24 ಮಾರ್ಚ್ 2022

ಪರಮಾಣು


 


ಪರಮಾಣು.

ಅರಿಯುವುದು ಹೇಗೆ
ಹರಿ ನಿನ್ನ ಮಹಿಮೆಯೆ
ಅರಿವಿಲ್ಲದವ ನಾನು|
‌ಸದಾ ನಿನ್ನ ಕೃಪೆಯಿರಲಿ
ಪರಮ ಆತ್ಮ
ನಾನೊಂದು ಪರಮಾಣು||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.


23 ಮಾರ್ಚ್ 2022

ಗುರಿ


 ಗುರಿ.


ಮನುಜನಾಗಿ ಹುಟ್ಟಿದ 

ಮೇಲೆ ಏನಾದರೂ

ಸಾಧಿಸಬೇಕಾದರೆ 

ಇರಲೇಬೇಕೊಂದು ಗುರಿ|

ಇಲ್ಲದಿದ್ದರೆ ನಾವು 

ತಿಂದುಂಡು ಕಾಲ ಕಳೆಯುತ್ತಾ

ಅಲೆದಾಡುತ್ತೇವೆ ಹಿಂಬಾಲಿಸಿದಂತೆ

ಒಂದನ್ನು  ಮತ್ತೊಂದು ಕುರಿ||

ಅಜ್ಞಾನದ ಗವಿ .

 

*ಇತಿಹಾಸ*

ಪ್ರಕೃತಿಯ ಕುಂಚದಿ ಚಿತ್ರಿಸಿ

ಜನರ ಅನಂದ ಅರಳಿಸುವ

ಮಹಾನ್ ಕಾಲಾಕಾರನಾಗಿದ್ದ 

ಅಡಾಲ್ಫ್‌ ಹಿಟ್ಲರ್|

ಪರಿಸ್ಥಿತಿ, ಪ್ರಚೋದಿತ ಪರಿಸರ ,ಅಜ್ಞಾನ

ಮುಂತಾದವುಗಳಿಂದ 

ಇತಿಹಾಸದಲ್ಲಿ ಸ್ಥಾನ 

ಪಡೆದ ಜಗದ ಕ್ರೂರ ಕಿಲ್ಲರ್||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


21 ಮಾರ್ಚ್ 2022

ಕವಿತೆ .ಭಾಗ್ಯದೇವತೆ.


 

ಕವಿತೆ
ನೀನೆನ್ನ ಭಾಗ್ಯದೇವತೆ.

ಮನದಲಿರುವ
ನೋವು ನಲಿವುಗಳಿಗೆ
ಪದಗಳಾಗುವೆ.

ನೋಡಿದ ಒಳಿತು
ಕೆಡುಕುಗಳನು
ಚಿತ್ರಿಸಲು ನೆರವಾಗುವೆ.

ಸಮಾಜದ ಓರೆಕೋರೆಗಳ
ತಿಳಿದು ತಿಳಿಸಲು
ಮಾಧ್ಯಮವಾಗುವೆ .

ನೀನಿಲ್ಲದಿರೆ
ನನಗೇಕೋ ದುಗುಡ
ನೀ ನನ್ನಲೇ ಸದಾ
ನೆಲೆಸೆಂದು ಬಯಸುವೆ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.