ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.
ಹತ್ತನೇ ತರಗತಿ ಮತ್ತು ಪಿ ಯು ಸಿ ಗಳಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಚೆನ್ನಾಗಿ ಓದುವ ಮಕ್ಕಳನ್ನು ಹುರಿದುಂಬಿಸುವ ಶಿಕ್ಷಕರು ಕಡಿಮೆ ಅಂಕಗಳನ್ನು ಗಳಿಸುವ ಮಕ್ಕಳನ್ನು ಕೆಲ ಶಿಕ್ಷಕರು ಅಷ್ಟೇ ಬಿಡು ನಿನ್ನ ಹಣೆಬರಹ ಎಂದು ಷರಾ ಬರೆದಬಿಡುವರು.ಆದರೆ ಇಲ್ಲೊಬ್ಬ ಸಾಧಕ ಹತ್ತನೆಯ ತಎರಗತಿಯಲ್ಲಿ ದಿದ್ದಾರಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ಕೇವಲ 35 ಅಂಕಗಳಿಸಿ ಪಾಸಾದವರು ಈಗ ಭಾರತದ ಅತ್ಯುನ್ನತ ಪರೀಕ್ಷೆಯಾದ ನಾಗರೀಕ ಸೇವಾ ಪರೀಕ್ಷೆ ಪಾಸ ಮಾಡಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೇ ಶ್ರೀ
ತುಷಾರ್ ಸುಮೇರಾ
ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್ನ ಐಎಎಸ್ ಅಧಿಕಾರಿ. ಪ್ರಸ್ತುತ ಗುಜರಾತ್ನ ಭರೂಚ್ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರ 10 ನೇ ತರಗತಿಯ ಅಂಕಪಟ್ಟಿ ಬಹಳ ವೈರಲ್ ಆಗಿತ್ತು. ತುಷಾರ್ ಸುಮೇರಾ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೇವಲ ಉತ್ತೀರ್ಣ ಅಂಕಗಳನ್ನಷ್ಟೇ ಗಳಿಸಿದ್ದರು. ಆದರೆ ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಯನ್ನು ಪಾಸ್ ಮಾಡಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ತುಷಾರ್ ಸುಮೇರಾ ಅವರ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ಅದರಲ್ಲಿ ಅವರು ಇಂಗ್ಲಿಷ್ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ ಕೇವಲ 38 ಅಂಕಗಳನ್ನು ಗಳಿಸಿದ್ದಾರೆ.
ಆರಂಭದಲ್ಲಿ ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಯಾಗಿದ್ದರೂ, ಅವರು UPSC ಉತ್ತೀರ್ಣರಾಗಿರುವುದು ದೊಡ್ಡ ಸಾಧನೆಯಾಗಿದೆ. 100ರಲ್ಲಿ ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಾಗ ಇಡೀ ಊರ ಜನರು ಮತ್ತು ಶಾಲೆಯಲ್ಲಿ ಶಿಕ್ಷಕರು ಎಂದಿನಂತೆ ಸಿದ್ದ ಮಾದರಿಯ ಬೈಗುಳ ಸುರಿಸಿ ನೀನು ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದರು.
ತುಷಾರ್ ಸುಮೇರಾ ಅವರು ಕಲಾ ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು 2012 ರಲ್ಲಿ UPSC ಬರೆದು ಪಾಸ್ ಆದರು.
ಅದೇ ಊರ ಜನ ಇವರನ್ನು ಕರೆದು ಸನ್ಮಾನ ಮಾಡಿದರು. ಅವರ ಸ್ವಯಂ ಅಧ್ಯಯನ, ಸತತ ಪ್ರಯತ್ನದಿಂದಲೇ ಯಶಸ್ಸು ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಕಡಿಮೆ ಅಂಕ ಪಡೆದಾಗ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳು, ಯಾವುದೋ ಕಾರಣದಿಂದಾಗಿ ಮಕ್ಕಳು ಚೆನ್ನಾಗಿ ಓದದೇ ಇರುವಾಗ ಅನವಶ್ಯಕ ಟೀಕೆ ಮಾಡಿ ನಿಷ್ಪ್ರಯೋಜಕ ಎಂಬ ಬಿರುದು ನೀಡುವ ಪಾಲಕರು ತುಷಾರ್ ರವರ ಜೀವನದ ಯಶೋಗಾಥೆಯನ್ನು ಒಮ್ಮೆ ಓದಲೇಬೇಕು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment