20 ಜನವರಿ 2021

ಹನಿಗಳ ಲೀಲೆ .ಕವನ


 *ಹನಿಗಳ ಲೀಲೆ*


ಚುಮು ಚುಮು ಚಳಿಯಲಿ

ಬೆಳಗಿನ ವೇಳೆಯಲಿ

ಮಂಜಿನ ಹನಿಗಳ ಲೀಲೆ

ಮನಕೆ ನೀಡುವುದು ಮುದ.


ಗರಿಕೆಗಳ ಮೇಲಿನ ಹನಿಗಳು

ದಿನನ ಕಿರಣಗಳ ನೋಡಿ

ನಾಚಿ ಕಣ್ಮರೆಯಾಗುವುದನ್ನು

ನೋಡುವುದೇ ಅಂದ .


ಮರದಡಿಯಲಿ ನಲ್ಲೆಯ ಜೊತೆ

ನಿಂತಾಗ ,ಚಿಗುರೆಲೆಯ ಮೇಲಿನ ಹನಿಗಳು ಪನ್ನಿರಂತೆ ನಮ್ಮ ಮೇಲೆ

ಬಿದ್ದ ನೆನಪ ನೆನೆಯುವುದೇ ಚೆಂದ 


ಮಂಜಿನ ಹನಿಗಳ ಲೀಲೆಗಳು

ಒಂದೇ ಎರಡೇ? ನಮ್ಮ ಜೀವನಕೆ

ಸ್ಪೂರ್ತಿಯಾಗುವವು ಈ 

ಮಂಜಿನ ಹನಿಗಳು ಎಂದೆಂದೂ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


19 ಜನವರಿ 2021

ಬಲ್ಲವರಾರು?

 *ಒಳಿತಿಗೋ ಕೆಡುಕಿಗೋ?*


ಕಡಲಿನಾಟವ ಬಲ್ಲವರಾರು?

ಕಡಲ ಆಳವ ತಿಳಿದವರಾರು?


ಒಮ್ಮೊಮ್ಮೆ ಶಾಂತ

ಮರುಘಳಿಗೆ ರೌದ್ರ

ತೀರದಿ ತೀರದ ಅಲೆಗಳು.

ಆಳದಿ ಮುತ್ತು ರತ್ನಗಳ

ಸಂಪತ್ತುಗಳು.


ಜೀವನಾಧಾರದ ಮೂಲ

ಕೆಲವೊಮ್ಮೆ ಜೀವನವನ್ನೇ

ನಾಶ ಮಾಡುವ ಸುನಾಮಿಯ

ಕಾರಣಕರ್ತ .


ಅಗಾಧ ಜಲರಾಶಿಯ ನೆಲೆ 

ಒಂದಡೆ,ಕೊಂದು ಬಿಡುವೆ

ಜೀವರಾಶಿಗಳ ಕ್ಷಣಾರ್ಧದಲ್ಲಿ

ಇನ್ನೂಂದೆಡೆ, ಅರ್ಥವಾಗಿಲ್ಲ

ನನಗೀ ಕಡಲಿನಾಟ , 

ಒಳಿತಿಗೋ?ಕೆಡುಕಿಗೋ ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 ಜನವರಿ 2021

ಸೀಡಿ .ಹನಿ

 *ಸೀಡಿ*


ಇತ್ತೀಚಿಗೆ

ಕೆಲ ಶಾಸಕರು

ಹೇಳುತ್ತಿದ್ದಾರೆ

ನಮ್ಮ ಬಳಿ ಇದೆ

ಒಂದು ಸಿ. ಡಿ |

ಅದರ ಅರ್ಥ ಇಷ್ಟೇ

ನಮ್ಮನ್ನೂ ಸುಮ್ಮನೆ

ಮಂತ್ರಿಗಳಾಗಿ

ಮಾಡಿಬಿಡಿ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೧೭/೧/೨೧


ಪ್ರರ

ಭಾರ .ಹನಿ

 ಸಿಹಿಜೀವಿಯ ಹನಿ 


*ಭಾರ*



ಹಿಂದಿನ ಕಾಲದಲ್ಲಿ

ಮೈತುಂಬಾ ಬಟ್ಟೆಗಳನ್ನು

ಹಾಕಿಕೊಂಡು 

ಸುಸಂಸ್ಕೃತವಾಗಿ

ಮಾಡಿಕೊಳ್ಳುತ್ತಿದ್ದರು

ಅಲಂಕಾರ |

ಇಂದಿನ ಆಧುನಿಕತೆಯಲ್ಲಿ

ಸಾಧ್ಯವಾದಷ್ಟು ಕಡಿಮೆ

ಬಟ್ಟೆ ತೊಟ್ಟವರು 

ನಮ್ಮನ್ನೇ ಕೇಳುವರು

ಹೊರುವುದೇಗೆ ಈ

ಬಟ್ಟೆಯ ಭಾರ||





*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ