ಅಂತರ್ಮುಖಿಗಳಿಗೊಂದು ದಿನ
ಕೆಲವರು ಮಾತನಾಡುತ್ತಿದ್ದರೆ ನಾನ್ ಸ್ಟಾಪ್... ಅಂತಹ ವ್ಯಕ್ತಿಗಳ ಕಂಡು ಅವರು ಕಲ್ಲನ್ನು ಬೇಕಾದರೂ ಒಮ್ಮೆ ಮಾತನಾಡಿಸಬಲ್ಲರು ಎಂದು ಜೋಕ್ ಮಾಡುವುದುಂಟು. ಇದಕ್ಕೆ ವಿರುದ್ಧವಾಗಿ ಕೆಲವರನ್ನು ಎಷ್ಟು ಮಾತನಾಡಿಸಿದರೂ ಅವರ ಕಡೆಯಿಂದ ಬೇಗ ಪ್ರತಿಕ್ರಿಯೆ ಬರುವುದೇ ಇಲ್ಲ. ಅಯ್ಯೋ ಮಾತಾಡು ಬಾಯಿಂದ ಮುತ್ತೇನು ಉದುರೋಲ್ಲ ಎಂದು ಇಂತವರ ಕಿಚಾಯಿಸುವುದೂ ಉಂಟು ಇಂತಹ ಮೂಡಿಯಾಗಿರುವ ,ಕಡಿಮೆ ಪ್ರತಿಕ್ರಿಯೆ ನೀಡುವ, ಆಗೊಂದು ಈಗೊಂದು ಮಾತನಾಡುವ , ಎಲ್ಲರೊಡನೆ ಕಡಿಮೆ ಬೆರೆಯುವವರನ್ನು ಅಂತರ್ಮುಖಿಗಳು ಎಂದು ಕರೆಯಬಹುದು.
ಬೇರೆಯರೊಂದಿಗೆ ಬೆರೆಯದೇ ಮಂಕಾಗಿರುವ ಇವರು ದಡ್ಡರೆಂದು ನೀವು ಭಾವಿಸಲೇಬಾರದು ಡಾರ್ವಿನ್ ನಿಂದ ಹಿಡಿದು ಐನ್ಸ್ಟೈನ್ ನಂತಹ ಮಾಹಾನ್ ವಿಜ್ಞಾನಿಗಳು ಕೂಡಾ ಅಂತರ್ಮುಖಿ ವ್ಯಕ್ತಿತ್ವಕ್ಕೆ ಉದಾಹರಣೆ ಎಂಬುದು ನೆನಪಿರಲಿ.
ಪ್ರತಿವರ್ಷ ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲಾಗುತ್ತದೆ.
ಅಂತರ್ಮುಖಿಗಳು ಏಕಾಂಗಿಯಾಗಿ ಇರುತ್ತಾರೆಂದು ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾಗಿದೆ. ನಮ್ಮ ಸಮಾಜ ಅಂತರ್ಮುಖಿಗಳನ್ನು ದುರಹಂಕಾರಿ, ನಿರಾಸಕ್ತಿ, ಅಂಜಿಕೆಯುಳ್ಳವರು ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಈ ದಿನವು ಜನರು ಇಂತಹವರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೆಸರಾಂತ ಮನಶಾಸ್ತ್ರಜ್ಞರಾದ
ಕಾರ್ಲ್ ಜಂಗ್ ರವರು ಮೊದಲ ಬಾರಿಗೆ 1921ರಲ್ಲಿ "ಸೈಕಲಾಜಿಕಲ್ ಟೈಪ್ಸ್" ಎಂಬ ಪುಸ್ತಕದಲ್ಲಿ ಅಂತರ್ಮುಖಿ ಪರಿಕಲ್ಪನೆಯನ್ನು ಮೊದಲು ವ್ಯಾಖ್ಯಾನಿಸಿದರು. ಪ್ರತಿಯೊಬ್ಬ ವ್ಯಕ್ತಿಯು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂಬ ಎರಡು ವರ್ಗಗಳಾಗಿ ಬರುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಜಂಗ್ ಅಂತರ್ಮುಖಿಗಳನ್ನು ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದಾರೆ.
ಅಪೊಲೊ ತಿಳುವಳಿಕೆ ಮತ್ತು ಜ್ಞಾನೋದಕ್ಕೆ ಪ್ರಸಿದ್ಧಿ. ಅಪೊಲೊ ಅಂತರ್ಮುಖಿಗಳು ತಮ್ಮ ಆಂತರಿಕ ಪ್ರಪಂಚದ ಪ್ರತಿಬಿಂಬ, ಕನಸು ಮತ್ತು ದೃಷ್ಟಿಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿವರಿಸಿದರು.
ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ ಹೆಚ್ಚು, ಆದರೆ ಒರಟರಾಗಿವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ.
ಅಂತರ್ಮುಖಿಗಳು ಹೊಸ ಮಾಹಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಧಾನ ಮಾಡುವರು.
ಅಂತರ್ಮುಖಿಗಳು ಯಾರ ವಿರೋಧಿಗಳಾಗಿರುವುದಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಅವರು ತೆಗೆದುಕೊಳ್ಳುವ .
ಅಂತರ್ಮುಖಿಗಳು ಆಳವಾದ ಚಿಂತಕರು ಮತ್ತು ಹೆಚ್ಚು ಸೃಜನಶೀಲರು.
ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಅಂತರ್ಮುಖಿಗಳನ್ನು ಗೌರವಿಸೋಣ.ಅವರ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ತನ್ಮೂಲಕ ಅವರ ಸಂತಸವನ್ನು ಅನುಭವಿಸಲು ಬಿಡೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment