*ನೀನೇ ಶ್ರೀರಾಮ*
ಉಚ್ವಾಸ ನಿಶ್ವಾಸ ಕಾಲದಿ ನೆನೆವೆವುಶ್ವಾಸದಿ ನೆಲೆಸಿಹೆ ಅನವರತ ಸಾಸಿರ ಸತ್ಕರ್ಮ ಮಾಡುವೆವು ನಮ್ಮ ವಿಶ್ವಾಸವು ನೀನೇ ಶ್ರೀರಾಮ .
ನಮ್ಮಯ ಹೃದಯದಿ ವಾಸಿಪೆ ಪ್ರಭುವೆಹಮ್ಮುಬಿಮ್ಮುಗಳ ತೊರೆಯುವೆವುಅಂಬಿಗನಂತೆ ಭವ ಸಾಗರ ದಾಟಿಸುವನಮ್ಮ ನಂಬಿಕೆಯು ನೀನೇ ಶ್ರೀರಾಮ .
ಕರ ಉರ ಶಿರ ಗಳ ಅರ್ಪಿಸಿಸರ ಸರ ಕೆಲಸವ ಮಾಡುವೆವುವರಗಳ ಬೇಡುವುದಿಲ್ಲ ನಿನ್ನಲಿನಮ್ಮ ಭರವಸೆಯು ನೀನೆ ಶ್ರೀರಾಮ.
ಅತಿಯಾಸೆ ಅತಿಕೋಪ ತ್ಯಜಿಸುತಲಿಮಾತಾಪಿತರನು ಪೂಜಿಸುವೆವುಇರುವುದೆ ಹೆಚ್ಚೆಂಬ ಬುದ್ದಿ ಕಲಿಸಿದನಮ್ಮ ಮನೋಭಾವ ನೀನೇ ಶ್ರೀರಾಮ.
*ಸಿ ಜಿ ವೆಂಕಟೇಶ್ವರ*
No comments:
Post a Comment