*ಅಮ್ಮ*
ನನ್ನ ಹೊತ್ತು ಹೆತ್ತ ಅಮ್ಮ ನೀನು
ನಿನ್ನಾಸರೆಯಲಿ ಕರುವು ನಾನು
ಸಹಿಸಿದೆ ನೂರು ನೋವುಗಳ
ಸರಿಸಿದೆ ಬದುಕಿನ ಕಷ್ಟಗಳ|೧|
ಹಗಲಿರುಳು ದುಡಿದೆ ನನಗೆ
ಮರೆತೆಬಿಟ್ಟೆ ನಿನ್ನ ಏಳಿಗೆ
ಉಡಲಿಲ್ಲ ಉಣಲಿಲ್ಲ ನೀನು
ಉಡಿಸಿ ಉಣಿಸಿ ಸಂಭ್ರಮಿಸಿದೆ|೨|
ದಾರಿ ತಪ್ಪಿದಾಗ ತಿದ್ದಿ ತೀಡಿದೆ
ಭಾರೀ ಪ್ರೀತಿಯ ಧಾರೆಯೆರೆದೆ
ಬೆಳೆಸಿದೆ ನನ್ನಲಿ ಸಂಸ್ಕಾರ
ನಿನ್ನ ಹಾರೈಕೆಯ ರೀತಿ ಸುಂದರ|೩|
ಬೆಲೆ ಕಟ್ಟಲಾಗದು ನಿನ್ನ ತ್ಯಾಗಕೆ
ನೆಲೆ ನೀಡಿದೆ ನನ್ನ ಬದುಕಿಗೆ
ಚಿಂತೆಯೆಲ್ಲವನೀಗ ನೀಗು
ಎಲ್ಲಾ ಜನ್ಮಕು ತಾಯಿ ನೀನಾಗು|೪|
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ನನ್ನ ಹೊತ್ತು ಹೆತ್ತ ಅಮ್ಮ ನೀನು
ನಿನ್ನಾಸರೆಯಲಿ ಕರುವು ನಾನು
ಸಹಿಸಿದೆ ನೂರು ನೋವುಗಳ
ಸರಿಸಿದೆ ಬದುಕಿನ ಕಷ್ಟಗಳ|೧|
ಹಗಲಿರುಳು ದುಡಿದೆ ನನಗೆ
ಮರೆತೆಬಿಟ್ಟೆ ನಿನ್ನ ಏಳಿಗೆ
ಉಡಲಿಲ್ಲ ಉಣಲಿಲ್ಲ ನೀನು
ಉಡಿಸಿ ಉಣಿಸಿ ಸಂಭ್ರಮಿಸಿದೆ|೨|
ದಾರಿ ತಪ್ಪಿದಾಗ ತಿದ್ದಿ ತೀಡಿದೆ
ಭಾರೀ ಪ್ರೀತಿಯ ಧಾರೆಯೆರೆದೆ
ಬೆಳೆಸಿದೆ ನನ್ನಲಿ ಸಂಸ್ಕಾರ
ನಿನ್ನ ಹಾರೈಕೆಯ ರೀತಿ ಸುಂದರ|೩|
ಬೆಲೆ ಕಟ್ಟಲಾಗದು ನಿನ್ನ ತ್ಯಾಗಕೆ
ನೆಲೆ ನೀಡಿದೆ ನನ್ನ ಬದುಕಿಗೆ
ಚಿಂತೆಯೆಲ್ಲವನೀಗ ನೀಗು
ಎಲ್ಲಾ ಜನ್ಮಕು ತಾಯಿ ನೀನಾಗು|೪|
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
No comments:
Post a Comment