*ಮೂರು ಶಾಯರಿಗಳು*
*೧*
ನಾನು ಸದಾ ಅವಳ ಹೊಗಳುತ್ತಲೇ ಇದ್ದೆ
ಲಾವಣ್ಯವತಿ ಗುಣವತಿ ಸೌಂದರ್ಯವತಿ|
ಬಿಟ್ಟೇ ಹೋದಳು ನನ್ನನು ಗೊಣಗುತ್ತ
ಮಾಡದೆ ಕೆಲಸ ವರ್ಣನೆಯಾಯಿತು ಅತಿ||.
*೨*
ನನಗೂ ಆಸೆ ಕಣೇ ಕೊಡಿಸಲು ನಿನಗೆ
ಬಂಗಾರದ ,ಬೆಳ್ಳಿಯ, ವಜ್ರದ ಒಡವೆಗಳನ್ನ|
ಮೊದಲು ನೋಡಿಕೋ ಧರಿಸಬೇಕಿರುವ
ನಿನ್ನ ಕೈ ಕಾಲು ಮೂಗು ಕಿವಿಗಳನ್ನ||
*೩*
ಕಾಯುತಲೇ ಇದ್ದೆ ಒಂದಲ್ಲ ಒಂದು
ದಿನ ಅವಳು ಬೀರುವಳು ಕಿರುನಗೆ|
ಧನವಿರುವವನ ಮದುವೆಯಾಗಿ
ನನ್ನ ಹೃದಯಕ್ಕೆ ಹಾಕಿ ಹೋದಳು ಹೊಗೆ||
No comments:
Post a Comment