ಮಾನವನ ಮೆದುಳು ಹೆಚ್ಚು ಭಾಷೆಗಳನ್ನು ಕಲಿಯಲು ಶಕ್ತಿ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ .ಹೆರಾಲ್ಡ್ ಸೃಜ್ ಎಂಬುವವರು ನಾಲ್ಕು ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು ಎಂಬುದೇ ಇದಕ್ಕೆ ಸಾಕ್ಷಿ. ನಮ್ಮ ಮಾತೃಭಾಷೆ ಜೊತೆಗೆ ನಾವೂ ಕೂಡಾ ಇತರೆ ಭಾಷೆಗಳ ಕಲಿಯೋಣ . ಇತರ ಭಾಷೆಗಳನ್ನು ಕಲಿಯುವ ಅನುಕೂಲಗಳಲ್ಲಿ ನಮ್ಮ ಸಂವಹನ ಉತ್ತಮವಾಗುತ್ತದೆ,ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವ್ಯಕ್ತಿತ್ವ ನಮಗರಿವಿಲ್ಲದೇ ಉತ್ತಮಗೊಳ್ಳುತ್ತದೆ.ಹಾಗಾದರೆ ತಡವೇಕೆ ಎರಡು ಸಾವಿರದ ಇಪ್ಪತ್ತೆರಡರ ಈ ವರ್ಷದಲ್ಲಿ ಕನಿಷ್ಟ ಎರಡು ಹೊಸ ಭಾಷೆ ಕಲಿಯೋಣ.
ಸಿಹಿಜೀವಿ
ಸಿ. ಜಿ ವೆಂಕಟೇಶ್ವರ
No comments:
Post a Comment