ನಿನ್ನೆ ನಾನು "ಪ್ರಯತ್ನವೇ ಪರಮಾತ್ಮ" ಎಂಬ ಕ್ಯಾಚಿ ಟ್ಯಾಗ್ ಲೈನ್ ಹೊಂದಿದ ರಂಗಸ್ವಾಮಿ ಮೂಕನಹಳ್ಳಿಯವರ "ನಾನೆಂದಿಗೂ ಸೋಲುವುದಿಲ್ಲ ಸೋತರದು ನಾನಲ್ಲ" ಎಂಬ ಪುಸ್ತಕ ಓದಿದೆ.
ಇದು 18 ಮಹಾನ್ ಸಾಧಕರ ಬದುಕಿನ ಕಥೆಗಳನ್ನು ಕಟ್ಟಿಕೊಡುತ್ತಾ ನಮ್ಮಲ್ಲಿರುವ ಕೀಳರಿಮೆ ಹೋಗಲಾಡಿಸಿ ನಾನೂ ಏನಾದರೂ ಸಾಧಿಸಬೇಕೆಂಬ ಭಾವನೆ ಮೂಡಿಸುವ ಉತ್ತಮ ಮೋಟಿವೇಶನಲ್ ಪುಸ್ತಕ.
ಅಪಾಯವಿಲ್ಲದ ಬದುಕಿಲ್ಲ ಎಂದು ಹೇಳುವ ರಿಚರ್ಡ್ ಬ್ರಾನ್ಸನ್ ಬಗ್ಗೆ ಇರುವ ಲೇಖನ ಸುಲಭವಾಗಿ 'ಕ್ವಿಟ್' ಎನ್ನದೆ, ನಮ್ಮ ವೇಳೆ ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಎಂಬ ಕರ್ನಲ್ ಸ್ಯಾಂಡರ್ಸ್ ರವರ ಬಗ್ಗೆ ಲೇಖನ
ಸಾಧಿಸುವ ಮನಸ್ಸಿದ್ದರೆ ನಮ್ಮೆಲ್ಲಾ ಕನಸುಗಳೂ ಈಡೇರುತ್ತವೆ ಎಂದು ಹೇಳಿದ ವಾಲ್ಟ್ ಡಿಸ್ನಿ ಯ ಬಗ್ಗೆ ಇರುವ ಲೇಖನ ನನಗೆ ಬಹಳ ಹಿಡಿಸಿದವು
ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿದ ಐದರಿಂದ ಆರು ಕೀ ಪಾಯಿಂಟ್ ಗಳು ಗಮನಾರ್ಹ ಮತ್ತು ಚಿಂತನಾರ್ಹ.
No comments:
Post a Comment