ಗಜ಼ಲ್ ೨೮
ಎಲ್ಲಾ ಮುಗಿದು ಹೋದ ಮೇಲೆ ನೆನಪು ಮಾಡಲು ಬಂದೆಯಾ
ಸೊಲ್ಲಡಗಿದ ನನ್ನ ಹೃದಯವ ಮಾತನಾಡಿಸಲು ಬಂದೆಯಾ
ನಿನ್ನ ಸಂಗದ ನೆನಪುಗಳ ಪ್ರವಾಹಕ್ಕೆ ಕಟ್ಟೆ ಕಟ್ಟಿ ನಿಲ್ಲಿಸಿದ್ದೇನೆ
ನೀನಿಲ್ಲದೇ ನನಗೆ ಬಾಳು ಸಾದ್ಯವೇ ಎಂದು ಪ್ರಶ್ನಿಸಲು ಬಂದೆಯಾ
ಒಂದೊಮ್ಮೆ ನೀನಿಲ್ಲದ ನನ್ನ ಬಾಳು ನಶ್ವರ ಈ ಜಗ ಶೂನ್ಯ
ಈಶ್ವರನ ದಯೆಯಿಂದ ನೆಮ್ಮದಿ ಪಡೆದ ಆತ್ಮ ನೋಡಲು ಬಂದೆಯಾ
ನನ್ನ ಛಲ ಉತ್ತಮ ಸಂಸ್ಕಾರವುಳ್ಳ ಮಾನವನಾಗುವದು
ನಿನ್ನ ಮರೆತು ನಾನೇಗೆ ಬದುಕಿರುವೆನೆಂದು ಪರೀಕ್ಷಿಸಲು ಬಂದೆಯಾ
ಇಂದ್ರಿಯಾಸಕ್ತಿಗಳ ದಾಸನಾಗಿ ನಿನ್ನ ನೆನಪಲಿ ಹುಚ್ಚನಾಗಿದ್ದೆ
ಇಂದ್ರನಿಗಿಂತ ಆತ್ಮಾನಂದ ಸುಖ ಪಡೆವ ಸೀಜೀವಿಯ ವೀಕ್ಷಿಸಲು ಬಂದೆಯಾ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment