ಪೋಷಕರಿಗೊಂದು ಪತ್ರ...
ಆತ್ಮೀಯ ಪೋಷಕರೇ....
ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಿನಾಂಕ 5.2.2024 ರಿಂದ ಎರಡನೇ ಅಭ್ಯಾಸ ಪತ್ರಿಕೆಯ ಪರೀಕ್ಷೆ ಪ್ರಾರಂಭವಾಗುವುದರಿಂದ ತಮ್ಮ ಮಗುವನ್ನು ಪರೀಕ್ಷೆಗೆ ತಯಾರಿ ನಡೆಸಿ ಉತ್ತಮ ಅಂಕ ಪಡೆಯಲು ಮನೆಯಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ...ಈ ಪರೀಕ್ಷೆಗೆ ಗೈರುಹಾಜರಾಗದಂತೆ ಕಡ್ಡಾಯವಾಗಿ ಹಾಜರಾಗಲು ಕ್ರಮ ವಹಿಸಿ.....
ಮಕ್ಕಳಿಗೆ ಆದಷ್ಟೂ ಮೊಬೈಲ್ ಮತ್ತು ಬೈಕ್ ಕೊಡುವುದನ್ನು ನಿಲ್ಲಿಸಿ...ಓದಿನ ಕಡೆ ಹೆಚ್ಚು ಗಮನ ಕೊಡಲು ತಿಳಿಸಿ...
8 ಮತ್ತು ಒಂಭತ್ತನೆಯ ತರಗತಿಯ ಮಕ್ಕಳಿಗೆ ಈ ವರ್ಷ ಮೌಲ್ಯಂಕನ ಪರೀಕ್ಷೆ ಇರುವುದರಿಂದ ಆ ಮಕ್ಕಳಿಗೆ ಸೋಮವಾರ ಅಂದರೆ 5/2/2024 ರಿಂದ ಸಂಜೆ 4.20 ರಿಂದ 5 ಗಂಟೆಯ ವರೆಗೆ ವಿಶೇಷ ತರಗತಿಗಳನ್ನು ಆರಂಭಿಸುತ್ತಿದ್ದೇವೆ... ನಿಮ್ಮ ಮಕ್ಕಳು ಶಾಲಾ ಅವಧಿ ಮುಗಿದ ಬಳಿಕ ಮನೆ ತಲುಪುವುದನ್ನು ಖಚಿತ ಮಾಡಿಕೊಳ್ಳಿ.
ಮತ್ತೊಮ್ಮೆ ಎಲ್ಲಾ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳು ಯೂನಿಫಾರ್ಮ್ ,ಶೂ ,ಹಾಕಿಕೊಂಡು, ಸಭ್ಯವಾದ ರೀತಿಯಲ್ಲಿ ಕಟಿಂಗ್ ಮಾಡಿಸಿ ಶಾಲೆಗೆ ಕಳಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.ಶಾಲೆಯ ಶಿಸ್ತು ಕಾಪಾಡಲು, ಮಕ್ಕಳ ವ್ಯಕ್ತಿತ್ವ ರೂಪಿಸಲು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ನಿಮ್ಮ ಸಹಕಾರ ಅಗತ್ಯ... ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ....
ಇಂದ...
ಮುಖ್ಯ ಶಿಕ್ಷಕರು
ಮತ್ತು ಸಿಬ್ಬಂದಿ
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
No comments:
Post a Comment