ಗಜ಼ಲ್ ೬೧
ತಲೆಬಾಗಿಲಲಿ ತಲೆಬಾಗಿ ನಿಂತಿಹೆನು ತಣಿಸಲು ಬಾ ಇನಿಯ
ನಗದೊಡನೆ ಮಿನುಗುತ ನಿಂತಿರುವೆ ನಗಿಸಲು ಬಾ ಇನಿಯ.
ವಡ್ಯಾಣ ಬಿಗಿಯಾಗುತಿದೆ ನಿನ್ನ ಲೀಲೆಗಳ ನೆನದು
ಬಂಡಿಯಿಂದಿಳಿದು ವಿರಹ ವೇದನೆ ಬಿಡಿಸಲು ಬಾ ಇನಿಯ.
ರಂಗಿನ ಸೀರೆಯುಟ್ಟು ರಂಗವಲ್ಲಿ ಹಾಕಿರುವೆನು
ರಂಗಮಂಚದಿ ರಂಗಿನಾಟದಿ ರಂಗೇರಿಸಲು ಬಾ ಇನಿಯ.
ಕಂಠೀಹಾರವೇಕೋ ನಿಲ್ಲುತ್ತಿಲ್ಲ ಏದುಸಿರು ಬಿಡುತಿಹೆ
ಬಿರಿದೆದೆಯ ಭಾರವನು ಇಳಿಸಲು ಬಾ ಇನಿಯ.
ದುಂಡು ಮಲ್ಲಿಗೆ ಚಂದನದ ಸೌಗಂಧವಿದೆ ನನ್ನಲಿ
*ಸಿಹಿಜೀವಿ* ಯಾಗಿ ಚೆಂದುಟಿ ಚುಂಬಿಸಲು ಬಾ ಇನಿಯ.
*ಸಿ ಜಿ ವೆಂಕಟೇಶ್ವರ*
*ತುಮಕೂರು*

No comments:
Post a Comment