ಭ್ರಷ್ಟಾಚಾರ ಕಡಿಮೆಯಾಗಿದೆಯಾ?
ಡಿಜಿಟಲ್ ತಂತ್ರಜ್ಞಾನದಿಂದ ಭ್ರಷ್ಟಾಚಾರ ಖಂಡಿತವಾಗಿಯೂ ಕಡಿಮೆಯಾಗಿಲ್ಲ . ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳಿ ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ . ಆರ್ ಟಿ ಓ .ಕಂದಾಯ ಮುಂತಾದ ಇಲಾಖೆಯ ಭ್ರಷ್ಟಾಚಾರ ತೊಡೆಯಲು ದೇವರೇ ಬಂದರೂ ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.
ಡಿಜಿಟಲ್ ತಂತ್ರಜ್ಞಾನದ ಪರಿಣಾಮವಾಗಿ ಮೂಡಿಬಂದ
ಡಿಜಿಟಲ್ ಕರೆನ್ಸಿ ಇನ್ನೊಂದು ಮಟ್ಟದ ಭ್ರಷ್ಟಾಚಾರದ ಮೂಲ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗಿದೆ.ಭ್ರಷ್ಟಾಚಾರ ಮಾಡದ ಅಧಿಕಾರಿಗಳನ್ನು ದುರ್ಬೀನು ಹಾಕಿ ಹುಡಕಬೇಕಾದ ಕಾಲ ಬಂದಿದೆ .ಇನ್ನೂ ಕೆಲವರು ಅವರು ಭ್ರಷ್ಟಾಚಾರ ಮಾಡದಿದ್ದರೂ ಖಂಡಿತವಾಗಿಯೂ ಅವರ ಜೀವನದಲ್ಲಿ ಒಂದಲ್ಲ ಒಂದು ದಿನ ಭ್ರಷ್ಟಾಚಾರಕ್ಕೆ ಒಳಗಾಗೇ ಇರುವರು.
ಒಟ್ಟಾರೆ ಭ್ರಷ್ಟಾಚಾರ ಅವಿನಾಶಿ ನಾವು ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೇನೋ ಎಂಬ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment