ಕೊರೆಯುವವರು ಮತ್ತು ಸುತ್ತಿಗೆಗಳು
ಕೆಲವೊಮ್ಮೆ ನಮ್ಮ ಆತ್ಮೀಯರು, ಬಂಧುಗಳು, ಸಹೋದ್ಯೋಗಿಗಳು, ನಮ್ಮ ಜೊತೆಗೆ ಮುಖತಃ ಅಥವಾ ಪೋನ್ ನಲ್ಲಿ ಮಾತನಾಡುವಾಗ ನಮಗೆ ಅವರ ಮಾತು ಕೇಳಲು ಸಮಯವಿದೆಯೇ? ಅಥವಾ ಇಷ್ಟ ಇದೆಯಾ? ಎಂದು ಕೇಳದೇ ಟೇಕನ್ ಫಾರ್ ಗ್ರಾಂಟೆಡ್ ಎಂಬಂತೆ ಗಂಟೆಗಟ್ಟಲೆ ಮಾತನಾಡಲು ಶುರು ಮಾಡುವರು. ಇದು ನಮಗೆ ಕಿರಿಕಿರಿಯಾದರೂ ಅವರೊಂದಿಗೆ ನೇರವಾಗಿ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮಗೂ ಮುಜುಗರ .
ಇನ್ನೂ ಕೆಲ ಮಹಾಶಯರು ಎದುಗಿರುವವರು ಮಾತನಾಡಲು ಅವಕಾಶ ನೀಡದೆ ತಾವೆ ವಟ ವಟ ಮಾತನಾಡುತ್ತಾ ತಮ್ಮ ಪಾಂಡಿತ್ಯ ತೋರುವರು.ಕೆಲವೊಮ್ಮೆ ವಿತಂಡವಾದಕ್ಕೂ ಇಳಿಯುವರು.
ಇಂತವರಿಂದ ಕೆಲವೊಮ್ಮೆ ನಾವು ತಪ್ಪಿಸಿಕೊಳ್ಳಲೇ ಬೇಕು ಅದಕ್ಕೆ ನಾವು ಹೀಗೆ ಮಾಡಬಹುದು.
೧ ವ್ಯಕ್ತಿಗಳು ಕರೆಯಲ್ಲಿ ಇದ್ದರೆ ನನಗೆ ಮತ್ತೊಂದು ಮುಖ್ಯವಾದ ಕರೆ ಬರುತ್ತಿದೆ ನಂತರ ಕರೆ ಮಾಡುವೆ ಎಂದು ಹೇಳಿ ಕರೆ ಕಟ್ ಮಾಡಬಹುದು.
ನಮಗೆ ಇಷ್ಟವಿಲ್ಲದಿದ್ದರೂ
ಕೆಲವರು ಮಾಡುತ್ತಲೆ
ಇರುವರು ಕರೆ|
ಅಂತವರಿಗೆ ಮತ್ತೊಂದು
ಕರೆಯಿದೆ ಎಂದು
ಪೋನ್ ಕಟ್
ಮಾಡುವುದು ಖರೆ||
೨ ಕೊರೆಯುವ ವ್ಯಕ್ತಿ ಎದುರುಗಿದ್ದರೆ ಒಂದು ಅತೀ ತುರ್ತು ಕೆಲಸವಿದೆ ಎಂದು ಎದ್ದು ಹೋಗಬಹುದು.
ಕೆಲವರು ಕೊರೆಯುತ್ತಾರೆ
ಕೇಳುವವರ ತಾಳ್ಮೆ
ಪರೀಕ್ಷೆ ಮಾಡಲು|
ಅಂತವರ ಮುಂದೆ
ಅವರಿಗೆ ಗೊತ್ತಿಲ್ಲದೆ
ಕಿವಿಯಲ್ಲಿ
ಇಟ್ಟುಕೊಂಡಿರುವೆ
ಇಯರ್ ಪೋನ್
ಹೊಸ ಮಾಡೆಲ್ಲು||
೩ ಸುತ್ತಿಗೆ ಆಸಾಮಿ ಜೊತೆಗೆ ಕಾರ್ಯ ನಿರ್ವಹಿಸುವುದು ಅನಿವಾರ್ಯವಾದರೆ ಅವರ ಮಾತಿಗೆ ಕಡಿಮೆ ಪ್ರತಿಕ್ರಿಯೆ ನೀಡಿ ನಮ್ಮ ಕೆಲಸದಲ್ಲಿ ತಲ್ಲೀನವಾಗುದು.
ಕೆಲವರೇ ಹಾಗೆ
ಮಾತು ನಿಲ್ಲಿಸುವುದಿಲ್ಲ
ಒಂದು ಅಥವಾ ಎರಡು
ಸುತ್ತಿಗೆ|
ಅದಕ್ಕೆ ಅಂತವರಿಗೆ
ನಾಮಕರಣವಾಗುತ್ತದೆ
ಸುತ್ತಿಗೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
No comments:
Post a Comment