ಯಂಗ್ಟಿ ೨
ಅದು ಕಳೆದ ಶತಮಾನದ ತೊಂಬತ್ತರ ದಶಕ ನಾನಾಗ ಹಿರಿಯೂರಿನ ಡಾ ರಾಧಾಕೃಷ್ಣನ್ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ ಸಿ ಎಚ್ ತರಬೇತಿ ಪಡೆಯುತ್ತಿದ್ದೆ.ಒಂದು ದಿನ ನಮ್ಮ ಕಾಲೇಜಿನ ಕಾರ್ಯದರ್ಶಿಗಳಾದ ವೀರಕರಿಯಪ್ಪನವರು ನಾನು ಮತ್ತು ನನ್ನ ಟಿ ಸಿ ಹೆಚ್ ಸಹಪಾಠಿಗಳನ್ನು ಕಾರ್ಯಕ್ರಮವೊಂದಕ್ಮೆ ಕರೆದುಕೊಂಡು ಹೋದರು.ಆಗ ಸಚಿವರಾಗಿದ್ಸ ಕೆ ಎಚ್ ರಂಗನಾಥ ರವರ ಅಧ್ಯಕ್ಷತೆಯ ಕಾರ್ಯಕ್ರಮ ಅದು ಮೊದಲ ಬಾರಿಗೆ ಸಚಿವರೊಬ್ವರನ್ನು ಹತ್ತಿರದಿಂದ ನೋಡಿದ್ದೆ.ಕಾರ್ಯಕ್ರಮ ಆರಂಭದ ಮೂರು ನಿಮಿಷ ಮೊದಲು ವೆಂಕಟೇಶ್ ನೀನು ಪ್ರಾರ್ಥನೆ ಮಾಡಬೇಕು ಅಂದು ಬಿಟ್ಟರು ನಮ್ಮ ಕಾರ್ಯದರ್ಶಿ. ಸರ್ ನಾನು ಪ್ರಿಪೇರ್ ಆಗಿಲ್ಲ ಎಂದರೂ "ಹಾಡ ನೀನ್ ಹಾಡ್ತೀಯ " ಅಂತ ಧೈರ್ಯ ತುಂಬಿದರು.ಅಂದು ನಾನು ಹಾಡಿದ ಹಾಡು" ಹಾಲಲ್ಲಾದರು ಹಾಕು...ನೀರಲ್ಲಾದರು ಹಾಕು ರಾಘವೇಂದ್ರ..." ಗೀತೆ ಕಾರ್ಯಕ್ರಮದ ಕೊನೆಯಲ್ಲಿ ಮಾನ್ಯ ಮಂತ್ರಿಗಳು ಹತ್ತಿರ ಕರೆದು ಚೆನ್ನಾಗಿ ಹಾಡಿದೆ ಕಣೋ ಅಂದರು. ಮಂತ್ರಿಗಳಾದ ರಂಗನಾಥ್ ಸರ್ ಈಗ ನಮ್ಮಂದಿಗಿಲ್ಲ ಆ ಸವಿನೆನಪುಗಳು ಸದಾ ನನ್ನೊಂದಿವೆ. ನಿನ್ನೆ ಸರಿಗಮಪ ಕಾರ್ಯಕ್ರಮದಲ್ಲಿ ಸಹೋದರಿಯರಿಬ್ಬರು ಅದೇ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅಣ್ಣಾವ್ರಿಗೆ ಡೆಡಿಕೇಟ್ ಮಾಡಿದಾಗ ನನ್ನ ಸವಿನೆನಪು ಮತ್ತೆ ಮರುಕಳಿಸಿತು.
#sihijeeviVenkateshwara
Hit Songs #kannadasongs #songs #songstrending Saregama Zee Kannada #rajkukumar
No comments:
Post a Comment