ಭಾರತದಲ್ಲಿ ಬ್ರಿಟಿಷ್ ರ ಆಳುವಿಕೆ ಇದ್ದಾಗ ಬ0ಗಾಲ ದೇಶದಲ್ಲಿ ನಡೆದ ಒ0ದು ಸತ್ಯ ಘಟನೆ-
ಅಲ್ಲಿ ಕೊಲ್ಕತ್ತಾ ಪಟ್ಟಣಕ್ಕೆ ತಲುಪುವ ದೊಡ್ಡ ರೈಲು ಮಾರ್ಗ ಹಾದಿದೆ. ಮಾರ್ಗ ಮಧ್ಯ ಇರುವ ಚಿಕ್ಕ ನದಿಗೆ ಸೇತುವೆಯನ್ನು ಕಟ್ಟಲಾಗಿದೆ. ಆ ಸೇತುವೆ ಸಮೀಪ ನದಿಯ ದಡದಲ್ಲಿ ಬಡವರ ಒ0ದು ಗುಡಿಸಲು. ಅದರಲ್ಲಿ ಒಬ್ಬ ತಾಯಿ ಮಗಳು ವಾಸವಾಗಿದ್ದರು.ಅದು ಅರಣ್ಯ ಪ್ರದೇಶ.ಸಮೀಪದಲ್ಲಿ ಯಾವ ಗ್ರಾಮವೂ ಇರಲಿಲ್ಲ.
ಒ0ದು ರಾತ್ರಿ ಧಾರಾಕಾರ ಮಳೆ.ಒ0ದೆರಡು ತಾಸಿನ ನ0ತರ ಮಳೆ ಕಡಿಮೆಯಾಯ್ತು .ಅಷ್ಟೊತ್ತಿಗೆ ಗುಡಿಸಲೆಲ್ಲಾ ನೀರಾಯ್ತು .ಇರುವ ಒ0ದೆರಡು ಹಾಸಿಗೆ ಹೊದಿಕೆಗಳೂ ನೆನೆದವು.ಮಲಗುವಷ್ಟೂ ಒಣಗಿದ ಸ್ಥಳವಿರಲಿಲ್ಲ.ಮಧ್ಯದಲ್ಲಿ ಒ0ದು ಒಲೆಯನ್ನು ಹೊತ್ತಿಸಿ ಅದರ ಸುತ್ತ ತಾಯಿ ಮಗಳು ಕೂತಲ್ಲೇ ತೂಕಡಿಸುತ್ತಿದ್ದರು.ಇದ್ದಕ್ಕಿದ್ದ0ತೆ ಹೊರಗೆ ಭಯಂಕರ ಸದ್ದಾಯಿತು.
ಇದೇನಿದು ಎಂದು ಮಗಳು ಹೊರಗೆ ಬಂದು ನೋಡಿದಳು.ಮಿಂಚಿನ ಬೆಳಕಿನಲ್ಲಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದು ಬಿದ್ದದ್ದು ಕ0ಡಿತು !
ಮಗಳು ತಾಯಿಗೆ ಹೇಳಿದಳು, ಅಮ್ಮಾ ಇಷ್ಟರಲ್ಲೇ ಸಾವಿರಾರು ಜನರನ್ನು ತುಂಬಿಕೊ0ಡು ರೈಲು ಬರಲಿದೆ. ಈ ರಾತ್ರಿ ಅವರಿಗೆ ಸೇತುವೆ ಕುಸಿತದ್ದು ಕಾಣದೇ ಹೋದರೆ ಎ0ಥ ಭಯ0ಕರ ಅಪಘಾತವಾಗುತ್ತೆ ! ಇದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು. ತಾಯಿ ಹೇಳಿದಳು, ಹೌದು ಮಗಳೇ ನಾವೇನು ಮಾಡಬಲ್ಲೆವು ?
ಒ0ದು ಕಟ್ಟಿಗೆಗೆ ಬಟ್ಟೆಯನ್ನು ದೀವಟಿಗೆ ಮಾಡಿ ತೋರಿಸಬಹುದಲ್ಲಾ ! ಅ0ದಳು ಮಗಳು.
ಸರಿ ಮಗಳೇ , ಒಣಗಿದ ಬಟ್ಟೆ ಎಲ್ಲಿದೆ ? ಎ0ದಳು ತಾಯಿ.
ಅಮ್ಮಾ ನನ್ನ ಮೈಮೇಲಿರುವ ಬಟ್ಟೆಯು ಒಣದಾಗಿಯೇ ಇದೆಯಲ್ಲಾ ! ಎ0ದಳು ಮಗಳು
ಅವಳ ಹೃದಯ ಸಿರಿಗೆ ತಾಯಿ ತಕ್ಷಣ ಒಪ್ಪಿದಳು.ಮಗಳು ತನ್ನ ಮೈಮೇಲಿದ್ದ ಮಾನದ ಬಟ್ಟೆಯನ್ನು ಒ0ದು ಕಟ್ಟಿಗೆಗೆ ಕಟ್ಟಿ ಉರಿಸಿದಳು.ಆ ದೀವಟಿಗೆಯನ್ನು ಕೈಯಲ್ಲಿ ಹಿಡಿದು ತಾಯಿ ಮಗಳು ಕೂಡಿ ಕಾಣದ ಬ0ಧುಗಳ ಪ್ರಾಣವನ್ನು ಉಳಿಸಲು ರೈಲಿಗೆ ಎದುರಾಗಿ ದಾರಿಯನ್ನು ಹಿಡಿದು ನಡೆದರು.
ರೈಲು ಬರುವುದು ಒ0ದೆರಡು ನಿಮಿಷ ಉಳಿದಿತ್ತು.ಅಷ್ಟರಲ್ಲೇ ಕೈಯೊಳಗಿನ ದೀವಟಿಗೆ ನ0ದುವ0ತಾಯ್ತು .ತತ್ ಕ್ಷಣ ತಾಯಿ ತನ್ನ ಬಟ್ಟೆಯನ್ನೂ ದೀವಟಿಗೆಗೆ ಕಟ್ಟಿ ಉರಿಸಿ ಕೈಯಲ್ಲಿ ಹಿಡಿದು ಬೀಸಿದಳು.
ಚಾಲಕ ರೈಲು ನಿಲ್ಲಿಸಿದ. ಸೇತುವೆ ಬಿದ್ದು ಹೋಗಿರುವುದನ್ನು ನೋಡಿ ತಾಯಿ ಮಗಳ ತ್ಯಾಗಕ್ಕೆ ತಲೆಬಾಗಿದ.ರೈಲಿನಲ್ಲಿದ್ದ ಸಾವಿರ-ಸಾವಿರ ಜನರು ಆ ತಾಯಿ ಮಗಳಿಗೆ ಬಟ್ಟೆಯನ್ನು ಉಡಿಸಿ ಗೌರವಿಸಿದರು.ಹಾಡಿ ಹರಸಿದರು.ಆಗಿನ ಆ0ಗ್ಲ ಅಧಿಕಾರಿಗಳೂ ಆ ತಾಯಿ ಮಗಳನ್ನು ಸ0ತಸದಿ0ದ ಸತ್ಕರಿಸಿದರು..
ಎಂತಹ ತ್ಯಾಗ ಮತ್ತು ಸಹಕಾರದ ಮನೋಭಾವದ ಜನರು ನಮ್ಮ ದೇಶದಲ್ಲಿ ಇದ್ದರು ಎಂಬುದು ನಮ್ಮ ಹೆಮ್ಮೆ.
No comments:
Post a Comment