26 March 2018

*"ಬೇಸಿಗೆ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು

*"ಬೇಸಿಗ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು"

ನಮ್ಮ ಬಾಲ್ಯದ ದಿನಗಳಲ್ಲಿ ಪರೀಕ್ಷೆ ಮುಗಿದ ಮಾರನೆ ದಿನವೇ ನಮ್ಮ ನಿಜವಾದ ಹಬ್ಬ ಆರಂಭವಾಗುತ್ತಿತ್ತು.ಬೇಲಿ ಸಾಲಿನ ಓತಿಕ್ಯಾತ ಹೊಡೆಯುವ ಕಾರ್ಯದಿಂದ ಗೋಲಿ‌,ಗಜ್ಹುಗ, ಟಿಕ್ಕಿ,ಉಯ್ಯಾಲೆ, ಲಗೋರಿ,ಬುಗುರಿ,ಚಿನ್ನಿದಾಂಡು ....ಇತ್ಯಾದಿ ಆಟಗಳಲ್ಲಿ ಮುಳುತ್ತಿದ್ದ ನಾವು ಮನೆ ಸೇರದೆ ಅಮ್ಮನ ಬೆತ್ತದ ರುಚಿ‌ ಕಂಡದ್ದೂ‌ಇದೆ .
ನಮ್ಮ ಆ ಬಾಲ್ಯದ ದಿನಗಳ ಸಂಭ್ರಮ ನಿಜವಾದ ಮೋಜಿನ‌ ನೆನಪು

 ಈಗಿನ ಚಿತ್ರಣವೆದ ಬೇರೆ   ಬಹತೇಕ ನಗರ ಮತ್ತು ಹಳ್ಳಿಗಳಲ್ಲಿ ‌ಆಟವೆಂದರೆ  ಮೊಬೈಲ್ ಗೇಮ್ ಮನರಂಜನೆ ಎಂದರೆ ಟಿ ವಿ ಸೀರಿಯಲ್ ಕ್ರಿಕೆಟ್ ಎಂದಾಗಿದೆ ಈ ಹಿನ್ನೆಲೆಯಲ್ಲಿ ಕೆಲ ಪೋಷಕರು ಬೇಸಿಗೆ ಶಿಬಿರಗಳ ಮೂಲಕವಾಗಿ ನಮ್ಮ ಮಕ್ಕಳ ಮೊಬೈಲ್ ಮತ್ತು ಟಿ.ವಿ ಯಿಂದ ದೂರಸರಿಸಲು ಪ್ರಯತ್ನ ಮಾಡುವರು
ಇಂದು ಪರೀಕ್ಷೆ ಮುಗಿದ ಕೂಡಲೆ ಎಲ್ಲಾ ಪಟ್ಟಣ ನಗರಗಳಲ್ಲಿ ಬೇಸಿಗೆ ಶಿಬಿರಗಳ ಭರಾಟೆ ಆರಂಭವಾಗುತ್ತದೆ ‌ಕೆಲವು ಕಡೆ ಮಕ್ಕಳು ಓದುವ ಶಾಲೆಗಳೆ ಈ ರೀತಿಯ ಶಿಭಿರ ಆಯೋಜನೆ ಮಾಡಿದರೆ .ಇನ್ನೂ ಕೆಲವು ಕಡೆ ಈ ರೀತಿಯ ಶಿಬಿರ ಮಾಡುವ ದಂದೆ ಮಾಡಿ‌ ಕೇವಲ ಹಣ ಗಳಿಕೆಯನ್ನು ಮಾಡಲು ಇರುವ ಮಾರ್ಗ ವಾಗಿರುವುದು ವಿಪರ್ಯಾಸ

ಹಾಗಾದರೆ ಈ ಬೇಸಿಗೆ ಶಿಬಿರಗಳು ಬೇಡವೆ ?

ಖಂಡಿತವಾಗಿಯೂ ಬೇಡ ಎನ್ನಲಾಗುವುದಿಲ್ಲ ಇಂತಹ ಬೇಸಿಗೆ ಶಿಬಿರಗಳಲ್ಲಿ ಸರಿಯಾದ ರೀತಿಯಲ್ಲಿ ಆಯೋಜಿಸಿ ಮಕ್ಕಳ ಸಮಯದ ಸದುಪಯೋಗ ಮಾಡುವ ಕೆಲ ಸಂಘಟನೆ ಮತ್ತು  ಶಾಲೆಗಳು ಮಕ್ಕಳ ವಿರಾಮ ಕಾಲದ ಸದುಪಯೋಗ ಪಡಿಸಿಕೊಳ್ಳಲು ಮತ್ತು ಸೃಜನಶೀಲತೆ ಬೆಳೆಸಲು ಸಹಕಾರಿ ಆಗಿವೆ ಆದರೆ ಕೆಲ ಶಾಲೆ ಮತ್ತು ಸಂಘಟನೆಗಳು ನಡೆಸುವ ಬೇಸಿಗೆ ಶಿಬಿರಗಳು ಯಾಂತ್ರಿಕವಾಗಿ ಹಣಮಾಡುವ ಉದ್ಯೋಗ ಮಾಡಿಕೊಂಡು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿವೆ .

ಬೇಸಿಗೆ ಶಿಬಿರಕ್ಕೆ ಪರ್ಯಾಯ ಏನು?

೧ ಬೇಸಿಗೆ ರಜೆಯಲ್ಲಿ ಮಕ್ಕಳ ಅಜ್ಜ ಅಜ್ಜಿ ಯರ ಮನೆಗೆ ಹೋಗಿ ಅವರ ಜೊತೆ ಕಾಲ ಕಳೆದರೆ  ಸಂಬಂಧಗಳ ಬೆಳವಣಿಗೆಯಾಗುವುದು
೨ ಹಳ್ಳಿ ಗಳಲ್ಲಿ ಆಡುವ ಕೆಲ ಆಟಗಳ ಪರಿಚಯ ಆಗುತ್ತದೆ
೩ ಅಜ್ಜ ಅಜ್ಜಿಯರು ಹೇಳುವ ಕಥೆಗಳು ಧಾರ್ಮಿಕ  ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು‌ ಸಹಕಾರಿ
೪ ಹಳ್ಳಿಯ ಪರಿಸರ ,ಸಹಜೀವನ, ಕೂಡುಕುಟುಂಬದ ಪರಿಕಲ್ಪನೆಯನ್ನು ತಿಳಿಯುವರು
೫ ಕೇವಲ ಶಾಲಾ ಪರಿಸರ ದ ಏಕಾತಾನತೆಯನ್ನು ಹೋಗಲಾಡಿಸುವ ಮೂಲಕ ಅಪ್ಪ ಅಮ್ಮನಿಂದ ದೂರವಾಗಿ ಬೇರೆಯರ ಜೊತೆ ಬೆರೆಯುವ ಗುಣ ಬೆಳೆಯುತ್ತದೆ.
೬ ಪೋಷಕರು ತಮ್ಮ ಮಕ್ಕಳ ಜೊತೆ ಪ್ರವಾಸ ಹೋಗಬಹುದು.
೭ ಜಾತ್ರೆ ,ಸಂತೆ ,  ಕಾರ್ಯಾಗಾರ ಮುಂತಾದ ಕಡೆ ಕರೆದುಕೊಂಡು ಹೋಗಿ ನಮ್ಮ ಆಚರಣೆ, ಸಂಸ್ಕೃತಿ ಪರಿಚಯಿಸುವುದು
೮ ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳಾದ ಅಡುಗೆ ಮಾಡುವುದು, ನೀರು ತರುವುದು ಪ್ರಾಣಿಗಳ ಪಾಲ್ ಮುಂತಾದ ಕೆಲಸಗಳನ್ನು ಕೌಶಲ್ಯ ದಿಂದ ಮಾಡುವುದರ ಕಲಿಸಬಹುದು .

ಒಟ್ಟಾರೆ ಹೇಳುವುದಾದರೆ ಉತ್ತಮ ಉದ್ದೇಶ ಇಟ್ಟುಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮತ್ತು ಸೇವೆಯನ್ನು ಗುರಿಯಾಗಿಟ್ಟುಕೊಂಡು ಮಾಡುವ ಬೇಸಿಗೆ ಶಿಬಿರಗಳು ಇದ್ದರೆ ಪೋಷಕರು ಅಂತಹ ಕಡೆ ಮಕ್ಕಳನ್ನು ಕಳಿಸಬಹುದು .ಆದರೆ ಹಣ ಮಾಡುವ ದಂದೆಯಾಗಿರುವ ಕುರಿಗಳಂತೆ ಮಕ್ಕಳನ್ನು ಸೇರಿಸಿಕೊಂಡು ನಾಟಕ ಆಡುವ ಶಿಬಿರಗಳಿಂದ ದೂರವಿರವುದೇ ಒಳಿತು.ಅದರ ಬದಲಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಿಬರಬಹುದು ಅಥವ ಸಂಬಂಧಿಕರ ಮನೆಗೆ ಮತ್ತು ಅಜ್ಜ ಅಜ್ಜಿಯರ ಮನೆಗೆ ಹೋಗಿ ಬರಬಹುದು.
ಒಟ್ಟಿನಲ್ಲಿ ಬೇಸಿಗೆಯ ರಜೆಯು ಮಕ್ಕಳಿಗೆ ವರವಾಗಬೇಕೆ ಹೊರತು ಒತ್ತಡ ಹೇರಿ ಅವರ ಬಾಲ್ಯದ ಅಮೂಲ್ಯವಾದ ಕ್ಷಣಗಳನ್ನು ಕಿತ್ತುಕೊಳ್ಳುವಂತಿರಬಾರದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



No comments: