#ನಂತರ
ನಮ್ಮಲ್ಲಿ ನಾನೂ ಸೇರಿ ಹಲವರು ಯಾವುದೇ ಕಾರ್ಯವನ್ನು ಮುಂದೂಡುವ ರೋಗ ಹೊಂದಿದ್ದೇವೆ.ಆಮೇಲೆ ಮಾಡಿದರಾಯಿತು.ಮುಂದೆ ನೋಡೋಣ ನಂತರ ಮಾಡಿದರಾಯಿತು ಎಂಬ ನೆಪ ಹೇಳಿ ಸುಮ್ಮನಾಗುತ್ತೇವೆ.ಇತ್ತೀಚೆಗೆ
"ಬಿಫೋರ್ ದ ಕಾಫಿ ಗೆಟ್ಸ್ ಕೋಲ್ಡ್ "ಎಂಬ ತೋಶಿಕಾಜು ಕವಾಗುಚಿಯವರ ಕಾದಂಬರಿಯ ಬಗ್ಗೆ ಓದುವಾಗ ಅಲ್ಲಿನ ಕೆಲ ಸಾಲುಗಳು ಇಷ್ಟವಾದವು.
ನಂತರ ಮಾಡುವೆ ಎಂಬುದನ್ನು ತೆಗೆದು ಹಾಕಿ.
ನಂತರ ಕಾಫಿ ತಣ್ಣಗಾಗುತ್ತದೆ.
ನಂತರ, ನೀವು ಆಸಕ್ತಿ ಕಳೆದುಕೊಳ್ಳುತ್ತೀರಿ.
ನಂತರ, ಹಗಲು ರಾತ್ರಿಯಾಗಿ ಬದಲಾಗುತ್ತದೆ.
ನಂತರ, ಜನರು ಬೆಳೆಯುತ್ತಾರೆ.
ನಂತರ, ಜನರಿಗೆ ವಯಸ್ಸಾಗುತ್ತದೆ.
ನಂತರ, ಜೀವನವೇ ಕಳೆದುಹೋಗುತ್ತದೆ.
ನಂತರ, ನೀವು ಏನನ್ನೂ ಮಾಡಲಿಲ್ಲ ಎಂದು ವಿಷಾದಿಸುತ್ತೀರಿ ...
ನಿಮಗೆ ಅವಕಾಶ ಸಿಕ್ಕಾಗ.
ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಪ್ರಮಾಣಿಕವಾಗಿ ಮಾಡಬೇಕು..
ಹೌದಲ್ಲವೆ?
#sihijeeviVenkateshwara
#think #inspiration #literature
No comments:
Post a Comment