ಉಗಾದಿ ಹಬ್ಬಕ್ಕೆ ಅಲಂಕಾರದ ಟ್ರೆಂಡ್ .
ಹಬ್ಬಗಳೆಂದರೆ ಏನೋ ಖುಷಿ ತಿಂಗಳಿಂದ ಹೊಸ ಬಟ್ಟೆ ಕೊಂಡು , ಸಾಮಗ್ರಿಗಳನ್ನು ಕೊಂಡು ಸಂಭ್ರಮಿಸಲು ಸಿದ್ದತೆ ಮಾಡಿಕೊಳ್ಳುತ್ತೇವೆ.ಬಹುತೇಕ ಭಾರತೀಯರಿಗೆ ಹೊಸ ವರ್ಷ ಆರಂಭವಾಗುವುದು ಉಗಾದಿಯಂದು ಹಾಗಾಗಿ ಆ ಹಬ್ಬಕ್ಕೆ ಇತ್ತೀಚಿನ ದಿನಗಳಲ್ಲಿ ಮನೆಯನ್ನು ವಿನೂತನ ರೀತಿಯಲ್ಲಿ ಡೆಕೊರೇಶನ್ ಮಾಡುವ ಟ್ರೆಂಡ್ ಶುರುವಾಗಿದೆ.ಈ ಶುಭ ಸಂದರ್ಭದಲ್ಲಿ ನೀವೂ ನಿಮ್ಮ ಮನೆಯನ್ನು ಹೊಸ ಟ್ರೆಂಡ್ ಮೂಲಕ ಅಲಂಕರಿಸಲು ಈ ಅಂಶಗಳನ್ನು ಗಮನಿಸಬಹುದು.
೧ ಮನೆಯನ್ನು ಚೆನ್ನಾಗಿ ಸ್ವಚ್ಚಗೊಳಿಸೋಣ..
ಇಂದಿನ ಧಾವಂತದ ಜೀವನದಲ್ಲಿ ಹಾಗೂ ವಿಭಕ್ತ ಕುಟುಂಬಗಳು ಹೆಚ್ಚಾಗಿರುವ ಕಾಲದಲ್ಲಿ ಮನೆಯ ಎಲ್ಲರೂ ಉದ್ಯೋಗ ಮಾಡುವವರಾಗಿರುವುದರಿಂದ ಮನೆಯನ್ನು ಸಮಗ್ರವಾಗಿ ಸ್ವಚ್ಚತೆ ಮಾಡಲು ಸಮಯ ಸಿಗದಿರಬಹುದು ಈ ಹಬ್ಬಕ್ಕೆ ನಮ್ಮ ಮನೆಯನ್ನು ಎಲ್ಲರೂ ಸೇರಿ ಸ್ವಚ್ಚ ಮಾಡೋಣ.
೨ ಹಬ್ಬಕ್ಕೆ ತಾಜಾ ಹೂ ಸುಗಂಧವನ್ನುಖರಿದಿಸೋಣ
ಬಹುತೇಕ ಮನೆಗಳಲ್ಲಿ ಸೌಗಂಧವಿರದ ಕೃತಕ ಹೂವಿನ ಹಾರಗಳು ಮನೆಯ ಬಾಗಿಲು ಮತ್ತು ಇತರೆಡೆ ನೇತಾಡುವುದು ಸಾಮಾನ್ಯ. ಆದರೆ ತಾಜಾ ಹೂವಿನ ಸುಗಂಧ ಪರಿಮಳದ ಆನಂದ ಅನುಭವಿಸಲು ಸ್ವಾಭಾವಿಕವಾದ ತಾಜಾ ಹೂಗಳನ್ನು ನಮ್ಮ ಮನೆಯ ಅಲಂಕಾರಕ್ಕೆ ಬಳಸೋಣ.
೩ ಮಾವಿನ ಎಲೆಗಳ ಅಲಂಕಾರ.
ಉಗಾದಿಗೂ ಮಾವು ಬೇವಿಗೂ ಅವಿನಾಭಾವ ಸಂಬಂಧವಿದೆ ಮಾವಿನ ತಳಿರು ತೋರಣದಿಂದ ನಮ್ಮ ಬಾಗಿಲು ಮತ್ತು ಮನೆಯನ್ನು ಸಿಂಗರಿಸೋಣ ಜೊತೆಗೆ ಬೇವಿನ ಸೊಪ್ಪನ್ನು ಸಹ ಬಳಸೋಣ.
೪ ವರ್ಣ ರಂಜಿತ ರಂಗೋಲಿ.
ಸಂಕ್ರಾಂತಿ ದೀಪಾವಳಿ ಸೇರಿದಂತೆ ಎಲ್ಲಾ ಹಬ್ಬಕ್ಕೆ ನಾವು ರಂಗೋಲಿ ಹಾಕುವುದು ಸಾಮಾನ್ಯವಾದರೂ ಯುಗಾದಿಗೆಂದೇ ಒಂದು ಸುಂದರ ವಿನ್ಯಾಸದ ರಂಗೋಲಿಯಿಂದ ನಮ್ಮ ಮನೆಯಂಗಳವನ್ನು ಅಲಂಕರಿಸೋಣ.
೫ ಹಿತ್ತಾಳೆ ಬಟ್ಟಲಿನಲ್ಲಿ ತೇಲುವ ವಿವಿಧ ರೀತಿಯ ಹೂಗಳ ಅಲಂಕಾರದ ಮೂಲಕ ನಮ್ಮ ಮನೆಯನ್ನು ಇನ್ನೂ ಸುಂದರವಾಗಿ ಕಾಣುವಂತೆ ಮಾಡೋಣ ಇದು ಇತ್ತೀಚಿನ ಹೊಸ ಟ್ರೆಂಡ್ ಆಗಿದೆ.
೬ ಪೂಜಾ ಕೊಠಡಿಯನ್ನು ಸ್ವಚ್ಚಗೊಳಿಸಿ ಉಗಾದಿ ಹಬ್ಬಕ್ಕೆ ನಮ್ಮ ಮನೆಯ ದೇವ ದೇವತೆಗಳನ್ನು ವಿಭಿನ್ನವಾಗಿ ತಾಜಾ ಹೂಗಳನ್ನು ಬಳಸಿ ಅಲಂಕಾರ ಮಾಡಿ ಧೂಪದ್ರವ್ಯ ಗಳಿಂದ ಮನೆಯ ಸದಸ್ಯರೆಲ್ಲರೂ ಸೇರಿ ದೇವರ ಪೂಜಿಸಿ ಆನಂದಿಸೋಣ.
೭ ಹಬ್ಬಕ್ಕೆ ವಿಭಿನ್ನವಾದ ಉಡುಗೆ ತೊಡುಗೆಗಳನ್ನು ತೊಟ್ಟು ಅನಂದಿಸೋಣ.ಈ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಈ ವರ್ಷ ಬಂದ ಹೊಸ ಟ್ರೆಂಡ್ ನ ಬಟ್ಟೆಗಳಿಗೆ ಆದ್ಯತೆ ನೀಡಿ ಕುಟುಂಬದ ಸದಸ್ಯರೆಲ್ಲರೂ ತೊಟ್ಟು ಗ್ರೂಪ್ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸೋಣ.
೮ ಹಬ್ಬದ ಸಂಜೆ ದೀಪ ಬೆಳಗಿಸೋಣ.
ಸಾಮಾನ್ಯವಾಗಿ ದೀಪಾವಳಿಯಲ್ಲಿ ಸಂಜೆ ದೀಪಗಳನ್ನು ಬೆಳಗಿ ಹಬ್ಬದ ಆಚರಣೆಯನ್ನು ಮಾಡುತ್ತೇವೆ ಉಗಾದಿಯ ಸಂಜೆಯೂ ನಾವು ಮನೆಯ ಮುಂದೆ ದೀಪಗಳ ಬೆಳಗಬಹುದು ಜೊತೆಗೆ ಅಲಂಕಾರಿಕ ಎಲೆಕ್ಟ್ರಿಕ್ ಎಲ್ ಇ ಡಿ ಸಹ ಬಳಸಿಕೊಂಡು ಮನೆ ಮನವನ್ನು ಜಗಮಗಿಸಬಹುದು.
ಕಾಲಕ್ಕೆ ತಕ್ಕಂತೆ ನಾವು ನಮ್ಮ ಆಚಾರ ವಿಚಾರಗಳನ್ನು ಪಾಲಿಸುತ್ತಾ ತಂತ್ರಜ್ಞಾನದ ಟಚ್ ನೀಡುವ ಮೂಲಕ ಹೊಸ ರೀತಿಯಲ್ಲಿ ಅಚರಣೆ ಮಾಡುತ್ತಾ ನಮ್ಮ ಸಂಸ್ಕೃತಿಯನ್ನು ಪಾಲಿಸೋಣ ಈ ವರ್ಷದ ಉಗಾದಿ ಹಬ್ಬವನ್ನು ಇನ್ನೂ ಹೆಚ್ಚು ಸಂಭ್ರಮಿಸೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment