ವಿದ್ಯಾರ್ಥಿಗಳಿಗಾಗಿ ಉತ್ತಮ ಆಹಾರಾಭ್ಯಾಸಕ್ಕೆ ಕೆಲ ಸಲಹೆಗಳು.
ಅಮೇರಿಕಾದ ಒಂದು ವಿಶ್ವ ವಿದ್ಯಾಲಯದ ಸಂಶೋಧನೆಯ ಪ್ರಕಾರ ಜಗತ್ತಿನಲ್ಲಿ ಬಹಳ ಜನ ಸ್ಥೂಲಕಾಯತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ವಿಪರೀತವಾಗಿ ಹೆಚ್ಚಾದ ದೇಹದ ಕೊಬ್ಬಿನಂಶವು ಮಕ್ಕಳ ಆರೋಗ್ಯ ಅಥವಾ ಆರೋಗ್ಯಕರ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿಯನ್ನು ಬಾಲ್ಯದ ಸ್ಥೂಲಕಾಯತೆ ಎಂದು ಕರೆಯುತ್ತಾರೆ. ಮಕ್ಕಳಲ್ಲಿರುವ ಈ ಸಮಸ್ಯೆಗೆ ಸ್ಥೂಲ ಕಾಯತೆ ಅನ್ನುವುದಕ್ಕಿಂತ ಹೆಚ್ಚಾಗಿ ’ಹೆಚ್ಚಿನ ತೂಕ’ ಎನ್ನುವುದನ್ನು ಬಳಸುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವದ ಮೇಲೆ ಸ್ಥೂಲ ಕಾಯತೆ ಅನ್ನುವ ಶಬ್ಧ ಪ್ರಭಾವ ಬೀರುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ.
ಮಕ್ಕಳ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆಹಾರ ದಿನದ ಪ್ರಯುಕ್ತ (ಅಕ್ಟೋಬರ್ ೧೬) ಮಕ್ಕಳಿಗೆ ಈ ಕೆಳಕಂಡ ಸಲಹೆಗಳನ್ನು ನೀಡಲು ಬಯಸುವೆ.
ಆತ್ಮೀಯ ಮಕ್ಕಳೆ...
ನಿಮ್ಮ ದೇಹ ಎಂಬ ವಾಹನದ ಚಲನವಲನಗಳು ಆಹಾರ ಎಂಬ ಇಂಧನವನ್ನು ಆಧರಿಸಿದೆ. ಆಹಾರದ ರುಚಿಗಿಂತ ಅದು ಆರೋಗ್ಯಕ್ಕೆ ಪೂರಕವೇ ಅಲ್ಲವೇ ಎಂಬುದು ಮುಖ್ಯ. ನಾಲಿಗೆಯ ಚಾಪಲ್ಯದ ನಿಯಂತ್ರಣದೆಡೆಗೆ ಎಳೆವಯಸ್ಸಿನಿಂದಲೇ ಗಮನ ಹರಿಸಿದರೆ ಮಾತ್ರ ಭವಿಷ್ಯತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲಾದೀತು.
ಒಂದು ವೇಳೆ ನಿಮ್ಮ ಮನೆಯಲ್ಲಿ ಎಣ್ಣೆಯನ್ನು ಹೆಚ್ಚೆಚ್ಚಾಗಿ ಬಳಸುವ ಪದ್ಧತಿ ಇದ್ದರೆ ಕಡಿಮೆ ಸೇವಿಸುವುದು ಒಳಿತು ಮಧ್ಯಾಹ್ನ ಅನ್ನ ಕಡಿಮೆ ಇರಲಿ, ರಾಗಿಮುದ್ದೆ, ಚಪಾತಿ ಮತ್ತು ತರಕಾರಿಗಳು ಹೆಚ್ಚಾಗಿರಲಿ. ಮೊಸರಿನ ಬದಲು ಮಜ್ಜಿಗೆಯೇ ಒಳ್ಳೆಯದು, ಹಪ್ಪಳ, ಸಂಡಿಗೆಗಳ ಬದಲಿಗೆ ಈರುಳ್ಳಿಯನ್ನು ದುಂಡಾಗಿ ಬಿಲ್ಲೆಗಳಂತೆ ಕತ್ತರಿಸಿಕೊಂಡು ಸೇವಿಸಿರಿ. ಕಣ್ಣುಗಳ ಆರೋಗ್ಯ, ಕಾಂತಿವರ್ಧನೆಗೆ ಕ್ಯಾರೆಟ್ ಮತ್ತು ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಿರಿ.ರಾತ್ರಿ ಊಟ ಸರಳವಾಗಿ ಮಿತವಾಗಿರಲಿ.
ಬಾಲ್ಯದಲ್ಲಿ ನಿಮಗೆ ತುಂಬಾ ಇಷ್ಟವಾಗಿದ್ದ ಚಾಕೊಲೇಟ್, ಐಸ್ಕ್ರೀಂಗಳ ಆಕರ್ಷಣೆ ಹದಿಹರೆಯದಲ್ಲೂ ನಿಮ್ಮನ್ನು ಬಿಡುತ್ತಿಲ್ಲ ಅಲ್ಲವೇ? ದೇಹದ ತೂಕ ಹೆಚ್ಚಿಸುವುದು ಪರ್ಸಿನ ತೂಕ ಕಡಿಮೆ ಮಾಡುವುದು ಇವೆರಡೇ ಈ ತಿಂಡಿಗಳಿಂದ ಆಗುವ ಸಾಧನೆಗಳು. ಬೇಕರಿ ತಿಂಡಿಗಳಾದರೂ ಅಷ್ಟೇ.
ನೀರು ಕಾಯಿಸಿ ಕುಡಿಯುವುದು ಉತ್ತಮ. ಸ್ವಲ್ಪ ದೂರ ಹೋಗಿ ಒಳ್ಳೆಯ ನೀರು ತರಬೇಕಾದಲ್ಲಿ ಆ ಶ್ರಮಕ್ಕೆ ಹಿಂಜರಿಯಬೇಡಿ.
ಜಂಕ್ ಪುಡ್ ತಿನ್ನುವುದನ್ನು
ಮಕ್ಕಳಿಂದ ಹಿಡಿದು ಮುದಕರ
ವರೆಗೂ ಇಷ್ಟ ಪಡುವುದು ಅತಿ
ರುಚಿ ಅನಿಸುವುದರಿಂದ ಮತ್ತು
ವಿವಿಧ ಅಂಗಡಿಗಳಲ್ಲಿ ಸುಲಭ
ವಾಗಿ ದೂರೆಯುವುದರಿಂದ
ಮತ್ತು ಪ್ರಿಯಕರವಾಗಿರುವುದ-
ರಿಂದ ಇವುಗಳನ್ನು ಉಪಯೋಗಿಸುತ್ತಾರೆ.
ಇವುಗಳು ಆರೋಗ್ಯದ
ಮೇಲೆ ತೀವ್ರ ದುಷ್ಪರಿಣಾಮ
ಬೀರುವದಲ್ಲದೆ ಕಾಲಾಂತರದಲ್ಲಿ
ಚಟವಾಗುತ್ತದೆ.ಇದನ್ನೇ ಮುಂದುವರಿಸಿದರೆ ಸರಿಪಡಿಸ-
ಲಾಗದ ಸನ್ನಿವೇಶಕ್ಕೆ ಬರುವುದು
ಖಂಡಿತ.
ಹೆಚ್ಚಿನ ಎಣ್ಣೆಯನ್ನು ರುಚಿಗಾಗಿ
ಉಪಯೋಗಿಸುವುದರಿಂದ
ಇದು ಜಂಕ್ ಪುಡ್ ಆಗಿ,ಅತಿ
ಹೆಚ್ಚು ಉಪ್ಪು, ಸಕ್ಕರೆ ಮತ್ತು
ಕೊಬ್ಬು ಹೆಚ್ಚಾಗಿ ಬೊಜ್ಜಿಗೆ
ಅವಕಾಶ ನೀಡುತ್ತದೆ. ಮುಂದೆ
ಇವು ಕಾಲು ನೋವು, ಕೀಲು
ನೋವು ಮತ್ತು ಇತರ ಅಂಗಾಂಗಳು ನೋವಾಗಲು
ಆರಂಭಗೊಳ್ಳುತ್ತದೆ.ಕ್ರಮೇಣ
ಸಕ್ಕರೆ ಖಾಯಿಲೆ, ರಕ್ತದೊತ್ತಡ,
ಆಲಸ್ಯ ಮುಂತಾದ ರೋಗಗಳಿಗೆ ನಾವಾಗಿಯೇ
ಆಹ್ವಾನಿಸಿದಂತಾಗುತ್ತದೆ.ಖಿನ್ನ
ತೆಗೆ ಒಳಗಾಗುವ ಪರಿಸ್ಥಿತಿಗೆ
ತಲಪುತ್ತೇವೆ.
ಜಂಕ್ ಪುಡ್ ಸೇವನೆ ಚಟವಾದರೆ ಇದರಿಂದ ಮುಕ್ತಿ ಪಡೆಯವುದು ಮುಂದಿನ ದಿನಗಳಲ್ಲಿ
ಬಹು ಕಷ್ಟ. ಆದ್ದರಿಂದ ಬಾಲ್ಯದಲ್ಲಿ
ಆದಷ್ಟೂ ಜಂಕ್ ಪುಡ್ ಗಳಿಂದ ದೂರವಿರಿ .ಅತಿಯಾದ ಚಾಕೊಲೆಟ್ ಮತ್ತು ಅತಿಯಾದ ಸಿಹಿ ಸೇವನೆಯು ನಿಮ್ಮ ಹಲ್ಲುಗಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಯಾವುದೇ ಆಗಲಿ ಮಿತಿಯಲ್ಲಿ ಇರಲಿ.
ಆಲೂ , ಬೀಟ್ರೂಟ್ನಂಥ ತರಕಾರಿಗಳು, ಮಾವು, ಬಾಳೆ, ಸಪೋಟಾ, ದ್ರಾಕ್ಷಿ, ಖರ್ಜೂರ, ಒಣದ್ರಾಕ್ಷಿ, ಗೋಡಂಬಿಗಳಿಂದ ವಿಮುಖರಾಗಬೇಡಿ. ಸೊಪ್ಪುಗಳು ಬದನೆ, ಹಾಗಲಗಳೂ ಸ್ವಾದಿಷ್ಟವೇ. ಮಾಂಸಾಹಾರಿಯಾಗಿದ್ದಲ್ಲಿ ಮೀನು ತಿನ್ನಿ, ಮೊಟ್ಟೆಗಳನ್ನು ಸೇವಿಸಿ. ಒಟ್ಟಾರೆ ನೀವು ತಿನ್ನುವ ಆಹಾರ ಪೌಷ್ಟಿಕಾಹಾರ ಆಗಿರಲಿ ಮತ್ತು ಸಮತೋಲನದ ಆಹಾರವಾಗಿರಲಿ. ಅಸಮತೋಲನ ಮತ್ತು ಅವೈಜ್ಞಾನಿಕ ಪದ್ದತಿಯಂತೆ ಆಹಾರ ಸೇವಿಸಿದರೆ ಔಷಧವೇ ಆಹಾರವಾಗುತ್ತದೆ.ಅದರ ಬದಲಿಗೆ ಆಹಾರವೇ ಔಷಧವಾಗಲಿ . ಆರೋಗ್ಯಕರ ಕಾಯ ನಮ್ಮದಾಗಲಿ ಸ್ವಸ್ಥ ಸಮಾಜ ಸುಂದರ ಸಮಾಜ ಎಂಬುದು ನಮ್ಮ ಧ್ಯೇಯವಾಗಲಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
No comments:
Post a Comment