19 February 2023

ಸ್ನೇಹದ ವರತೆ...



 

*ಸ್ನೇಹದ ವರತೆ*

ವಾಟ್ಸಪ್ ಬಂದು ನೂರಾರು ಬಳಗಗಳು ನಮ್ಮ ಸಮಯವನ್ನು ಹಾಳು ಮಾಡುವುದನ್ನು ಕಂಡು ಇತ್ತೀಚೆಗೆ ಕೆಲ ಬಳಗಗಳಿಂದ ಕೆಲಸದ ಒತ್ತಡದ ನೆಪ ಹೇಳಿ ಹೊರಬಂದ ಉದಾಹರಣೆ ಇವೆ. ಮೊನ್ನೆ ಇಂತದೇ ಒಂದು ಬಳಗಕ್ಕೆ ಸೇರಿಸಿದ ಕೂಡಲೇ ಹೊರಬರುವ ಮನಸಾಗಿ ಒಮ್ಮೆ ಗ್ರೂಪ್ ಇನ್ಪೋ ನೋಡಿದೆ..ಪರಿಚಿತ ಗೆಳೆಯ ಶಾಂತಪ್ಪ ಮತ್ತು ನನ್ನ ಬಾಲ್ಯದಲ್ಲಿ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸರೋಜಿನಿ ರವರ ಹೆಸರು ಇದ್ದದ್ದು ನೋಡಿ ಸಂತಸವಾಗಿ ಗುಂಪಿನಲ್ಲೇ ಉಳಿದೆ.
ಅಷ್ಟರಲ್ಲಾಗಲೇ ಹದಿನೆಂಟು ನಮ್ಮ ಹೈಸ್ಕೂಲ್ ಗೆಳೆಯ ಗೆಳತಿಯರ ನಂಬರ್ ಕಲೆಕ್ಟ್ ಮಾಡಿ ನಮ್ಮ ಬಳಗಕ್ಕೆ ಸೇರಿಸಿದ್ದರು. ನಾನು ಖುಷಿಯಿಂದಲೇ ಬಳಗಕ್ಕೆ ಮೊದಲ ಪೋಸ್ಟ್ ಹಾಕಿದೆ ಅದು ಹೀಗಿತ್ತು..

"ಮೊದಲು ನಮ್ಮ ಬಳಗದ ಸರ್ವರಿಗೂ ಸಿಹಿಜೀವಿಯ ನಮನಗಳು...
ಬಹಳ ವರ್ಷಗಳ ನಂತರ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಸೌಭಾಗ್ಯ ದೊರೆತಿದೆ...
ನೆನಪುಗಳು ಒತ್ತರಿಸಿಕೊಂಡು ಬರುತ್ತಿವೆ...ನಿಜ ಆ ದಿನಗಳೇ ಗೋಲ್ಡನ್ ಡೇಸ್.ಇಂದು ನಾವೇನಾಗಿರುವೆವೋ ಅದಕ್ಕೆ ಆ ದಿನಗಳೇ ಕಾರಣ .ಅಂದು ಕಲಿತ ಶಾಲೆ ,ಒಡನಾಡಿಗಳು ,ಊರು ಇವುಗಳನ್ನು ಮರೆಯಲು ಸಾದ್ಯವೇ ಇಲ್ಲ.

ಮತ್ತೊಮ್ಮೆ ನಮ್ಮನ್ನು ಬೆಸೆಯಲು ಶ್ರಮ ಮತ್ತು ಕ್ರಮ ವಹಿಸಿದ ಶಾಂತಪ್ಪ ಮತ್ತು ಸರೋಜಿನಿ ರವರಿಗೆ ನನ್ನ ಮನದಾಳದ ಕೃತಜ್ಞತೆಗಳು.ನಿಮ್ಮ ಪ್ರಯತ್ನದ ಫಲವಾಗಿ ಈಗ ನಮಗೆ ಹದಿನೆಂಟು ಅಮೂಲ್ಯ ಬಾಲ್ಯದ ರತ್ನಗಳು ದೊರೆತಿವೆ . (ಈಗ ಗ್ರೂಪ್ ಸಂಖ್ಯೆ18)

ನನಗೀಗ ಸಿಕ್ಕಿವೆ
ಬಾಲ್ಯದ ಅಮೂಲ್ಯ
ರತ್ನಗಳು ಹದಿನೆಂಟು|
ಮೆಲಕು ಹಾಕುತಲಿರುವೆ
ಆ.. ದಿನಗಳಲ್ಲಿ ನಾವಾಡಿದ
ತರಲೆ ,ಕೀಟಲೆ ,ಸವಿನೆನೆಪುಗಳ.
ಮರೆಯುವುದಾದರೂ ಹೇಗೆ
ನಮ್ಮ ಅಮೂಲ್ಯ ಸ್ನೇಹದ ನಂಟು ||

ಇನ್ನೂ ನನ್ನ ಕಿರು ಸಾಹಿತ್ಯದ ಹಾದಿಗೆ
ಶಾಂತಪ್ಪ ಮತ್ತು ಸರೋಜಿನ ನಿಮ್ಮ ಮೆಚ್ಚುಗೆ ಮಾತನಾಡಿ ಪ್ರೋತ್ಸಾಹ ನೀಡಿರುವಿರಿ ನಿಮ್ಮ ಹಾರೈಕೆಗೆ ಧನ್ಯವಾದಗಳು..

ಮೊದ ಮೊದಲು ಕೊರಗಿತ್ತು
ಎಲ್ಲಾ ಸ್ನೇಹಿತರ ಭೇಟಿಯಾಗಲಿಲ್ಲ
ಎಂಬ ಕೊರತೆ |
ಈಗ ಚಿಮ್ಮುತಿದೆ
ಸ್ನೇಹದ ವರತೆ ||

ಎಲ್ಲರೂ ಒಂದೆಡೆ ಮುಖತಃ ಸೇರಿ ನಮ್ಮ ಬಾಲ್ಯದ ದಿನಗಳ ನೆನಪುಗಳು ನೆನದು ಸಂಭ್ರಮಿಸೋಣ..."

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಳಗದ ಕೆಲ ಸ್ನೇಹಿತರು ನಾವು ಮರೆತಿರುವ ನಮ್ಮ ಹೈಸ್ಕೂಲ್ ಸಹಪಾಠಿಗಳ ಹೆಸರನ್ನು ಪಟ್ಟಿ ಮಾಡಿ ಹಾಕಿದರು. ಅವರ ಜ್ಞಾಪಕ ಶಕ್ತಿಯನ್ನು ಹೊಗಳದೇ ಇರಲಾಗಲಿಲ್ಲ  .
ಅವರ ಹೆಸರುಗಳೆಂದರೆ ಮಹೇಶ,ಮಂಜುನಾಥ,ಇಂದ್ರಮ್ಮ
,ಗೌರಮ್ಮ,ಶಾರದಮ್ಮ,ಯಶೋದಾ,ಸಿದ್ದಪ್ಪ,ಪ್ರಭು ,ರಾಜಪ್ಪ, ಭಾಗ್ಯಮ್ಮ,  ರಂಗನಾಥ, ಅಂಜಿನಪ್ಪ, ಫಯಾಜ್,ಗೀತಾ,  ಗೋವಿಂದರಾಜು, ಗಿರಿಜಮ್ಮ, ಗುರು ಸಿದ್ದಪ್ಪ, ಲಕ್ಷ್ಮಣ  ಮೀನಾಕ್ಷಿ, ಹೊರಕೇರಪ್ಪ, ನೇತ್ರಾವತಿ, ನಂಜುಂಡಸ್ವಾಮಿ,ನಾಗವೇಣಿ, ಪುಷ್ಪಾವತಿ, ಪ್ರಕಾಶ, ರಿಯಾಜ್,ರಾಜೇಶ್ವರಿ,ಸನಾವುಲ್ಲಾ, ರಾಜಮ್ಮ,ರೇಖಾಮಣಿ, ಶೇಕ್ ಅಹಮದ್ ,ಶಿವಕುಮಾರ್, ಸುಲೋಚನಾ, ಸುಧಾಮಣಿ ಸಾವಿತ್ರಮ್ಮ,ಸಣ್ಣತಿಮ್ಮಪ್ಪ, ಜೆ ತಿಪ್ಪೇಸ್ವಾಮಿ, ಉಷಾ ರಾಣಿ ...ಹೀಗೆ ಸುಮಾರು ಐವತ್ತು ಬಾಲ್ಯದ ಮುಖಗಳು ಕಣ್ಮುಂದೆ ಹಾದು ಹೋದವು ಆಗಾಗ್ಗೆ ಕಂಡ  ಕೆಲ ಮುಖಗಳು  ಸ್ಪಷ್ಟವಾಗಿ ಕಂಡರೆ ಕೆಲ  ಮುಖಗಳು ಅಸ್ಪಷ್ಟವಾಗಿ  ಕಾಣಿಸಿದವು. ಆ ಎಲ್ಲ ನನ್ನ ಬಾಲ್ಯದ ಒಡನಾಡಿಗಳನ್ನು ಮುಖತಃ ಭೇಟಿಯಾಗುವ ಕಾಲ ಸದ್ಯದಲ್ಲೇ  ಬರಲೆಂದು ಕಾತರದಿಂದ ಕಾಯುತ್ತಿದ್ದೇನೆ....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

No comments: