ಕಥೆ
ಸಂಕಷ್ಟ ಹರ ಗಣಪನ ಕೃಪೆ
ಲಕ್ಷಾಂತರ ಕಾಂಕ್ರೀಟ್ ಕಟ್ಟಡಗಳು ಗಗನ ಚುಂಬಿಗಳಾಗಿ ಬೆಂಗಳೂರು ಕಾಂಕ್ರೀಟ್ ಸಿಟಿ ಎಂದು ಕರೆದರೂ,ಬೆಂಗಳೂರು ಗಾರ್ಡನ್ ಸಿಟಿ ಎಂದು ಪರಿಚಿತವಾಗಿದೆ.
ಅದಕ್ಕೆ ಕಾರಣ ಕಬ್ಬನ್ ಪಾರ್ಕ್, ಲಾಲ್ ಬಾಗ್ ಪ್ರಮುಖವಾದ ಕಾರಣವಾದರೂ ವಿವಿಧ ಬಡಾವಣೆಗಳ ಗಿಡ ಮರಗಳ ಕೊಡುಗೆಯೂ ಕಡಿಮೆಯೇನಲ್ಲ.
ವಿಜಯ ನಗರದ ಮೂರನೆಯ ಮುಖ್ಯರಸ್ತೆಯ, ಐದನೆಯ ಅಡ್ಡರಸ್ತೆಯಲ್ಲಿ ಬಹಳ ಹಳೆಯ ಕಾಲದ ಅಶ್ವಥ್ಥ ವೃಕ್ಷ ಇಡೀ ವಿಜಯ ನಗರಕ್ಕೆ ಸೌಂದರ್ಯ ಮತ್ತು ಧಾರ್ಮಿಕ, ಮತ್ತು ಸಂಸ್ಕೃತಿಯ ಪ್ರತೀಕವಾಗಿತ್ತು. ವೈಜ್ಞಾನಿಕ ಚಿಂತಕರಿಗೆ ಈ ಮರ ಆಮ್ಲಜನಕ ನೀಡುವ ಸಾಗರವೆಂದು ಗೌರವವಿದ್ದರೆ, ಆಸ್ತಿಕರಿಗೆ ಈ ಮರ ಬ್ರಹ್ಮ, ವಿಷ್ಣು ಮಹೇಶ್ವರ ಮೂರು ದೇವರು ಒಂದೆಡೆ ಸೇರಿದ ದೈವ ಸ್ವರೂಪದ ಮರ , ಎಂದು ಪೂಜ್ಯ ಭಾವನೆ ಹೊಂದಿದ್ದರು.
ಅಂದು ಸಂಕಷ್ಠಿ ಗಣಪತಿ ಪೂಜೆ ಮಾಡಲು ನಿರ್ಧಾರ ಮಾಡಿದ ಸುಜಾತ ಬೆಳಗಿನ ಜಾವ ಬೇಗನೆ ಎದ್ದು ಸ್ನಾನ ಮಾಡಿ , ಅವಳಿಗೆ ಇಷ್ಟವಾದ ಹಳದಿ ಬಣ್ಣದ ರೇಷ್ಮೆ ಲಂಗ , ಕೆಂಪುಬಣ್ಣದ ದಾವಣಿ ಧರಿಸಿಕೊಂಡು ಭಾವ ತಂದಿದ್ದ ಎರಡು ಮೊಳ ಹೂ ಮುಡಿದು, ಸೀರೆಗೆ ಮ್ಯಾಚಿಂಗ್ ಆಗುವ ಕೆಂಪು ಹಳದಿ ಬಳೆಗಳ ತೊಟ್ಟು, ಕನ್ನಡಿಯಲ್ಲಿ ನೋಡಿಕೊಂಡು ಹಣೆಗೆ ಕುಂಕುಮವನ್ನು ಇಟ್ಟುಕೊಂಡು, ತನ್ನ ಸೌಂದರ್ಯವನ್ನು ತಾನೇ ನೋಡಿಕೊಂಡು ಸಂತಸದಿಂದ, ದೇವರಿಗೆ ಹೂ , ಹಣ್ಣು , ಕಾಯಿ ತೆಗೆದುಕೊಳ್ಳಲು ದೇವರ ಕೋಣೆಯ ಕಡೆ ನಡೆದಳು
" ಅಕ್ಕಾ, ಬರೀ ಬಿಡಿ ಹೂ ಇದ್ದಾವೆ, ಕಟ್ಟಿರೋ ಹೂ ಇಲ್ವಾ? ನಾನೀಗ ಅಶ್ವಥ್ ಮರದ ಗಣಪ ಪೂಜೆ ಮಾಡೋಕೆ ಹೋಗ್ಬೇಕು"
" ನಿನ್ನೆ ಕಟ್ಬೇಕು ಅಂದ್ಕೊಂಡೆ ,ಬೇರೆ ಕೆಲ್ಸ ಜಾಸ್ತಿ ಆಗಿ ,ಕಟ್ಲಿಲ್ಲ ಕಣೇ ಸುಜು, ಅಲ್ಲೆ ಮರದತ್ರ ಕಟ್ಟಿ , ದೇವರಿಗೆ ಹಾಕ್ಬಿಡಪ್ಪ"
" ಆಯ್ತಕ್ಕ ಅಂಗೆ ಮಾಡ್ತಿನಿ"
ಎಂದು ದೇವರ ಪೂಜೆ ಸಾಮಾನುಗಳಿರುವ ಬುಟ್ಟಿ ತೆಗೆದುಕೊಂಡು ಅಶ್ವಥ್ ಗಣೇಶ ಮರದ ಕಡೆಗೆ ಹೊರಟಳು ಸುಜಾತ .
ಈಗಾಗಲೇ ಯಾರೋ ಗಣೇಶನ ಪೂಜೆ ಮಾಡಿ ಹೂ ಅಲಂಕಾರ ಮಾಡಿದ್ದರು. ಮರದ ಕೆಳಗೆ ಬಂದು , ದೇವರಿಗೆ ಮತ್ತು ಮರಕ್ಕೆ ಕೈ ಮುಗಿದು, ಆಶ್ವಥ ಕಟ್ಟೆಯ ಮೇಲೆ ಕುಳಿತು , ಬುಟ್ಟಿಯಲ್ಲಿ ತಂದ ಬಿಡಿ ಹೂ ಮತ್ತು ದಾರ ತೆಗೆದುಕೊಂಡು ,ಹೂ ಕಟ್ಟಲು ಶುರಮಾಡಿದಳು, ಅದೇ ಜಾಗಕ್ಕೆ ಎರಡು ಪಾರಿವಾಳಗಳು ಹಾರಿ ಬಂದು , ಗಣಪತಿಯ ಬಲಭಾಗದಲ್ಲಿ ನಿಂತು ದೇವರ ಆಶೀರ್ವಾದ ಪಡೆದ ದೃಶ್ಯ ನೋಡಿದ ಸುಜಾತ ಮನದಲ್ಲೇ ಅಂದುಕೊಂಡಳು,
"ಭಗವಂತ ನಾನು ಮತ್ತು ಸತೀಶ ಎಂದು ಈ ಪಕ್ಷಿಗಳ ರೀತಿಯಲ್ಲಿ ಬಂದು ನಿನ್ನ ಆಶೀರ್ವಾದ ಪಡೆವೆವು ಸ್ವಾಮಿ "ಎಂದುಕೊಂಡು ಹೂಕಟ್ಟಿ ಗಣಪತಿಯ ಪೂಜೆ ಮಾಡುವಾಗ
ದೇವರ ಬಲಭಾಗದಿಂದ ಹೂ ಬಿತ್ತು, ಅದನ್ನು ನೋಡಿ ಬಹಳ ಆನಂದಿಂದ ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ,
" ನನ್ನ ಸತೀಶ ಸಿಗುವ , ಓ ದೇವ ಧನ್ಯವಾದಗಳು "
ಎಂದು ಅಡ್ಡ ಬಿದ್ದು ,
ಮನೆ ಕಡೆ ಹೊರಟಳು .
ತಿಂಡಿ ತಿಂದು ಪುಸ್ತಕಗಳನ್ನು ತೆಗೆದುಕೊಂಡು, ಕಾಲೇಜಿಗೆ ಹೊರಟಳು ಸುಜಾತ .
" ನಿಮ್ಮ ಊರಿಂದ ನಿನಗೆ ಪತ್ರ ಬಂದಿದೆ ನೋಡೆ ಸುಜಾತ " ಎಂದು ಗೆಳತಿ ಸಂಜನಾ ಪತ್ರವನ್ನು ಕೈಗಿತ್ತಳು.
" ಆತ್ಮೀಯ ಸುಜಾತಳಿಗೆ ಚಿದಾನಂದ್ ಮಾಡುವ ನಮಸ್ಕಾರಗಳು ಒಂದು ಸಿಹಿ ಸುದ್ದಿ ನಿನ್ನ ಸತೀಶನನ್ನು ದೇವೇಂದ್ರಪ್ಪ ತುಮಕೂರಿನಲ್ಲಿ ನೋಡಿದರಂತೆ, ಮುಂದಿನ ಮಾಹಿತಿ ನಂತರ ತಿಳಿಸುವೆ"
ಪತ್ರ ಓದಿದ್ದೇ ತಡ ಕಾಲೇಜಿನ ಕಾರೀಡಾರ್ ನಲ್ಲೇ ಸಂಜನಾಳನ್ನು ತಬ್ಬಿಕೊಂಡು ಖುಷಿ ಪಟ್ಟಳು.
" ಏ ಕೂಲ್ ಬೇಬಿ ವಾಟ್ ಹಾಪಂಡ್ ಎನಿ ಸ್ವೀಟ್ ನ್ಯೂಸ್?
" ನನ್ ಸತೀಶ ಸಿಕ್ಕನಂತೆ, ನನ್ ಸತೀಶ ನನಗೆ ಸಿಕ್ಕೇ ಸಿಕ್ತಾನೆ , ಎಲ್ಲಾ ಸಂಕಷ್ಟ ಹರ ಗಣಪನ ಮಹಿಮೆ, ....."
ಕಾಲೇಜಿನ ಕಾರಿಡಾರ್ ನಲ್ಲಿ
ಹೀಗೆ ಸಂತಸದಲ್ಲಿ ಮೈಮರೆತ ಸುಜಾತಾಳು ಮಾತನಾಡುವಾಗ ಪ್ರಿನ್ಸಿಪಾಲ್ ,
"ಏ ಏನಮ್ಮ ಅದು ಅಂಗೆ ಕಿರುಚ್ತಾ ಇದಿಯಾ? ಆಮೇಲೆ ನನ್ ಚೇಂಬರ್ ಗೆ ಬಾ.... ಅಂದರು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
No comments:
Post a Comment