ಎಟುಕದ ದ್ರಾಕ್ಷಿ ಹುಳಿಯೆಂದು ಪಲಾಯನ ಮಾಡುವವರು ನಾವು . ಕೆಲವೊಮ್ಮೆ ಇದು ನಮ್ಮ ಮಾನಸಿಕ ಆರೋಗ್ಯದ ಡಿಪೆನ್ಸ್ ಮೆಕಾನಿಸಮ್ ತರ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಸಿಗದ ವಸ್ತುಗಳ ಕುರಿತು ಚಿಂತಿಸುತ್ತಾ ಚಿತೆಯೇರುವ ಪರಿಸ್ಥಿತಿ ಬರುತ್ತದೆ. A bird in a hand is greater than two bird in a bush ಎಂಬಂತೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳ ಮತ್ತು ಸೌಕರ್ಯಗಳನ್ನು ಎಂಜಾಯ್ ಮಾಡೋಣ.
ಹಾಗಾದರೆ ಉನ್ನತವಾದ ಗುರಿಗಳೇ ಬೇಡವೆ? ನಮಗೆ ಸಿಗದಿರುವ ವಸ್ತುಗಳ ಪಡೆಯಲು ಯಾವಾಗಲೂ ಪಲಾಯನ ಮಾಡಿದರೆ ನಾವು ಸಾಧಿಸುವುದು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಉನ್ನತ ಗುರಿ ಖಂಡಿತವಾಗಿಯೂ ತಪ್ಪಲ್ಲ ಅದನ್ನು ತಲುಪುವ ದಾರಿಯಲ್ಲಿ ಅಡೆ ತಡೆ ಬಂದಾಗ ವಿಚಲಿರಾಗದೇ ಸಿಂಹಾವಲೋಕನ ಮಾಡಿಕೊಂಡು ಮುನ್ನೆಡೆಯೋಣ.
ನಂತರ ಮುಂದೆ ನಮ್ಮ ಗುರಿ ಸಾಧಿಸಲು ಪ್ರಯತ್ನ ಜಾರಿಯಲ್ಲಿ ಇಟ್ಟಿರೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment