26 ಜುಲೈ 2018

ಜೀವಿಸು ಖುಷಿಯಲಿ ( ಕವನ)

        *ಜೀವಿಸು ಖುಷಿಯಲಿ*

ಸುಂದರ   ಬದುಕು
ನಿನ್ನದೆ ಕೈಲಿದೆ
ಸಾಗು ಮುಂದೆ
ಸ್ಚರ್ಗವು ಕಾದಿದೆ

ಕಲ್ಲಿದೆ ಮುಳ್ಳಿದೆ
ನಿನ್ನಯ ದಾರಿಯಲಿ
ಅಂಜದೆ ಅಳುಕದೆ
ನುಗ್ಗು ಖುಷಿಯಲಿ

ನೂರಾರು ತಿರುವು
ಬಾಳಲಿ ಬರುವುದು
ವಿಶ್ವಾಸ ಇದ್ದರೆ
ದಾರಿಯು ಕಾಣುವುದು

ನೋವು ನಲಿವು
ಸಾಮಾನ್ಯ ಜಗದಲಿ
ಗೆಲ್ಲಲಿ ಸೋಲಲಿ
ಜೀವಿಸು ಖುಷಿಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



25 ಜುಲೈ 2018

ದೇಶಭಕ್ತಿ ( ನ್ಯಾನೋ ಕಥೆ)

                 *ನ್ಯಾನೋ ಕಥೆ*

*ದೇಶಭಕ್ತಿ*

ಶಾಲೆಯ ಬೆಳಗಿನ ಪ್ರಾರ್ಥನೆ ವೇಳೆಯಲ್ಲಿ ಎಲ್ಲಾ ಮಕ್ಕಳು ರಾಷ್ಟಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು  ಅಕ್ಕ ಪಕ್ಕದಲ್ಲಿ ನಡೆದಾಡುತ್ತಿದ್ದ ಸಾಮಾನ್ಯ ಜನರು ಕೆಲ ಕಾಲ ನಿಂತು ರಾಷ್ಟಗೀತೆಗೆ ಗೌರವ ಸೂಚಿಸಿದರು ಮಧ್ಯ ವಯಸ್ಕ ಒಬ್ಬ ವ್ಯಕ್ತಿ  ಮಾತ್ರ ರಾಷ್ಟಗೀತೆಗೆ ಗೌರವ ನೀಡದೆ   ನಡೆದು ಮಂದೆ ಹೋದರು ಆ ವ್ಯಕ್ತಿಯ ಗುರುತು ಹಿಡಿದ ಭಾರತಿ ಮನದಲ್ಲಿ ಅವರು ದೇಶಭಕ್ತಿಯ ಬಗ್ಗೆ ಕಳೆದ ದಿನ ಎರಡು ಗಂಟೆ ಮಾಡಿದ ಭಾಷಣ ನೆನಪಾಯಿತು ಅದರಲ್ಲೂ " ಎಂತಾ ಪರಿಸ್ಥಿತಿಯಲ್ಲೂ ದೇಶಭಕ್ತಿ ಮೆರಯಬೇಕು ನಮ್ಮ ರಾಷ್ಟ್ರಗೀತೆ ರಾಷ್ಟ್ರ ದ್ವಜಕ್ಕೆ ಗೌರವ ನೀಡಲೇಬೇಕು" ಈ ಶಬ್ಬಗಳು ಭಾರತಿಯ ಕಿವಿಯಲ್ಲಿ ಗುಯ್ ಗುಡುತ್ತಿದ್ದವು ,ಶಿಕ್ಷಕರು ಬೋಲೋಭಾರತ್ ಮಾತಾಕಿ ಎಂದಾಗ ಭಾರತಿಯು ಕೈಗಳನ್ನು ಮೇಲೆತ್ತಿ ಜೈ ಎಂದು ಹೆಮ್ಮೆಯಿಂದ ಹೇಳಿದಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 ಜುಲೈ 2018

ಗಜಲ್ ೩೯

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯
ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.
ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ
ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ
.
ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ನನ್ನ ಕವನ ವಾಚನ