24 February 2023

ಅಂತರ್ಜಾಲದ ಮಾಯಾಲೋಕ...

 


ಅಂತರ್ಜಾಲದ ಮಾಯಾಲೋಕ 



"ಬಿಟ್ಟೆನೆಂದರೂ ಬಿಡದೀ  ಮಾಯೆ" ಎಂಬಂತೆ ಅಂತರ್ಜಾಲದ ಮಾಯಾಲೋಕ ನಮ್ಮನ್ನು ಆವರಿಸಿದೆ. ಹುಟ್ಟಿನಿಂದ ಚಟ್ಟದ ವರೆಗೂ ಅದು ಕಬಂಧ  ಬಾಹುಗಳು ವಿಸ್ತಾರವಾಗುತ್ತಲೇ ಇವೆ.


ಅಂತರ್ಜಾಲ ಎಲ್ಲರ ಕೈಸೇರಿದ ಪರಿಣಾಮ

ತಂತ್ರಜ್ಞಾನದ ಬೆಳವಣಿಗೆಯೂ ಜೊತೆಗೂಡಿ  ಮೊಬೈಲ್ ಬಳಕೆ ಮತ್ತು ಮೊಬೈಲ್ ಡಾಟಾ ಕೈಗೆಟುಕುವಂತಾದಾಗ   ಮಾಯಾಲೋಕ ಎಲ್ಲರ ಸೆಳೆದು ತನ್ನ ತೆಕ್ಕೆಗೆ ಹಾಕಿಕೊಂಡಿತು.

ಇದರಿಂದಾಗಿ ಸ್ವಲ್ಪ ಮಟ್ಟಿಗೆ ಅನುಕೂಲಗಳಾದರೂ ಖದೀಮರಿಗೆ ಸುಗ್ಗಿಯ ಕಾಲವಾಯಿತು.

ಅಪರಾಧಗಳ ಹೆಚ್ಚಳ, ಹಾಕಿಂಗ್, ದೇಶದ್ರೋಹ ಚಟುವಟಿಕೆಗಳು ಅಂತರಜಾಲದ ನೆರವು ಪಡೆದು ಈಗ ದೇಶಗಳ ಆರ್ಥಿಕ ಚಟುವಟಿಕೆಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದಿರುವುದು ದುರದೃಷ್ಟಕರ.


ಅದರಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ಬಡವರ ಬೆವರಿನ ಹಣ, ಮದ್ಯಮ ವರ್ಗದ ಸಂಬಳದಾರರ ಹಣ ಕ್ಷಣಾರ್ಧದಲ್ಲಿ ಖದೀಮರ ಪಾಲಾಗುತ್ತಿರುವುದನ್ನು ಪ್ರತಿ ದಿನ ಪತ್ರಿಕೆಯಲ್ಲಿ ಓದುವಾಗ ಬೇಸರವಾಗುತ್ತದೆ.


ಜನವರಿ 2023 ರ ಜನವರಿ ತಿಂಗಳೊಂದರಲ್ಲೆ   ಕರ್ನಾಟಕದಲ್ಲಿ

36 ಕೋಟಿ ರೂಗಳನ್ನು ಈ ಸೈಬರ್ ವಂಚಕರು ನುಂಗಿ ನೀರು ಕುಡಿದಿದ್ದಾರೆ ! ಅದರಲ್ಲಿ ಕೇವಲ 1  ಕೋಟಿ ರಿಕವರಿ ಮಾಡಿಕೊಡಲಾಗಿದೆ.ಇದು ಸೈಬರ್ ಕ್ರೈಮ್ ಕರಾಳತೆಯ ಒಂದು ಉದಾಹರಣೆ ಮಾತ್ರ. 2019 ರಲ್ಲಿ 71 ಕೋಟಿ ಹಣ , 2022 ರಲ್ಲಿ 363 ಕೋಟಿ ಹಣ ಸೈಬರ್ ಕಳ್ಳರ ವಶವಾಗಿದೆ ಎಂದು ಅಧಿಕೃತವಾಗಿ ಘೋಷಣೆಗಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. 

ನಮ್ಮ ಖಾತೆಗಳ ವಿವರ, ಅಧಾರ್ ,ಓಟಿಪಿ, ಪಿನ್, ಮುಂತಾದ ವೈಯಕ್ತಿಕ ವಿವರಗಳನ್ನು ಅಪರಿಚಿತರ ಬಳಿ  ಹಂಚಿಕೊಳ್ಳದಿರೋಣ .

ಇನ್ನೂ ಬೇರೆ ಬೇರೆ ಸೈಬರ್ ಅಪರಾಧಗಳ ಮೂಲ ನಮ್ಮ ಅಂತರ್ಜಾಲ  ಅಂತರ್ಜಾಲವನ್ನು ವಿವೇಚನೆಯಿಂದ ಬಳಸೋಣ ವಂಚನೆಯ ಜಾಲಕ್ಕೆ ಸಿಲುಕದಿರೋಣ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: