ಕಾಡಿನಲ್ಲಿ ರಕ್ತದಾನ..
ಈ ವರ್ಷದ ಬೇಸಿಗೆ ರಜೆಯಲ್ಲಿ ದಗೆಯಿಂದ ರಕ್ಷಿಕೊಳ್ಳಲು ಮಲೆನಾಡಿನ ಕಡೆ ಗೆಳೆಯರ ಜೊತೆಯಲ್ಲಿ ಕಿರು ಪ್ರವಾಸ ಹೋಗಿದ್ದೆ .ಚಿಕ್ಕಮಗಳೂರಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿರುವ ಝರಿ ಇಕೋ ಸ್ಟೇ ನ ಸೌಂದರ್ಯಕ್ಕೆ ಮಾರುಹೋದ ನಾವು ಆ ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಂಡು ,ಜಲಪಾತದಲ್ಲಿ ಮಕ್ಕಳಂತೆ ಆಟವಾಡಿ ವಿಶ್ರಾಂತಿ ತೆಗೆದುಕೊಂಡೆವು.
ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಮುಖ ತೊಳೆದುಕೊಂಡು ಅಲ್ಲೆ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಕಲ್ಲುಹಾಸಿನ ಮೇಲೆ ಕುಳಿತು ಕಾಡಿನ ಪರಿಸರದಲ್ಲಿ ಸಹಜೀವನ ಮಾಡುವ ಹಿರಿಯ ಜೀವದ ಜೊತೆಯಲ್ಲಿ ಕುಳಿತು ಕಾಡು,ಪರಿಸರ ,ಮಾನವನ,ಅತಿಯಾಸೆ ,ಪ್ಲಾಸ್ಟಿಕ್ ಬಳಕೆ, ನೆಮ್ಮದಿ ರಹಿತ ಜೀವನ, ಜೀವನದ ಉದ್ದೇಶ ಹೀಗೆ ತರಾವರಿ ವಿಷಯಗಳ ಬಗ್ಗೆ ಆ ಹಿರಿಯ ಜೀವ ಕಾಳಜಿಯಿಂದ ಮಾತನಾಡುತ್ತಾ ಹೋದರು .ನಾವು ಕೇಳುತ್ತಾ ಹೌದಲ್ಲವೇ? ಮಾನವನ ವಅತಿಯಾಸೆಯಿಂದ ಕಾಡು ಪ್ರಕೃತಿಯನ್ನು ಹೇಗೆ ನಾಶ ಮಾಡಿದ್ದೇವೆ.ಇದರ ಪರಿಣಾಮವಾಗಿ ಪ್ರಕೃತಿ ಮುನಿದರೆ ಅದಕ್ಕೂ ಪ್ರಕೃತಿಯನ್ನೇ ನಿಂದಿಸುವೆವು ಎಂದು ಮನದಲ್ಲೇ ಅಂದುಕೊಂಡೆ.
ಮಾತು ಮುಂದುವರಿದಿತ್ತು ಆ ಹಿರಿಯಜೀವ ಬೆಳಿಗ್ಗೆ ಇಲ್ಲೇ ಇರುವ ಶಿವಲಿಂಗ ಪೂಜಿಸುವಾಗ ಜಿಗಣಿ ಕಚ್ಚಿತು ನವೆಯಾಗುತ್ತಿದೆ ಎಂದು ಕಾಲನ್ನು ಕೆರದುಕೊಂಡು ಮಾತು ಮುಂದುವರಿಸಿದರು .ನಾವೆಲ್ಲರೂ ಇಲ್ಲಿ ಜಿಗಣಿ ಇವೆಯಾ? ಎಂದು ಒಂಒಂದೆದೇ ಧ್ವನಿಯಲ್ಲಿ ಕೇನಕಳಿದೆವು್ಕರು. ಆಸಕ್ತಿಕರವಾದ ಅವರ ಮಾತುಗಳ ಬಿಟ್ಟು ನಮಗರಿವಿಲ್ಲದೇ ನಮ್ಮ ಕೈಗಳು ನಮ್ಮ ದೇಹವನ್ನು ಸವರಿಕೊಳ್ಳಲಾರಂಭಿಸಿದರು ನನ್ನ ಸಹಪಾಠಿಗಳು ನಮಗೆ ಯಾವುದೇ ಜಿಗಣಿ ಕಚ್ಚಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಕಾಲು ಮೇಲಕ್ಕೆತ್ತಿ ಕೂತು ಹಿರಿಯರ ಮಾತಿಗೆ ಕಿವಿಯಾದರು ನನ್ನ ಕೈ ಎಡಗಾಲು ಸ್ಪರ್ಷಿಸಿ ತಪಾಸಣೆ ಮಾಡುವಾಗ ಎಡಗಾಲಿನ ಇಮ್ಮಡಿ ಮೇಲೆ ಕಡಲೆ ಕಾಳು ಗಾತ್ರದ ವಸ್ತು ತಡಕಿತು ಕಾಲು ಬೇಳಕಿಗಿಡಿದು ನೋಡಿದೆ.ಆ ಹಿರಿಯರು ನೋಡಿ ನಗುತ್ತಾ...ಅಹಾ...ರಕ್ತದಾನ ಮಾಡಿರುವಿರಿ ಬಿಡಿ ಎಂದು ನಕ್ಕರು. ನನಗೆ ಏನೂ ಅರ್ಥವಾಗದೇ ಅವರನ್ನು ಮತ್ತು ಸ್ನೇಹಿತರನ್ನು ನೋಡಿದೆ.ಅದೇ ಜಿಗಣಿ ಈಗಾಗಲೇ ಅದು ನಿಮ್ಮ ರಕ್ತ ಹೀರಲು ಆರಂಭಿಸಿದೆ ನಿಧಾನವಾಗಿ ಕೀಳಿ ಎಂದು ಅವರೇ ಕಿತ್ತು ಬಿಸಾಡಿದರು. ಅದರ ಹಿಂದೆ ರಕ್ತವೂ ಸುರಿಯುತ್ತಿತ್ತು. ನಲವತ್ತೆಂಟು ವರ್ಷದಲ್ಲಿ ನಾಡಿನಲ್ಲಿ ಎರಡು ಬಾರಿ ರಕ್ತದಾನ ಮಾಡಿದ ನನಗೆ ಕಾಡಿನಲ್ಲಿ ಜಿಗಣಿಗೆ ರಕ್ತದಾನ ಮಾಡಿದ್ದು ಮೊದಲ ಸಲ ! ಭಯ ಆತಂಕದಿಂದ ಇದ್ದ ನನ್ನ ಮೊಗ ನೋಡಿ ಆ ಹಿರಿಯರೆ ಸಮಾಧಾನ ಮಾಡುತ್ತಾ ಏನೂ ತೊಂದರೆಯಿಲ್ಲ ಸ್ವಲ್ಪ ಕಾಲ ರಕ್ತ ಸುರಿದು ನಿಲ್ಲುತ್ತದೆ.
ಎಂದು ಜಿಗಣೆಯ ಬಗ್ಗೆ ವಿವರವಾಗಿ ಹೇಳಿದರು.
ಇದೇ ಜಿಗಣೆ ಔಷಧವಾಗಿ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇತ್ತೀಚೆಗೆ ಇದು ಲೀಚ್ ಥೆರಪಿ ಎಂದು ಖ್ಯಾತವಾಗುತ್ತಿದೆ. ಜಿಗಣೆಯ ಸಹಾಯದಿಂದ ಕಾಯಿಲೆ ಇರುವ ಜಾಗದಿಂದ ದೋಷಪೂರಿತ ರಕ್ತವನ್ನು ಹೊರ ತೆಗೆಯುವರು ಇದನ್ನು ಜಲೌಕಾವಚರಣ ಎಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ. ದೇಹವನ್ನು ಶುದ್ಧೀಕರಿಸುವ ವಿಧಾನ ಇದು. ಅಂದ ಹಾಗೆ ಈ ಚಿಕಿತ್ಸೆಗೆ ಎಲ್ಲಾ ಬಗೆಯ ಜಿಗಣೆಗಳು ಬರುವುದಿಲ್ಲ. ಅದರಲ್ಲಿ ಕೂಡ ವಿಷ ಹಾಗೂ ವಿಷ ರಹಿತ ಎನ್ನುವ ವಿಧವಿದೆ. ವಿಷಭರಿತ ಜಿಗಣೆಗಳು ಕಚ್ಚಿದ ಜಾಗದಲ್ಲಿ ತುರಿಕೆ ಹಾಗೂ ಇತರೇ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದೆ. ಎಂದಾಗ ನನಗೆ ಕಚ್ಚಿದ ಜಿಗಣೆ ಯಾವುದಿರಬಹುದು ಎಂದು ಮತ್ತೂ ಆತಂಕವಾಯಿತು.
ಹಿರಿಯರು ಮಾಹಿತಿ ಹೇಳುತ್ತಾ ಹೋದರು.
ಒಮ್ಮೆ 5ರಿಂದ 30 ಎಂಎಲ್ ರಕ್ತವನ್ನು ಹೀರುವ ಸಾಮಾರ್ಥ್ಯ ಇದಕ್ಕೆ ಇರುತ್ತದೆ. ಕಾಯಿಲೆ ಇರುವ ಜಾಗದಿಂದ ದೂಷಿತ ರಕ್ತ ಹೀರುವುದರಿಂದ ತಕ್ಷ ಣವೇ ಗಾಯ ಹಾಗೂ ಊತವಿರುವ ಸ್ಥಾನಗಳಲ್ಲಿ ನೋವು ಕಡಿಮೆ ಆಗುತ್ತದೆ. ಜಿಗಣೆಯು ಮೊದಲು ಕಚ್ಚಿದಾಗ ಲಾವಾರಸವನ್ನು ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ಹಿರುಡಿನ್ ಎಂಬ ಪ್ರೋಟಿನ್ ಇರುತ್ತದೆ. ಇದರಿಂದ ಹೀರಿಕೊಳ್ಳುವ ರಕ್ತ ಹೆಪ್ಪು ಗಟ್ಟುವುದಿಲ್ಲ. ಅಲ್ಲಲ್ಲಿ ನಿಂತಿರುವ ಕೆಟ್ಟ ರಕ್ತವನ್ನು ಹೀರಿಕೊಂಡು ರಕ್ತ ಸಂಚಾರ ವೃದ್ಧಿಸಿ ಗಾಯವನ್ನು ಶೀಘ್ರವಾಗಿ ವಾಸಿ ಮಾಡುತ್ತದೆ.
ಚರ್ಮ ಹಾಗೂ ರಕ್ತ ವಿಕಾರಗಳಲ್ಲಿ ಇದು ಪರಿಣಮಕಾರಿ. ಇಸುಬು, ಸೋರಿಯಾಸಿಸ್, ಮೊಡವೆ, ವೇರಿಕೋಸ್, ಅಲ್ಸರ್, ಮಧುಮೇಹದ ಗಾಯ, ಸಂಧಿನೋವು ಸೇರಿದಂತೆ ಇತರ ರೋಗಗಳಲ್ಲಿ ಜಿಗಣಿ ಚಿಕಿತ್ಸೆ ಫಲಕಾರಿಯಾಗಿದೆ ಎಂದರು...
ಅವರ ಮಾತು ಕೇಳಿ ಸ್ವಲ್ಪ ಸಮಾಧಾನದಿಂದ ಕಾಲು ನೋಡಿಕೊಂಡೆ ಇನ್ನೂ ರಕ್ತ ಸುರಿಯುತ್ತಿತ್ತು...ನನ್ನ ಆತಂಕದ ಮುಖ ನೋಡಿದ ಹಿರಿಯರು ಲೀಚ್ ತೆರಪಿ ಹೆದರಬೇಡಿ ಎಂದು ಮತ್ತೊಮ್ಮೆ ಧೈರ್ಯ ಹೇಳಿದರು...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment