06 ಜನವರಿ 2019

ತಪಾಸಣೆ ( ನ್ಯಾನೋ ಕಥೆ)

      *ತಪಾಸಣೆ*(ನ್ಯಾನೋ ಕಥೆ)

"ಅಯ್ಯೋ ಇವತ್ತೇ ಹೆಲ್ಮೆಟ್ ಬಿಟ್ಟು ಬಂದೆನಲ್ಲಪ್ಪಾ ಬಿತ್ತು ಪೈನ್ " ಎಂದು ಬಾಲಜಿ ಮನದಲ್ಲೇ  ಗೊಣಗಿಕೊಂಡು   ಬೈಕ್ ನಿಲ್ಲಿಸಿದಾಕ್ಷಣ ಪೊಲೀಸ್ ಬಂದು ಬಾಯಲ್ಲಿ ಅದೇನೋ ಮಿಷನ್ ಇಟ್ಟು "ಜೋರಾಗಿ ಊದು" ಎಂದರು .
" ಸರಿ ನೀನೇನೂ ಕುಡಿದಿಲ್ಲ ಹೊರಡು" ಅಂದ ಪೊಲೀಸ್ ನ ಮಾತು ಕೇಳಿ ನಿಟ್ಟುಸಿರು ಬಿಟ್ಟು ಗಾಡಿ ಸ್ಟಾರ್ಟ್ ಮಾಡಿ ನೋಡಿದರೆ ಪೊಲೀಸ್ ಸ್ಟೇಷನ್ ಎದುರಿಗೆ "ಮಣಿಕಂಠ ಬಾರ್ ಅಂಡ್ ರೆಸ್ಟೋರೆಂಟ್" ಎಂಬ ಬೋರ್ಡ್ ನೇತಾಡುತ್ತಿತ್ತು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಜನವರಿ 2019

ಪರಿವರ್ತನೆ ( ನ್ಯಾನೋ ಕಥೆ)

           *ನ್ಯಾನೋ ಕಥೆ*

*ಪರಿವರ್ತನೆ*

ಆತ್ಮೀಯ ಗೆಳೆಯ ರಮೇಶ್ ನೋಡಲು ಬೆಳಿಗ್ಗೆ ಒಂಭತ್ತಕ್ಕೆ ರಮೇಶ್ ನ ಮನೆಗೆ ಹೋದ . "ಇನ್ನೂ ಮಲಗಿದ್ದೀಯಲ್ಲಯ್ಯ ಸೂರ್ಯ ವಂಶಸ್ತ ನಲವತ್ತು ವರ್ಷ ದಾಟಿದ ಮೇಲಾದರೂ ಬೇಗ ಎದ್ದು ವಾಕ್ ಗೀಕ್ ಮಾಡು"ಎನ್ನವಷ್ಟರಲ್ಲಿ " ನನಗೇನಾಗಿದೆ  ನನದು ಸ್ಟೀಲ್ ಬಾಡಿ" ಎಂದು ರಮೇಶ್  ಉಡಾಪೆಯಿಂದ ಉತ್ತರಿಸಿದ .
ಒಮ್ಮೆ ರಮೇಶ್ ನ  ಕೈಗೆ  ಗಾಯವಾಗಿ ತಿಂಗಳಾದರೂ ಮಾದಿರಲಿಲ್ಲ . ಒಂದು ಮುಂಜಾನೆ ಆದರ್ಶ್ ವಾಕ್  ಮಾಡುವಾಗ ಟ್ರಾಕ್ ಸೂಟ್ನಲ್ಲಿ  ಗೆಳೆಯ ರಮೇಶ್ ನನ್ನು ಕಂಡ ಆದರ್ಶನಿಗೆ ಎಲ್ಲಾ ಅರ್ಥವಾಯಿತು. ಗೆಳೆಯನೊಡನೆ ಹೆಜ್ಜೆ ಹಾಕಿದ .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಜನವರಿ 2019

ಮಾದರಿ (ನ್ಯಾನೋ ಕಥೆ) ಹನಿ‌ ಹನಿ ಇಬ್ಬನಿ ಬಳಗದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತಮ ಎಂದು ಪುರಸ್ಕಾರ ಪಡೆದ ಕಥೆ

             ನ್ಯಾನೋ ಕಥೆ

*ಮಾದರಿ*

"*ಮಕ್ಕಳು ಸಂಸ್ಕಾರ ಹೊಂದಿರಬೇಕು, ಸ್ವಚ್ಚತೆಯನ್ನು ಕಾಪಡಬೇಕು , ನಮ್ಮ ಪರಂಪರೆಯನ್ನು ಉಳಿಸಿ  ಬೆಳೆಸಬೇಕು*" ಎಂದು ಸ್ವಾಮೀಜಿಗಳು  ಪ್ರವಚನ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದರು .ಭಕ್ತರು ಕೊಟ್ಟ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ಅಲ್ಲೇ ಬಿಸಾಡಿ ಮುಂದೆ ನಡೆದರು.ಐದನೆಯ ತರಗತಿ ಓದುವ ಸುಲೋಚನ ಎಂಬ ಬಾಲಕಿ ಆ ಸಿಪ್ಪೆ ಎತ್ತಿ ಕಸದ ಡಬ್ಬಿಗೆ ಹಾಕಿದಳು .

*ಸಿ. ಜಿ ವೆಂಕಟೇಶ್ವರ*
*ಗೌರಿಬಿದನೂರು*

30 ಡಿಸೆಂಬರ್ 2018

ಭಾರತದ ನಡಿಗೆ ಸ್ವಚ್ಚತೆಯ ಕಡೆಗೆ (ಲೇಖನ)

  *ಭಾರತದ ನಡಿಗೆ*
*ಸ್ವಚ್ಛತೆಯ ಕಡೆಗೆ*

ಮಾಲಿನ್ಯದ ವಿರುದ್ಧ ಪದವಾದ ಸ್ವಚ್ಚತೆಯು ಇಂದು ‌ಎಲ್ಲಾ ಕಡೆ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ.
ನಮ್ಮ ಸುತ್ತ ಮುತ್ತ ಇರುವ ಮನೆ ಪರಿಸರ ಸ್ವಚ್ಛ ಮಾಡುವುದು ನಮ್ಮ ಆದ್ಯತೆ ಆಗಿರಬೇಕು .ಹಾಗೆ ನೋಡಿದರೆ ಇಂದು ಮಾತ್ರ ಸ್ವಚ್ಚತಾ ಪರಿಕಲ್ಪನೆ ಇಲ್ಲ ಹಿಂದಿನಿಂದಲೂ ನಮ್ಮ ಪೂರ್ವಿಕರು ಸ್ವಚ್ಛಗೊಳಿಸುವ ಕಾಯಕ ಮಾಡಿದರು ಗಾಂಧೀಜಿಯವರು ಸಹ ಸ್ವಚ್ಛತೆ ಆಂದೋಲನದ ಮೂಲಕ ಸ್ವಚ್ಚತಾ ಅಭಿಯಾನ ಆರಂಬಿಸಿದರು.
ಪ್ರಸ್ತುತ ಪ್ರಾಧಾನಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿ ದೇಶವಾಸಿಗಳಲ್ಲಿ ನೈರ್ಮಲ್ಯದ ಮಹತ್ವ ಸಾರಿ ಜನಜಾಗೃತಿ ಮೂಲಕ ಕಾರ್ಯ ಮಾಡಿದ್ದಾರೆ.
ಕೇವಲ ಭೌತಿಕ ಸ್ವಚ್ಛಗೊಳಿಸುವ ಕಾರ್ಯ ಆದರೆ ಸಾಲದು ಮಾನಸಿಕ ಸ್ವಚ್ಛಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗುತ್ತದೆ. ಆದುನಿಕ ಜೀವನದಲ್ಲಿ ನಾವು ದ್ವೇಷ ,ಅಸೂಯೆ, ಹಿಂಸೆ ,ಕ್ರೌರ್ಯ, ಅನೈತಿಕತೆ ,ಯುದ್ಧ, ಸ್ವಾರ್ಥ ಇವುಗಳು ತಾಂಡವ ಆಡುತ್ತಿವೆ .ಈ ಎಲ್ಲಾ ಪ್ರಕ್ರಿಯೆ ಗಳು ನಮ್ಮ ಮನದಲ್ಲಿ ಸುಳಿದು ಅವು ಮನುಕುಲದ ನಾಶಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಗಾಗ ಇಂತಹ ಮಾನಸಿಕ ಮಾಲಿನ್ಯ ಕಾರಕಗಳನ್ನು  ನಮ್ಮ ಮನಸ್ಸಿನಲ್ಲಿ ಬಂದಾಗ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಲಗಬೇಕಿದೆ .ಆಗ ಮಾತ್ರ ಸಂಪುರ್ಣವಾದ ಸ್ವಚ್ಛಗೊಳಿಸುವ ಕಾರ್ಯ ಆಗಿ ಜಗತ್ತಿನಲ್ಲಿ ನೈರ್ಮಲ್ಯದ ವಾತಾವರಣ ಉಂಟಾಗಿ ಎಲ್ಲೆಡೆಯೂ ನಂದನವನವೇ ಕಾಣುವುದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಡಿಸೆಂಬರ್ 2018

ನಮನ ( ರಸ ಋಷಿಗೆ ನುಡಿ ನಮನ)

           

*ನಮನ*

ಜಗದ ಕವಿ ಯುಗದ ಕವಿ
ನಿಮಗೆ ನಮನ
ಜನಮಾನಸದಿ ನೆಲಸಿದ
ಅಕ್ಷರ ಮಾಂತ್ರಿಕರೆ
ನಿಮಗೆ ನಮನ

ಪ್ರಕೃತಿಯ ಆರಾಧಿಸಿ
ವಿಕೃತಿಯ ವಿರೋಧಿಸಿ
ಸಮಬಾಳು ಸಮಪಾಲು
ಬೋಧಿಸಿದ ರಸ ಋಷಿಯೆ
ನಿಮಗೆ ನಮನ

ನೇಗಿಲ ಯೋಗಿಗೆ ನಮಿಸಿ
ವಿವೇಕಾನಂದರ ಭಜಿಸಿ
ಕೊಳಲನಾದವ ಸುರಿಸಿ
ಪಕ್ಷಿಕಾಶಿಯ ತೋರಿದ
ರಾಷ್ಟ್ರ ಕವಿಯೇ ನಿಮಗೆ ನಮನ

ಮಲೆಗಳಲಿ ಮದುಮಗಳ ತೋರಿಸಿ
ರಾಮಯಣದ ದರ್ಶನ ಮಾಡಿಸಿದ
ಕನ್ನಡಮ್ಮನ ಹೆಮ್ಮೆಯ ಕುವರ
ನಿಮಗೆ ನಮನ

ಕವಿಯಾಗಿ ,ಗುರುವಾಗಿ,ಪರಿಸರ
ಪ್ರಿಯಯೋಗಿಯಾಗಿ
ದಕ್ಷ ಆಡಳಿತ ಗಾರನಾಗಿ
ಜ್ಞಾನ ಪೀಠವ ಏರಿದರೂ
ವಿಶ್ವಮಾನವ ಸಂದೇಶ ನೀಡಿದ
ಅನಿಕೇತನ ಶಕ್ತಿಯೇ
ನಿಮಗೆ ನಮನ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*