*ನೆನಪಿದೆ*
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ
ಕುಣಿದ ದಿನವು ನೆನಪಿದೆ
ನನ್ನ ನೃತ್ಯ ಕಂಡು ಅವನು
ಮೆಚ್ಚಿದ ಮಾತು ನೆನಪಿದೆ.
ವಾಲೆ ಜುಮುಕಿ ಕುಣಿತ ಕಂಡು
ಕರಗಳನ್ನು ತಟ್ಟಿ ನಲಿದು
ಬೆರಳಿನುಂಗುರದ ಸೌಂದರ್ಯ
ಕಂಡು ಅವನು ನಲಿದ ನೆನೆಪಿದೆ .
ನಾಗರ ಜಡೆ ಸರಿಸಿ ನಿಂದು
ರಾಗ ತಾಳ ಲಯಕೆ
ಕುಣಿಯುವಾಗ ಅವನು
ಮುಗುಳು ನಕ್ಕ ನೆನಪಿದೆ.
ನನ್ನ ನೃತ್ಯ ಮುಗಿದ ಮೇಲೆ
ಬಳಿಗೆ ಬಂದು ಬೈತಲೆ ಬಟ್ಟು
ಸರಿಸಿ ಮುತ್ತ ನೀಡಿದಾಗ
ಕಂಠೀಹಾರ ಬಿಗಿಯಾದುದು ನೆನಪಿದೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment