12 ಜನವರಿ 2021

ಸ್ವಾಮಿ ವಿವೇಕಾನಂದ . ಹನಿ


 *ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ*



ಸಿಹಿಜೀವಿಯ ಹನಿ



ಕಾಡು ಹರಟೆಯಲಿ 

ಕಾಲಹರಣ ಮಾಡುತ

ಪೋಲಾಗುತಲಿದೆ

ಯುವಕರ ಅನಂತ ಶಕ್ತಿಯ ಅಮೂಲ್ಯವಾದ ದಿನಗಳು|

ಇಂತಹ ಮೂಢ 

ಮತಿಗಳಿಗೆ 

ಆದರ್ಶವಾಗಲಿ  ಸ್ವಾಮಿ ‌ವಿವೇಕಾನಂದರ  ಉದಾತ್ತ ಚಿಂತನೆಗಳು||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

09 ಜನವರಿ 2021

ಭಾಗ್ಯವಂತರು . ಹನಿ

 *ಸಿಹಿಜೀವಿಯ ಹನಿ*


*ಭಾಗ್ಯವಂತರು*


ನಾಲಿಗೆಯ ಮೇಲೆ

ಹಿಡಿತವಿಲ್ಲದಿರೆ ನಾವು 

ರೋಗವಂತರು ಮತ್ತು

ಜಗಳಗಂಟರು|

ಅದರ ಮೇಲೆ

ಹಿಡಿತವಿದ್ದರೆ 

ನಾವಾಗುವೆವು 

ಆರೋಗ್ಯವಂತರು

ಭಾಗ್ಯವಂತರು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

06 ಜನವರಿ 2021

ಹೆಜ್ಜೆ ಇಡು ಕವನ.

 

*ಹೆಜ್ಜೆ ಇಡು*


ಕವನ 



ಇನ್ನೆಷ್ಟು ದಿನ 

ಕತ್ತಲಲೇ ಕಳೆಯುವೆ?

ತಮವೇ ಜೀವನವೆಂದು

ಬದುಕುತಿರುವೆ. ಇನ್ನಾದರೂ 

ಹೆಜ್ಜೆ ಇಡು ಬೆಳಕಿನೆಡೆಗೆ.


ಇನ್ನೆಷ್ಟು ದಿನ 

ಅಜ್ಞಾನದಿ ತೊಳಲುವೆ?

ಅಂಧಕಾರದಲೇ ಬಾಳುವೆ

ಜ್ಞಾನದ ಜ್ಯೋತಿಯು

ನಿನಗಾಗಿ ಕಾದಿದೆ.

ಹೆಜ್ಜೆ ಇಡು ಜ್ಞಾನದೆಡೆಗೆ.


ಇನ್ನೆಷ್ಟು ದಿನ 

ಲೌಕಿಕವೇ ಜೀವನವೆಂದು

ಮಬ್ಬಿನಲಿ ಒದ್ದಾಡುವೆ?

ಪಾರಮಾರ್ಥದಲಿ ಒಲವಿರಲಿ 

ಹೆಜ್ಜೆ ಇಡು ಆತ್ಮಸಾಕ್ಷಾತ್ಕಾರದೆಡೆಗೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ