17 December 2021

ಉದ್ಯೋಗ ಮತ್ತು ಕುಟುಂಬ ಜೀವನದ ನಡುವಿನ ಸಮತೋಲನ .ಲೇಖನ

 


ಉದ್ಯೋಗ ಸಂಸಾರ ಸಮತೋಲನ ಬೇಕು.


"ಉದ್ಯೋಗಂ ಮಾನವ ಲಕ್ಷಣಂ "ಜೀವನಕ್ಕೆ ಒಂದು ವೃತ್ತಿ ಮಾಡಲೇಬೇಕು .ಯಾವುದೇ ಕಾರ್ಯವಿರಲಿ ಅದನ್ನು ಇಷ್ಟ ಪಟ್ಟು ಮಾಡಬೇಕು .  ಕಾಯಕವೇ ಕೈಲಾಸ ಎಂಬ ತತ್ವ ಪಾಲಿಸಿ ಕೆಲಸ ಮಾಡಬೇಕು  ಅದೇ ಸಂಧರ್ಭದಲ್ಲಿ ನಮ್ಮ ಕುಟುಂಬಕ್ಕೂ ನಮ್ಮ ಸಮಯ ಮೀಸಲಿಡಲೇಬೇಕು. ವೃತ್ತಿ ಮತ್ತು ಕುಟುಂಬದ ನಡುವೆ ನಾವು ಸಮತೋಲನವನ್ನು ಕಾಪಾಡಿಕೊಳ್ಳಲೇ ಬೇಕು. ಏಕೆಂದರೆ ಈ ಎರಡರಲ್ಲಿ ಯಾವುದೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ. ಎರಡು ಕಣ್ಣುಗಳಲ್ಲಿ ಯಾವುದು ಹೆಚ್ಚು ಎಂದು ಕೇಳಿದರೆ ಹೇಗೆ.


ಜಾಣ್ಮೆಯಿಂದ ನಾವು ವೃತ್ತಿ ಮತ್ತು ಸಂಸಾರ ವನ್ನು ನಿಭಾಯಿಸಬೇಕು .


ಕೆಲವೊಮ್ಮೆ ನಾವು ಅತಿಯಾದ ಆಸೆಯಿಂದ ನಮ್ಮ ಕುಟುಂಬ ನಿರ್ವಹಣೆ ಮಾಡಲು ಮತ್ತು ಜೀವನಮಟ್ಟ ಸುಧಾರಿಸಲು ಓಟಿ ಮಾಡುತ್ತಾ ಕಾಯಕದಲ್ಲಿ ಮುಳುಗಿದರೆ ನಮ್ಮ ಕುಟುಂಬಕ್ಕೆ ಕ್ವಾಲಿಟಿ ಟೈಮ್ ಕೊಡಲು ಅಸಾಧ್ಯ.


ಶ್ರದ್ಧೆಯಿಂದ ಕೆಲಸ ಮಾಡಿದರೆ

ನಿಜವಾಗಿಯೂ ದೈವವೇ

ನಾವು ಮಾಡುವ ಕಾಯಕ|

ಕಾಯಕವೇ ಅತಿಯಾಗಿ 

ದಿನವೂ ಮನೆಗೆ ಲೇಟಾಗಿ

ಬಂದರೆ ಮಡದಿ ಬೈಯ್ಯಬಹುದು

ಆಗೋದಿಲ್ಲ ನನಗೆ ಕಾಯಾಕ ||


ಕೆಲವು ಮೆಟ್ರೋ ನಗರಗಳಲ್ಲಿ ತಂದೆಯು  ಮಕ್ಕಳು ನಿದ್ರೆಯಿಂದ ಏಳುವ ಮೊದಲೇ ತಮ್ಮ ಕೆಲಸಕ್ಕೆ ತೆರಳಿದರೆ ಅವರು ಮನೆಗೆ ಬರುವಾಗ ತಡರಾತ್ರಿ ಮಕ್ಕಳು ನಿದ್ರೆಗೆ ಜಾರಿರುತ್ತಾರೆ. ಇದು ಕುಟುಂಬದ ಪ್ರೀತಿ ಮತ್ತು ಸಾಮರಸ್ಯಕ್ಕೆ ಪ್ರತಿಕೂಲವಾದ ಪರಿಣಾಮ ಉಂಟಾಗಬಹುದು. ಇತ್ತೀಚಿನ ದಿನಗಳಲ್ಲಿ ಸಿಂಗಲ್ ಪೇರೆಂಟಿಂಗ್ ಮದರ್  ಸಹ ಒಂದು ಟ್ರೆಂಡ್ ಆಗಿದೆ .ಜೀವನಕ್ಕಾಗಿ ತಾಯಿಯು ಕೆಲಸಕ್ಕೆ ಹೋಗಿ ಮನೆಗೆ ಬರುವುದು ತಡವಾದರೆ ಮಕ್ಕಳು ಒಂಟಿಯಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ .ಕೆಲವೊಮ್ಮೆ ಇಂತಹ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿ ಕ್ರಮೇಣವಾಗಿ ಸೈಬರ್ ಅಪರಾದ ಪ್ರಕರಣಗಳಲ್ಲಿ ಬಲಿ ಪಶುವಾದ ಉದಾಹರಣೆಗಳೂ ಇವೆ.


ಸಮತೋಲನ ಕಾಯ್ದುಕೊಳ್ಳಬೇಕು

ವೃತ್ತಿ ಮತ್ತು ಕುಟುಂಬದ ನಡುವೆ

ಅವು ಒಂದೇ ನಾಣ್ಯದ ಎರಡು ಮುಖಗಳು|

ಸ್ವಲ್ಪ ಯಾವುದಾದರೂ ಹೆಚ್ಚು ಕಡಿಮೆ

ಆದರೆ ಉತ್ತರ ದಕ್ಷಿಣಕ್ಕೆ ತಿರುಗಬಹುದು

ನಮ್ಮ ಮುಖಗಳು||


ಆದ್ದರಿಂದ ನಮಗೆ ಗೌರವಯುತವಾಗಿ  ಜೀವಿಸಲು ಒಂದು ಉದ್ಯೋಗ ಅಗತ್ಯ .ಅದೇ ಜೀವನವಾಗಿ   ಅದು ನಮ್ಮ ಸಂಸಾರದ ಮೇಲೆ ದುಷ್ಪರಿಣಾಮ ಬೀರಬಾರದು.


ಕೆಲವರು ವರ್ಕೋಹಾಲಿಕ್

ಅವರು ಕೆಲಸ ಮಾಡಲು 

ಶುರುಮಾಡಿದರೆ ಪರಿವೇ ಇರೊಲ್ಲ

ಗಂಟೆ, ದಿನ ,ವಾರ|

ಇಂಥವರು ಮನೆ ಸೇರದಿದ್ದಾಗ

ಅವರ ಮಕ್ಕಳು ಹೆಂಡತಿ 

ಖಾರವಾಗಿ ಕೇಳಬಹುದು ಯಾಕ್ರೀ

ಬೇಕು ನಿಮಗೆ ಸಂಸಾರ??




ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: