ಯಾರು ಸರಿ
ಕೂಗುತ ಬಂದನು ಬೀದಿಯ ಬದಿಯಲಿ ಪ್ಲಾಸ್ಟಿಕ್ ಮಾರುವ
ಮಾಮಣ್ಣ|
ಬ್ರಷ್ಷು, ಬಾಕ್ಸು, ತಟ್ಟೇ ಲೋಟ
ಎಲ್ಲಾ ಪ್ಲಾಸ್ಟಿಕ್ ಕೊಳ್ಳಿರಿ ಎನ್ನತ್ತಾ
ಕೂಗಿದನು ಕೇಳಣ್ಣ||
ಪುಟ್ಟನ ಅಮ್ಮ ಸರಸರ ನಡೆದಳು
ಪ್ಲಾಸ್ಟಿಕ್ ತೇರಿನ ಸನಿಹಕ್ಕೆ|
ಬಾಲಂಗೋಚಿಯ ತರದಲಿ ಅವನೂ
ಓಡಿದ ಪ್ಲಾಸ್ಟಿಕ್ ಗುಡ್ಡದ ಪಕ್ಕಕ್ಕೆ ||
ಪುಟ್ಟನು ಕೇಳಿದ ಅಮ್ಮನಿಗೆ
ಪ್ಲಾಸ್ಟಿಕ್ ಬೇಡ ಎಂದರು ನಮ್ಮ
ಮಿಸ್ಸು ಯಾಕೆ ಕೊಳ್ಳುವೆ ಪ್ಲಾಸ್ಟಿಕ್ಕು |
ಅಮ್ಮ ನುಲಿಯುತ ನುಡಿದಳು
ಕಮ್ಮಿ ಬೆಲೆಗೆ ವಸ್ತುಗಳು ಸಿಕ್ಕರೆ
ಸುಮ್ಮನೆ ಕೊಳ್ಳುಬೇಕು ಅದೇ ಲಾಜಿಕ್ಕು ||
ಪುಟ್ಟ ಮತ್ತೆ ಹೇಳಿದನು
ಅಮ್ಮಾ ಪ್ಲಾಸ್ಟಿಕ್ ಬೇಡ ಪರಿಸರ ವನ್ನು ಉಳಿಸೋಣ|
ಅಮ್ಮ ಗದರಿದಳು ಕಡಿಮೆ ದುಡ್ಡಿನಲ್ಲಿ
ಸಿಕ್ಕ ವಸ್ತುಗಳ ಬಳಸಿ ಹಣವ ಉಳಿಸೋಣ||
ಪುಟ್ಟನ ಮನದಲಿ ಅನುಮಾನ ಮೂಡುತ ಹಿಡಿದನು ಮನೆಯ ದಾರಿ|
ಶಾಲೆಯ ಮಿಸ್ಸು, ಅಮ್ಮ
ಇವರಲಿ ಯಾರು ಸರಿ??
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
No comments:
Post a Comment