07 February 2024

ಟ್ರಾಫಿಕ್ ಪೋಲೀಸ್ ಪಾರ್ಕ್


 


ಟ್ರಾಫಿಕ್ ಪೋಲೀಸ್ ಪಾರ್ಕ್..



ಇತ್ತೀಚಿಗೆ ನಮ್ಮ ಶಾಲೆಯ ಅಪ್ರಾಪ್ತ ಬಾಲಕರು  ಅಸುರಕ್ಷಿತ ಬೈಕ್ ಚಾಲನೆಯ ಪರಿಣಾಮವಾಗಿ ಜೀವತೆತ್ತ ಘಟನೆಯು ಆಗಾಗ ನೆನಪಾಗಿ ಮನಸ್ಸು ಭಾರವಾಗುತ್ತದೆ.ಮಕ್ಕಳಿಗೆ ಮತ್ತು ಪೋಷಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.

ಶಾಲೆಗೆ ಟ್ರಾಫಿಕ್ ಪೋಲೀಸ್ ಕರೆಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡೂ ಪ್ರಯತ್ನ ಮಾಡಲಾಯಿತು.

ವಿಷಯಕ್ಕೆ ಸಂಬಂಧಿಸಿದಂತೆ, ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತವಾಗಿರುವುದು ಶ್ಲಾಘನೀಯ.

ರಸ್ತೆ ಅಪಘಾತಗಳು ಘಟಿಸದಂತೆ ತಡೆಯುವ ಪ್ರಯತ್ನವನ್ನು ಸಂಚಾರ ವಿಭಾಗವು ಮಾಡುತ್ತಿದ್ದು, ವಿವಿಧ ಶಾಲೆಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿ ಸಿಬ್ಬಂದಿಯವರು Student Association for Road Safety ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳುವುದರ ಜೊತೆಗೆ Safe Root to School ಯೋಜನೆಯಡಿಯಲ್ಲಿ ಶಾಲೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಅಭ್ಯಸಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.


ಈ ನಿಟ್ಟಿನಲ್ಲಿ "Traffic Police Park" ನ್ನು ಬೆಂಗಳೂರಿನ ಸೇಂಟ್ ಮಾರ್ಕ್ಸ್ರ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, “ಮೊಳಕೆಯಲ್ಲಿಯೇ ತಿದ್ದಿರಿ” ಎಂಬುದು ಈ ಪಾರ್ಕ್‌ನ ಧ್ಯೇಯ ವಾಕ್ಯವಾಗಿದೆ. ನೂರಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಪಾದಚಾರಿ ಮಾರ್ಗದ ಬಗ್ಗೆ ತಿಳುವಳಿಕೆ, ರಸ್ತೆ ಅಪಘಾತವನ್ನು ತಪ್ಪಿಸಿ ಜೀವವನ್ನು ಉಳಿಸುವ ಸಂಚಾರಿ ನಿಯಮಗಳ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವುದು. Traffic Park ನ ಪ್ರಮುಖ ಉದ್ದೇಶವಾಗಿದೆ.

ಇಲ್ಲಿ ಜೀಬ್ರಾ ಕ್ರಾಸಿಂಗ್,ರೋಡ್ ಮಾರ್ಕಿಂಗ್, ಸಿಗ್ನಲ್, ಜೀರೋ ಟಾಲೆರೆನ್ಸ್ ಜೋನ್ ಹೀಗೆ ವಿವಿಧ ವಿಷಯಗಳ ಪರಿಚಯ ಮಾಡಿಕೊಡಲಾಗುತ್ತದೆ.

ಇದೇ ಸ್ಥಳದಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ ಒದಗಿಸುವ ದೃಷ್ಟಿಯಿಂದ ಗ್ರಂಥಾಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದು ಅತ್ಯಂತ ಅನುಕೂಲಕರ ಸ್ಥಳವಾಗಿದ್ದು, ಶಾಲಾ ವಿದ್ಯಾರ್ಥಿಗಳನ್ನು ನಿರಂತರವಾಗಿ ಇಲ್ಲಿಗೆ ಕರೆ ತಂದು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಅರಿವು ನೀಡಲಾಗುತ್ತಿದೆ.


ಸುರಕ್ಷಿತ ಚಾಲನೆ ಎಲ್ಲದ್ದಕ್ಕೂ ಸಾಧನಾ ಎಂಬ ಶೀರ್ಷಿಕೆಯಡಿ'ರಸ್ತೆ ಸುರಕ್ಷತೆ ಪ್ರಾಣ ರಕ್ಷೆ' ಎಂಬ ಅಂಶದೊಂದಿಗೆ ಸುರಕ್ಷಿತವಾದ ಹಾಗೂ ಸುರಕ್ಷಿತವಲ್ಲದ ಸಾರಿಗೆ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆಯನ್ನು ನೀಡುತ್ತದೆ. 


ಮೇಲ್ಕಂಡ ಅಂಶಗಳನ್ವಯ ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳುವಳಿಕೆ ನೀಡಲುTraffic Park ಒಂದು ಸೂಕ್ತ ತಾಣವಾಗಿದೆ. ಶಾಲಾ ಹಂತದಲ್ಲಿ ಕೈಗೊಳ್ಳುವ ಕ್ಷೇತ್ರ ಭೇಟಿ ಇಲ್ಲವೆ ಶೈಕ್ಷಣಿಕ ಪ್ರವಾಸಗಳ ಸಂದರ್ಭಗಳಲ್ಲಿ ಈ ಸ್ಥಳದ ವೀಕ್ಷಣೆ ಕೈಗೊಂಡು, ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಕ್ರಮವಹಿಸಲು ತಿಳಿಸಲಾಗಿದೆ. ಹಾಗೂ 04 ರಿಂದ 10 ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಡ್ಡಾಯ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ 


ಈ Traffic Park ಸೆಂಟ್ ಮಾಕ್ಸರ್ ರಸ್ತೆ, ಹೋಟೆಲ್ ಏರ್ಲೈನ್ ಎದುರು, ಬೌರಿಂಗ್ ಇನ್ ಟಿಟ್ಯೂಟ್ ಹತ್ತಿರ, ಅನಿಲ್ ಕುಂಬ್ಳೆ ವೃತ್ತ ಬೆಂಗಳೂರು ಇಲ್ಲಿ ಇದೆ. ಬೆಂಗಳೂರಿನ ಶಾಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲು ಇಲ್ಲಿಗೆ ತಪ್ಪದೇ ಮಕ್ಕಳನ್ನು ಕರೆದುಕೊಂಡು ಹೋಗಿ ಜಾಗೃತಿ ಮೂಡಿಸಬಹುದು. ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಟ್ರಾಫಿಕ್ ಪಾರ್ಕ್ ಗಳು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಇಂತಹ ಯೋಜನೆಗಳು ವಿಸ್ತರಣೆಯಾಗಿ ಎಲ್ಲಾ ಮಕ್ಕಳಿಗೆ ಈ ಯೋಜನೆಯ ಮೂಲಕ ರಸ್ತೆ ಸುರಕ್ಷತಾ ಪಾಠ ಲಭಿಸಿದಂತಾಗುತ್ತದೆ.ತನ್ಮೂಲಕ ಭವಿಷ್ಯದ ಪ್ರಜೆಗಳಿಗೆ ಸುರಕ್ಷತಾ ಜ್ಞಾನ ಲಭಿಸಿ ಸಾವಿರಾರು ಅಮೂಲ್ಯ ಜೀವಗಳ ರಕ್ಷಣೆ ಮಾಡಿದಂತಾಗುತ್ತದೆ. ಇಂತಹ ಸತ್ಕಾರ್ಯಕ್ಕೆ ಶಿಕ್ಷಕರು, ಪೋಷಕರು, ಸಾರ್ವಜನಿಕರು ಮತ್ತು ಸಮುದಾಯ ಇಂತಹ ಕಾರ್ಯಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆ ಮತ್ತು ಸಹಕಾರ ನೀಡಿದರೆ ಅಪಘಾತಗಳು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


No comments: