19 December 2021

ಮೌನ .


 



ಮಾತು ಮತ್ತು ಮೌನ 


ಮೌನಂ ಕಲಹಂ ನಾಸ್ತಿ ಎಂಬಂತೆ ಮೌನವಾಗಿರುವ ಸಂಧರ್ಭದಲ್ಲಿ ಮೌನವಾಗಿದ್ದರೆ ಅನಗತ್ಯ ಕಲಹಗಳು ನಿಲ್ಲುತ್ತವೆ. ಈ ಹಿನ್ನೆಲೆಯಲ್ಲಿ ಬುದ್ದಿವಂತರು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿರಬಹುದು .


ಬುದ್ದಿವಂತಿಕೆಯನ್ನು ಮಾತಿನ ಆಧಾರದ ಮೇಲೆ ಅಳೆಯಲಾಗದಿದ್ರೂ ಮಾತಿನ ರೀತಿಯಲ್ಲಿ  ಅವರ ಬುದ್ದಿವಂತಿಕೆಯನ್ನು ಸ್ವಲ್ಪ ಮಟ್ಟಿಗೆ ತಿಳಿಯಬಹುದು.


ಮಾತು ಬೆಳ್ಳಿ ಮೌನ ಬಂಗಾರ ಎಂಬಂತೆ ಕೆಲವೊಮ್ಮೆ ನಾವು ಮಾತಿಗಿಂತ ಮೌನ ಲೇಸು ಎಂದು ಸುಮ್ಮನೆ ಇರುವುದು  ಉಚಿತವಾಗಿ ಕಂಡುಬರುತ್ತದೆ. 


ಮೂರ್ಖಂಗೆ ಬುದ್ದಿಯ ನೂರ್ಕಾಲ.. ಹೇಳಿದರೂ ಅವರ ನಡವಳಿಕೆಗಳನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ಅಂತಹ ಸಂಧರ್ಭದಲ್ಲಿ ಬುದ್ದಿವಂತರಾದವರು ಮೌನವಾಗಿರಬೇಕು ಇಲ್ಲ ಕಡಿಮೆ ಮಾತನಾಡುವುದು ಉಚಿತ.


ಹಾಗೆಂದು ಕಡಿಮೆ ಮಾತನಾಡುವ ಬುದ್ದಿವಂತರು ಎಲ್ಲಾ ಕಡೆ ಕಡಿಮೆ ಮಾತನಾಡುವುದಿಲ್ಲ ಕೆಲವೆಡೆ ಜೋರು ಗಂಟಲಿನಲ್ಲಿ ಮಾತನಾಡುವ ಪುರುಷ ಸಿಂಹಗಳು ಮನೆಯಲ್ಲಿ ಮೌನಕ್ಕೆ ಜಾರುವುದು ಉಂಟು ಅದಕ್ಕೆ ಕಾರಣ ನಿಮಗೂ ತಿಳಿದಿದೆ.


ಬೀದಿಯಲ್ಲಿ ಯಾರಾದರೂ

ಏನಾದರೂ ಅಂದರೆ ಕಾಲು

ಕೆರೆದುಕೊಂಡು ಜಗಳವಾಡುತ್ತಾ

ಕನಿಷ್ಟಪಕ್ಷ ಬೈದೇ ಬೈಯುವನು

ನಿಮ್ಮೌನ |

ಹೊಸಿಲು ದಾಟಿ ಮನೆಯ

ಒಳಗೆ ಬಂದಾಗ ಮಡದಿಯು

ಕೊಟ್ಟ ಟೀ ಕುಡಿದ ನಂತರ

ಬರೀ ಮೌನ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: