ಪ್ರಕೃತಿ ಇರುವುದು ನಮ್ಮ ಆಸೆಯ ಪೂರೈಸಲು ,ನಮ್ಮ ದುರಾಸೆಗಳನ್ನಲ್ಲ. ನಾವು ಪ್ರಕೃತಿಯ ಜೊತೆಗೆ ಸಾಮರಸ್ಯವನ್ನು ಕಾಪಾಡಿಕೊಂಡು ಬಾಳಬೇಕು. ಆಗ ನಮ್ಮ ಜೀವನವು ಸುಗಮವಾಗಿ ಸಾಗುವುದು. ನಾವು ಪ್ರಕೃತಿಯ ಮೇಲೆ ಅತ್ಯಾಚಾರ ಮಾಡಿ, ಭೂತಾಯಿಯ ಗರ್ಭಕ್ಕೆ ಕೈ ಹಾಕಿದರೆ, ಹಸಿರುಮನೆ ಪರಿಣಾಮ, ಜಾಗತಿಕ ತಾಪಮಾನ, ಅತಿವೃಷ್ಟಿ ಅನಾವೃಷ್ಟಿ, ಭೂಕಂಪ ಇತ್ಯಾದಿಗಳ ಮೂಲಕ ನಮಗೆ ಪ್ರಕೃತಿ ಮಾತೆ ಬಹುದೊಡ್ಡ ಪಾಠ ಕಲಿಸುವಳು.ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಕಾರಣರಾಗುತ್ತೇವೆ .
No comments:
Post a Comment