27 ನವೆಂಬರ್ 2020

ಅಸಮಾನ


 *ಅಸಮಾನ*


ನಮ್ಮೆಲ್ಲರ 

ಕೈಬೆರಳುಗಳು 

ಸಮವಿಲ್ಲ|

ಅವುಗಳು 

ಒಗ್ಗೂಡಿದ

ಮುಷ್ಟಿಗೆ 

ಯವುದೂ

ಸಮವಿಲ್ಲ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


08 ನವೆಂಬರ್ 2020

ಬೆಳಕು ಹನಿ


   *ಬೆಳಕು*


   ಆತುರದ ನಿರ್ಧಾರವು ತಳ್ಳುವುದು

   ಬದುಕನ್ನು  ಬೆಂಕಿಗೆ |

   ಅರಿತು ಮಾಡುವ ನಿರ್ಧಾರ

   ಬೆಳಕು ನೀಡುವುದು ಬದುಕಿಗೆ ||

   

*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

   

25 ಅಕ್ಟೋಬರ್ 2020

ಆಯುಧಗಳು ( ಹನಿ)


 #ಸಿಹಿಜೀವಿಯ_ಚುಟುಕು


ಈಗಿನ ಕರೋನ

ಕಾಲದಲ್ಲಿ ಮಾಸ್ಕ್ ,ಗ್ಲಾಸ್, 

ಸ್ಯಾನಿಟೈಸರ್ ಗಳೆ 

ನಮ್ಮ ಆಯುಧಗಳು|

ಇವನ್ನು ಮರೆತರೆ 

ನಮ್ಮ ಪೋಟೋಗೆ

ಹಾರ ಹಾಕುವರು

ನಮ್ಮ ಸಂಬಂದಿಗಳು||


#ಸಿಹಿಜೀವಿ


ಸಿ ಜಿ ವೆಂಕಟೇಶ್ವರ

ತುಮಕೂರು

ಪ್ರಜಾಪ್ರಗತಿ ೨೫/೧೦/೨೦