ್ದಿವಾದ .ಹನಿ

 ಬುದ್ದಿವಾದ


ಎಲ್ಲರನೂ ಕರೆದು

ಹೇಳುತ್ತಿತ್ತು ನಾನು

ಸುಂದರ, ಹೊಚ್ಚ

ಹೊಸದು, 

ಮನಮೋಹಕ ಎಂದು

ಚಿಗುರು|

ಬೀಗದಿರು, ಶಾಶ್ವತವಲ್ಲ

ನಿನ್ನ ರೂಪ, ಸೌಂದರ್ಯ.

ಬುದ್ದಿ ಹೇಳಿತು 

ಬೇರು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನ ಮರಳೋ ... ಜಾತ್ರೆ ಮರಳೋ .ಕವನ


 *ಜನ ಮರಳೋ ಜಾತ್ರೆ ಮರಳೋ*


ಈಗೀಗ ಅವನ ನೋಡಿ

ಇವನು ,ಇವನ ನೋಡಿ

ಅವರು ಮನೆಯಲ್ಲಿ ಶುದ್ದ

ನೀರು, ಎಳನೀರು‌ ಉಚಿತವಾಗಿ

ಸಿಗುತ್ತಿದ್ದರೂ ದುಬಾರಿ ಹಣ ತೆತ್ತು

ಕುಡಿಯಲಾರಂಭಿಸಿದ್ದೇವೆ  ಕೋಕ್

ಪೆಪ್ಸಿ, ಅದೂ.. ಇದು..‌.


ಈಗೀಗ ಮನೆಯಲ್ಲಿ ಸಿರಿಧಾನ್ಯದ 

ಆರೋಗ್ಯಕ್ಕೆ ಪೂರಕವಾದ ಆಹಾರ

ಲಭ್ಯವಿದ್ದರೂ ಹುಡುಕಿಕೊಂಡು

ಹೋಗಿ ತಿನ್ನುತ್ತಿರುವೆವು ಫಿಜಾ, ಬರ್ಗರ್, ಗೋಬಿ ಮಂಚೂರಿ ಅದೂ.. ಇದು....


ಈಗೀಗ ಸಾಂಪ್ರದಾಯಿಕ 

ಉಡುಗೆಗಳನ್ನು ಕಡೆಗಣಿಸಿ

ಪ್ಯಾಶನ್ ಹೆಸರಲ್ಲಿ  ಅರೆಬರೆ

ಬಟ್ಟೆಗಳನ್ನು ತೊಡುತ್ತಿಹೆವು

ಮಿಡಿ ,ಮ್ಯಾಕ್ಸಿ ಅದೂ... ಇದು...


ಮನೆಯಲ್ಲಿ ಬಳಸದೇ ಬಿದ್ದ

ನೂರಾರು ವಸ್ತುಗಳಿದ್ದರೂ

ಕೊಳ್ಳುಬಾಕತನದಿಂದ 

ಖರೀದಿಸಲು ಅಲೆದಾಡುತ್ತಿರುವೆವು

ಎಡತಾಕುತ ,ಮಾಲ್ .ಮಾರ್ಟ್,

ಸೂಪರ್ ಬಜಾರ್ ಅದೂ.. ಇದು...


ಯಾರಿಗೂ ಚಿಂತನ ಮಂಥನ

ಮಾಡಲು ಪುರುಸೊತ್ತಿಲ್ಲ ಈಗೇನಿದ್ದರೂ

ಜನಮರಳೋ.. ಜಾತ್ರೆ ಮರಳೋ ...


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

21 ಜನವರಿ 2021

ಮಾಡೋಣ ಧ್ಯಾನ ಕವನ


 *ಮಾಡೋಣ ಧ್ಯಾನ*


ಬಾಹ್ಯ ಸೌಂದರ್ಯದ

ಜೊತೆಗೆ ಆಂತರಿಕ ಸೌಂದರ್ಯ

ವೃದ್ದಿಗೊಳ್ಳಲು ನಾವೆಲ್ಲರೂ

ಮಾಡೋಣ ಧ್ಯಾನ.


ಆಧುನಿಕ ಜೀವನದಿ

ಅಡಿಗಡಿಗೆ ಒತ್ತಡ 

ಒತ್ತಡ ನಿವಾರಣೆಗೆ

ಮಾಡೋಣ ಧ್ಯಾನ.


ಮಾತೆತ್ತಿದರೆ ದೂರ್ವಾಸರು

ಕೋಪ ನಿಯಂತ್ರಣ

ಮಾಡಿಕೊಳ್ಳಲು

ಮಾಡೋಣ ಧ್ಯಾನ.


ಐಹಿಕ ಸುಖದಿ ಬಿದ್ದು

ಒದ್ದಾಡುವುದು ಸಾಕು

ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು

ಮಾಡೋಣ ಧ್ಯಾನ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

20 ಜನವರಿ 2021

ನೀನೂ ಅತ್ತೆಯಾಗುವೆ .ಕವನ

 

*ನೀನೂ ಅತ್ತೆಯಾಗುವೆ*


ಮುನಿಯಬೇಡ ನಿಂದಿಸಬೇಡ

ನೀ ನನ್ನ ಮಗನ ಮಡದಿ

ತೆಗಳಬೇಡ ಕೊಂಕುನುಡಿಯ

ಬೇಡ ನೀನಿರು ಮುದದಿ.


ಮಗನ ಚೆನ್ನಾಗಿ ನೋಡಿಕೊ

ಮೊಮ್ಮಕ್ಕಳ ಲಾಲಿಸು

ನಾ ಬಿದ್ದು ಹೋಗುವ ಮರ

ಹಿರಿಯರ ಮಾತನು ಪಾಲಿಸು.



ಪ್ರಾಯ  ಹೀಗೆ ಇರುವುದೆಂದು

ಭ್ರಮಿಸಿ ಹಿಗ್ಗಬೇಡ 

ಕೋಲಿಡಿಯುವ ಕಾಲ 

ನಿನಗೂ ಬರುವುದು ನೋಡಾ 


ಕೈಲಾಗದವಳು ಅಶಕ್ತೆ ಎಂದು

ಹಂಗಿಸಬೇಡ ಮತ್ತೆ ಮತ್ತೆ 

ಮುಂದೊಂದು ದಿನ

ನೀನೂ ಆಗೇ ಆಗುವೆ ಅತ್ತೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ