ಬಾಲ್ಯದಲ್ಲಿ ನಾವು ಊಟ ಮಾಡುವಾಗ ಮನೆಯಲ್ಲಿ ಮಾತ್ರ ಗಂಗಳದಲ್ಲಿ ( ತಟ್ಟೆ) ಊಟ ಮಾಡುತ್ತಿದ್ದೆವು .ಹೊಲ ಮತ್ತು ತೋಟಗಳಿಗೆ ಹೋದರೆ .ಹೊಲದಲ್ಲಿ ಸಿಗುವ ಅಳ್ಳ ಎಲೆ(ಔಡಲ) ,ಮುತ್ತುಗದ ಎಲೆ, ಅಥವಾ ಬಾಳೆ ಎಲೆಗಳಲ್ಲೇ ನಮ್ಮ ಊಟ. ಬಾಡೂಟವಾದರೆ ಅಡಿಕೆ ಪಟ್ಟೆಯೇ ಆಗಬೇಕಿತ್ತು. ಈ ಮೇಲಿನ ಅಷ್ಟೂ ನೈಸರ್ಗಿಕ ಊಟದ ಪರಿಕರಗಳು ನಮ್ಮ ಪರಿಸರಕ್ಕೆ ಪೂರಕವಾಗಿ ಮಾಲಿನ್ಯ ರಹಿತವಾಗಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು.
ಈಗಲೂ ನಾವು ನಮ್ಮ ಹಳ್ಳಿಗೆ ಹೋದರೆ ಬಾಳೆ ಎಲೆಯ ಊಟವೇ ಆಗಬೇಕು. ನಮ್ಮ ಮಕ್ಕಳೂ ಸಹ ಬಾಳೆ ಎಲೆ ಊಟಕ್ಕೆ ಅಡಿಕ್ಟ್ ಆಗಿರುವರು. " ದೊಡ್ಡಪ್ಪ ತೋಟದಲ್ಲಿ ಬಾಳೆ ಎಲೆ ತೊಗೊಂಡ್ ಬಾ ಊಟಕ್ಕೆ " ಎಂದು ನನ್ನ ಅಣ್ಣನಿಗೆ ಪ್ರೀತಿಯಿಂದಲೇ ಆರ್ಡರ್ ಮಾಡುತ್ತಾರೆ .
ನಮ್ಮಣ್ಣನೂ ಸಹ ನಾವೂ ಊರಲ್ಲಿ ಇರುವವರೆಗೂ ನಮಗೆ ಬಾಳೆ ಎಲೆಯ ಊಟಕ್ಕೆ ಸರ್ವ ತಯಾರಿ ಮಾಡಿರುತ್ತಾರೆ.
ಬಾಳೆಲೆಯ ಊಟ ಮಾಡಿದರೆ ಆಗುವ ಪ್ರಯೋಜನಗಳು ಒಂದೆರಡಲ್ಲ
ಬಾಳೆ ಎಲೆಗಳಲ್ಲಿ ಇರುವ ಪಾಲಿಫಿನಾಲ್ಸ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು, ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಆಹಾರದಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆ ಮೂಲಕ ಬಾಳೆ ಎಲೆ ಊಟ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಬಾಳೆ ಎಲೆಗಳು ಮೇಣದ ತೆಳುವಾದ ಪದರವನ್ನು ಹೊಂದಿದ್ದು, ಅದು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಬಾಳೆ ಎಲೆಯ ಮೇಲೆ ಬಿಸಿ ಆಹಾರವನ್ನು ನೀಡಿದಾಗ, ಮೇಣ ಕರಗಿ ಆಹಾರದೊಂದಿಗೆ ಬೆರೆಯುತ್ತದೆ. ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇಂದಿನ ಕಾಲದಲ್ಲಿ ಪರಿಸರ ಮಾಲಿನ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಅಥವಾ ಸ್ಟೈರೊಫೊಮ್ ಫಲಕಗಳನ್ನು ಪಾರ್ಟಿಯಲ್ಲಿ ಬಳಸಲಾಗುತ್ತದೆ. ತಿಂದ ನಂತರ ಈ ತಟ್ಟೆಗಳು ಕೊಳೆಯುವುದು ಕಷ್ಟ. ಬದಲಾಗಿ ನೀವು ಬಾಳೆ ಎಲೆಗಳನ್ನು ಬಳಸಬಹುದು. ಬಾಳೆ ಎಲೆಗಳಲ್ಲಿ ಹೆಚ್ಚು ಬಡಿಸಲು ಜಾಗ ಇರುತ್ತದೆ. ಇದರ ಹೊರತಾಗಿ, ಬಾಳೆ ಎಲೆಯನ್ನು ಸ್ವಚ್ಛಗೊಳಿಸಲು ಹೆಚ್ಚು ನೀರಿನ ಅಗತ್ಯವಿಲ್ಲ. ಇದು ಅತ್ಯಂತ ನೈರ್ಮಲ್ಯವಾಗಿದೆ.
ಬಾಳೆ ಎಲೆಗಳು ಯಾವುದೇ ರೀತಿಯ ರಾಸಾಯನಿಕವನ್ನು ಹೊಂದಿರುವುದಿಲ್ಲ. ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಪೂರೈಸುವ ಮೂಲಕ, ಕರಗಿದ ಪ್ಲಾಸ್ಟಿಕ್‌ನ ಭಾಗವು ನಮ್ಮ ಹೊಟ್ಟೆಗೆ ಹೋಗಬಹುದು. ಅದು ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಬಾಳೆ ಎಲೆಗಳ ಮೇಲೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಅದ್ದರಿಂದ ಪರಿಸರಕ್ಕೆ ಪೂರಕವಾದ ಬಾಳೆ ಎಲೆ ಊಟಕ್ಕೆ ಎಲ್ಲರೂ ಪ್ರಥಮ ಪ್ರಾಶಸ್ತ್ಯ ನೀಡೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment