ಸನ್ಮಾರ್ಗ
ಭಾಗ ೭
ಯರಬಳ್ಳಿಮಾರಮ್ಮ ಗ್ರಾಮ ದೇವತೆಯಾದ ಕಾರಣ ಊರಿನ ಸಕಲ ಜನರ ಆರಾಧ್ಯ ದೈವವಾಗಿ ಭಕ್ತರ ಸಕಲ ಇಷ್ಟಾರ್ಥಗಳ ಈಡೇರಿಸುತ್ತಿದ್ದಳು. ಗುಡಿಯ ಪೂರ್ವದಿಂದ ಐಮಂಗಲ ರಸ್ತೆಯವರೆಗೆ ಬಹುತೇಕ ನಾಯಕರ ಮನೆಗಳು, ಬಹಳ ಮನೆಗಳು ಜಂತೆ ಮನೆಗಳು ,ಕೆಲ ತೆಂಗಿನ ಗರಿಯ ಗುಡಿಸಲು, ಇನ್ನೂ ಕೆಲವು ಕಡಪ ಕಲ್ಲಿನ ತಾರಸಿ ಮನೆಗಳು ಅವುಗಳ ಮುಂದೆ ಬಾಗಿದಂತೆ ಚಪ್ಪರ ಎಲ್ಲಾ ಮನೆಗಳಲ್ಲಿ ಸಮಾನ್ಯ .ಕೆಲ ಮನೆಗಳ ಮುಂದೆ ಮೇಕೆ ಕುರಿಗಳನ್ನು ಕಟ್ಟಿ ಅವುಗಳ ಮುಂದೆ ಸುಬಾಬುಲ್ ,ಹುಣಸೆ ಮುಂತಾದ ಸೊಪ್ಪು ಗಳನ್ನು ಕಟ್ಟಲಾಗಿತ್ತು.
ನಾಯಕರ ಮನೆಯ ಮಧ್ಯ ಅಲ್ಲಲ್ಲಿ ಚದುರಿದಂತೆ ಅಗಸರ, ಊರುಗೊಲ್ಲರ,ಒಡ್ಡರ ಮನೆಗಳಿದ್ದವು .
ಮಾರಮ್ಮನ ಗುಡಿಯ ಹಿಂಬಾಗದಲ್ಲಿ ಕೆಲ ಕುರುಬರ ಮನೆಗಳು, ಹೆಚ್ಚಾಗಿ ಒಕ್ಕಲಿಗರ ಮನೆಗಳಿದ್ದವು .ಗುಡಿಯ ಬಲಭಾಗದ ಊರ ಭಾಗಿಲಿನ ಬಲಕ್ಕೆ ಮಾದರ, ಕ್ಷೌರದವರ ಮನೆಗಳು . ಬಹಳ ಮಾದರ ಮನೆಗಳು ಗುಡಿಸಲು ಮನೆಗಳು ಒಂದೊ ಎರಡೂ ಗ್ರಾಂಟಿನ ಮನೆಗಳು ಅವುಗಳ ಹೊರ ಮತ್ತು ಒಳಗೆ ಸಿಮೆಂಟಿನ ಸ್ಪರ್ಶ ಇಲ್ಲ. ಒಳಗೆ ವಾರಕ್ಕೊಮ್ಮೆ ದೇವರ ಪೂಜೆ ಮಾಡಲು ಸಗಣಿಯಿಂದ ಸಾರಿಸಿ ಸ್ವಚ್ಛ ಮಾಡಿದರೆ ಹೊರಗೆ ವರ್ಷಕ್ಕೆ ಒಮ್ಮೆ ಹೆಚ್ಚೆಂದರೆ ಎರಡು ಬಾರಿ ಮಾತ್ರ ಉಗಾದಿ ಹಬ್ಬಕ್ಕೆ ,ಜಾತ್ರೆಗೆ ಅಲ್ಪ ಸ್ವಲ್ಪ ಮಣ್ಣಮೆತ್ತಿ ಸಗಣಿಯ ಗಬ್ಬಡ ಕದರಿ ಈಚಲ ಮರದ ಎಲೆಯ ಪೊರಕೆಯಲ್ಲಿ ಸಗಣಿ ಬಳಿದರೆ ಅದೇ ಮನೆಯ ಕಳೆ ಹೆಚ್ಚಿಸಿದಂತೆ .ಸಗಣಿ ಬಳಿದ ಮೊದಲೆರಡು ವಾರ ಏನೊ ಒಂದು ರೀತಿಯ ಅಸಹನೀಯ ವಾಸನೆ ಆದರೂ ಕ್ರಮೇಣ ಅದು ಅವರಿಗೆ ಒಗ್ಗಿ ಹೋಗುತ್ತಿತ್ತು.ಬಹುತೇಕ ಒಕ್ಕಲು ಕುಟುಂಬದ ಮನೆಗಳು ಕಟ್ಟಿಗೆಯ ಮತ್ತು ಮಣ್ಣಿನ ಮೇಲ್ಚಾವಣಿಯ ಮನೆಗಳು, ಮುಂದೆ ದನ ಎತ್ತುಗಳನ್ನು ಕಟ್ಟಲು ಚಿಕ್ಕ ಗುಡಿಸಲು ಅಥವಾ ಸಿಮೆಂಟ್ ಶೆಡ್ ಕಟ್ಟಿಸಿದ್ದರು .ಒಂದೆರಡು ಸಾಬರ ಮನೆಗಳು ಮೊದಲು ಇದ್ದವು ಈಗ ಕೆಲವರ್ಷಗಳ ಹಿಂದೆ ಹರ್ತಿಕೋಟೆ ಮತ್ತು ಹಿರಿಯೂರಿಗೆ ಹೋಗಿ ಸೆಟ್ಲ್ ಆಗಿದ್ದರು.
ಒಟ್ಟಿನಲ್ಲಿ ಎಲ್ಲಾ ಜಾತಿಗಳ ಜನರು ಸಮಾನತೆ ಇಲ್ಲದಿದ್ದರೂ ಅನ್ಯೋನ್ಯತೆಯಿಂದ ಬದುಕುತ್ತಿದ್ದರು. ಮಾರಮ್ಮನ ಕೃಪೆಯಿಂದ ಗುಡಿಯಿಂದ ದೂರದಿಂದ ನಮಿಸಿದರೂ ಕೆಳ ವರ್ಗದ ಜನರೂ ಕ್ರಮೇಣ ಆಯುರಾರೋಗ್ಯ ಆನಂದಗಳು ಹೆಚ್ಚಾಗುವುದು ಅವರ ಗಮನಕ್ಕೆ ಬರತೊಡಗಿದವು. ಇನ್ನೂ ಒಕ್ಕಲಿಗರ ಮತ್ತು ನಾಯಕರ ಮನೆಗಳು ಕ್ರಮೇಣ ಅಭಿವೃದ್ಧಿಯ ಹಾದಿ ಹಿಡಿದವು.
"ಶ್ರೀದೇವಿ ಮಹಾತ್ಮೆ " ಪುಸ್ತಕ ಓದಿಸಿ ಮನೆಯಲ್ಲಿ ಒಳ್ಳೆಯದು ಕಂಡವರು ಬೀರೇನಹಳ್ಳಿ ಗೌಡರು "ನೀನೂ ಯಾಕೆ ದೇವಿ ಮಹಾತ್ಮೆ ಪುಸ್ತಕ ನಿಮ್ಮನೇಲಿ ಓದಿಸಬಾರದು" ಎಂದು ಕಂಬಣ್ಣ ಮುಕುಂದಯ್ಯನಿಗೆ ಕೇಳಿದ "ಆಗಲೇಳು ಓದಸಾಣ ತಾಯಿ ನಮಗೆ ಒಳ್ಳೆದು ಮಾಡ್ತಾಳೆ ಅಂದರೆ ಬ್ಯಾಡ ಅನ್ನಕಾಗುತ್ತಾ?" ಖುಷಿಯಿಂದ ನುಡಿದರು ಮುಕುಂದಯ್ಯ.
ಅದು ಚಿದಾನಂದಾವದೂತರು ರಚಿಸಿದ ಭಾಮಿನಿ ಷಟ್ಪದಿಯಲ್ಲಿ ಇರುವ ಹದಿನೆಂಟು ಅಧ್ಯಾಯಗಳ ಭಕ್ತಿ ಪ್ರಧಾನ ಪುಸ್ತಕ " ಪರಮ ಪರತರ ಪರಮ ಮಂಗಳ ....."ಎಂದು ಆರಂಭವಾಗುವ ಆ ದೈವಿಕ ಗ್ರಂಥವು ."ಜಯಮಂಗಳಂ ನಿತ್ಯ ಶುಭ ಮಂಗಳಂ" ಎಂಬ ಮಂಗಳ ಗೀತೆಯೊಂದಿಗೆ ಮುಕ್ತಾಯವಾಗುತ್ತದೆ.
ಭಾರತೀಯ ಸನಾತನ ಸಂಸ್ಕೃತಿಯ ಪ್ರಭಾವವವೋ, ಹೆಚ್ಚಿರುವ ಆಸ್ತಿಕರ ಸಂಖ್ಯೆಯೊ, ಜನರ ಅತಿಯಾಸೆಗಳು ಹೆಚ್ಚಾಗಿ ಕಷ್ಟಗಳು ಬಂದು ದೇವರಮೊರೆ ಹೋಗುವ ಪರಿಣಾಮವೋ, ಹಳ್ಳಿಯ ಮುಗ್ದ ಜನರ ನಿಷ್ಕಲ್ಮಶ ಮನಸೋ, ದೇವರ ಕಾರ್ಯ ದೈವಪುಸ್ತಕಪಾರಾಯಣ ಎಂದರೆ ಎಲ್ಲಿಲ್ಲದ ಆಸಕ್ತಿ ಅದರಲ್ಲಿ ಮುಕುಂದಯ್ಯ ಮತ್ತು ಸರಸ್ವತಜ್ಜಿ ಒಂದು ಹೆಜ್ಜೆ ಮುಂದೆ ಎಂದು ಹೇಳಬಹುದು.

ಕವ್ವೆಂಬ ಕತ್ತಲೆ ಎಲ್ಲೋ ದೂರದಲ್ಲಿ ನಾಯಿ ಊಳಿಡುವ ಸದ್ದು.ಅಂದು ತಡರಾತ್ರಿ ಬಿರುಸಾದ ಮಳೆ ಬಿದ್ದ ಪರಿಣಾಮವಾಗಿ ಜಿದ್ದಿಗೆ ಬಿದ್ದವರಂತೆ ಕಪ್ಪೆಗಳು ವಟರ್ ವಟರ್.. ಸದ್ದು ಎಲ್ಲೋ ಕ್ರೀಚ್ ಕ್ರೀಚ್ ಎಂಬ ಸದ್ದು ಮಾಡುವ ರಾತ್ರಿ ಹುಳು .ಇಡೀ ಊರೇ ನಿದ್ರಿಸುವ ಸಮಯದಲ್ಲಿ ಸರಸ್ವತಜ್ಜಿದು ಒಂದೇ ಪ್ರಶ್ನೆ ಇನ್ನೂ ಯಾಕೆ ಕೋಳಿ ಕೂಗಲಿಲ್ಲ? ವಯಸ್ಸಾದಂತೆ ನಿದ್ದೆ ಬರಲ್ಲವಂತೆ ಅದಕ್ಕೆ ಅಜ್ಜಿ ಕಣ್ಣ ಮುಚ್ಚಿಕೊಂಡೆ ಕಿವಿಯಗಲಮಾಡಿ ಊರಿನ ಎಲ್ಲಾ ಶಬ್ದಗಳನ್ನು ಆಲಿಸುತ್ತಿದ್ದರು.ಕೊ..ಕ್ಕೋ...ಕ್ಕೂ ಎಂಬ ಶಬ್ದ ಅಜ್ಜಿ ಕವಿಗೆ ಬಿದ್ದ ಕೂಡಲೆ"
"ಏ ತಿಮ್ಮಕ್ಕ ಎದ್ದಾಳು ಇವತ್ತು ಜಲ್ದಿ ಎದ್ದು ವಾರ ವಂಜನೆ ಮಾಡಿ ಮೈ ತೊಳಕಂಡು ಅಡಿಗೆ ಮಾಡು ದೇವಿ ಪುರಾಣ ಓದಬೇಕು.ನೀನು ಎದ್ದಾಳ ಮುಕುಂದ,ಸೇದಾಬಾವ್ಯಾಗೆ ನೀರು ಸೇದಿ ತಂದು ಮೀಸಲು ನೀರಲ್ಲಿ ದ್ಯಾವರ ಕೋಣೆ ತೊಳ್ದು ಪೂಜೆಗೆ ರೆಡಿ ಮಾಡು ,ಹೇ ಮುರಾರಿ ಎದ್ದು ಹೊಲ್ದಕೆ ಹೋಗಿ ಬಿಲ್ಪತ್ರೆ,ಕಣಗಲ ಹೂ, ಶಮಿಪತ್ರೆ ಎಲ್ಲಾ ತರ ಹೂಗಳನ್ನು ತಾಂಬ , ಹೇ ಬಿಳಿಯ ಇವನೊಬ್ಬ ಸೋಮಾರಿ ಏಳಾ ಮ್ಯಾಕೆ ,ಏ ಎದ್ದೇನೋ ಗುರುಸಿದ್ದ ಸಗಣಿ ಬಾಸೋ" ಎಂದು ಒಂದೇ ಸಮನೆ ಎಲ್ಲರನ್ನೂ ಎಬ್ಬಿಸೋದ ನೋಡಿ ಸತೀಶ ಇನ್ನೂ ಮುಂದಿನ ಹೆಸರು ನಂದೇ ಅಂತ ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ ಎದ್ದು ದುಪ್ಪಡಿ ಮಡಿಚಿ ಕೈಕಾಲು ಮುಖ ತೊಳೆದುಕೊಂಡು ಇಂಗ್ಲೀಷ್ ನೋಟ್ಸ್ ತೆಗೆದು ಓದಲು ಆರಂಬಿಸಿದ .

"ಅಷ್ಟೇ ಕಣ್ರಲ ಅದೇನು ಮಹಾ ಅಲ್ಲ, ಕಲಿಯೋ ವರೆಗೂ ಬ್ರಹ್ಮ ವಿದ್ಯೆ ,ಕಲ್ತ್ ಮ್ಯಾಲೆ ಕೋತಿ ವಿದ್ಯೆ, ಇನ್ನ ನೀವೆ ಬ್ಯಾರೆ ಜನಕ್ಕೆ ಹೇಳಿ ಕೊಡ್ತಿರಾ ತಗ ಓದು ಈ ಮುಂದಿನ ಅಧ್ಯಾಯ" ಎಂದು ಮುಕುಂದಯ್ಯ ನಿಗೆ ದೇವಿ ಪುಸ್ತಕ ಕೊಟ್ಟು ಹೇ ಮುರಾರಿ ನೀನು ಪ್ರತಿ ಅದ್ಯಾಯ ಮುಗಿತಂಗೆ ತೆಂಗಿನಕಾಯಿ ಹೊಡಿ" ಹೇಳಿಕೊಡುತ್ತಿದ್ದರು ಜಲ್ದಪ್ಪ.
ಜಲ್ದಪ್ಪ ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದು ದೇವಿಮಹಾತ್ಮೆ ಓದೋ ರೀತಿ ರಾಗ ,ಉಸಿರು ಹಿಡಿಯುವುದು, ಧ್ವನಿಯಲ್ಲಿ ಏರಿಳಿತ , ಹಳಗನ್ನಡ ಅಕ್ಷರಗಳನ್ನು ತಪ್ಪಿಲ್ಲದಂತೆ ಓದುವುದನ್ನು ಮುಕುಂದಯ್ಯ ಮತ್ತು ಮುರಾರಿಯನ್ನು ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡು ಒಂದೆರಡು ಅಧ್ಯಾಯ ಓದಿದ್ದರು .

ಅಂದು ಸಂಜೆ ಆರು ಗಂಟೆಗೆ ಪೂರ್ತಿ ದೇವಿ ಮಹಾತ್ಮೆ ಪಾರಾಯಣ ಮುಗಿದು ಊರಿನ ಪ್ರಮುಖರು ಅತ್ಮೀಯರು ಸೇರಿದಾಗ ಮಂಗಳಾರತಿ ಅಯಿತು .ನಂತರ ತೀರ್ಥ, ಪಂಚಾಮೃತ ಮತ್ತು ಮಂಡಕ್ಕಿ ಕಾಯಿತುರಿ,ಬೆಲ್ಲ ,ಬಾಳೆ ಹಣ್ಣು, ತಂಬಿಟ್ಟು ಇವನ್ನೆಲ್ಲಾ ಕಲೆಸಿ ಮಾಡಿದ ಪಳಾರವನ್ನು ಎಲ್ಲರಿಗೂ ನೀಡಿದರು.ಗೋವಿಂದ..... ಎಂಬ ಶಾಸ್ತ್ರ ಮಾಡಿ ನೆರೆದ ಜನರಿಗೆ ಅನ್ನಸಂತರ್ಪಣೆ ಮಾಡಿದರು ಊಟ ಮಾಡಿದವರು ಬಾಳೆ ಹಣ್ಣು ತಿಂದು "ಅನ್ನದಾತ ಸುಖೀಭವ" ಎಂದು ಹರಸುತ್ತಾ ಅವರ ಮನೆ ಸೇರಿದರು.
ಸಂತೆಯ ನೆಲವಳಿ ಎತ್ತುವ ಹರಾಜಿನಲ್ಲಿ ಮುಕುಂದಯ್ಯ ಅತಿ ಹೆಚ್ಚು ಬಿಡ್ ಕೂಗಿ "ಈ ವರ್ಷ ನೆಲವಳಿ ಎತ್ತುವ ಕಾರ್ಯ ಮುಕುಂದಯ್ಯ ಅವರಿಗೆ ಹೋಗಿದೆ" ಎಂದು ಪಂಚಾಯಿತಿಯ ಮಂಜಣ್ಣ ಘೋಷಣೆ ಮಾಡಿ "ಬಾರಣ್ಣ ಒಂದು ಸೈನ್ ಮಾಡು" ಎಂದು ಕರೆದು ಪೆನ್ನು ಕೊಟ್ಟ.
ಅಣ್ಣನ ಜೊತೆಗಿದ್ದ ಮುರಾರಿ ಸ್ವಲ್ಪ ಅಸಮಾಧಾನಗೊಂಡರೂ ತೋರುಗೊಡದೆ 'ಅಲ್ಲ ನಮ್ಮಣ್ಣನಿಗೆ ಬುದ್ದಿ ಇದೆಯಾ? ಇಷ್ಟೊಂದು ದೊಡ್ಡ ಮೊತ್ತಕ್ಕೆ ಹರಾಜು ಕೂಗುವ ಅಗತ್ಯ ಇತ್ತೆ? ಮ್ಯಾಗಳ ಮನೆ ರಂಗಸ್ವಾಮಿ ಮೂರು ಸಾವಿರಕ್ಕೆ ಕೂಗಿ ಸುಮ್ಮನಾದಾಗ ಇದ್ದಕ್ಕಿದ್ದಂತೆ ಐದುಸಾವಿರ ಎಂದು ಯಾಕೆ ಕೂಗಬೇಕಿತ್ತು ? ಮೂರುವರೆ ಅಂದರು ನಮಗೆ ಆಗಿರೋದು .ನಮ್ಮೂರು ಸಂತೆ ಏನು ಹಿರಿಯೂರು ಚಳ್ಳಕೆರೆಯಂತಾ ದೊಡ್ಡ ಸಂತೇನಾ?" ಎಂದು ಮನದಲ್ಲಿ ಸಾವಿರಾರು ಪ್ರಶ್ನೆಗಳು ಇದ್ದರೂ ಹಿರಿಯೂರಿನ ಸಕ್ಕರೆ ಕಾರ್ಖಾನೆ ಮುಚ್ಚಿ ಕೆಲಸ ಕಳೆದುಕೊಂಡ ನಂತರ ಅಣ್ಣ ಹೇಳಿದ ಕೆಲಸ ಮಾತ್ರ ಮಾಡಿಕೊಂಡು ಸಾಗುತ್ತಿದ್ದ ,ಮುರಾರಿ ಅಣ್ಣನನ್ನು ಹಿಂಬಾಲಿಸಿದ.

ಮಾರಮ್ಮನ ಗುಡಿಯ ಮುಂದಿನ ಡಾಂಬರು ರಸ್ತೆ ದಾಟಿ ಮುಂದೆ ಸಾಗಿದರೆ ಊರ ಮುಂದಿನ ತೊಪಿನಲ್ಲಿ ಪ್ರತಿ ಶುಕ್ರವಾರ ನೆರೆದ ಜನರ ನೋಡುವುದೇ ಸಡಗರ . ಉದ್ದನೆಯ ಸಾಲಿನ ಎದುರು ಬದುರು ಹಗ್ಗದಿಂದ ಡೇರೆ ಹೊಡೆದು ನೆರಳುಮಾಡಿಕೊಂಡು ಬದನೆಕಾಯಿ, ಉರುಳಿಕಾಯಿ,ಆಲೂಗಡ್ಡೆ, ಮುಂತಾದ ತರಕಾರಿಗಳಿಂದ ಹಿಡಿದು ಎಲೆ ಅಡಿಕೆ, ಮನೆ ಸಾಮಾನುಗಳ ಏನುಂಟು ಏನಿಲ್ಲ. "ಹತ್ ರುಪಾಯಿಗೊಂದ್ ಕೆಜಿ......" ಎಂದು ಒಂದು ಧ್ವನಿ ಕೂಗಿದರೆ" ಡಜನ್ ಮೂರು ರುಪಾಯಿ......"ಎಂದು ಮತ್ತೊಂದು ಧ್ವನಿ."ಐದು ರುಪಾಯಿಗೆ ಕಾಲ್ಕೇಜಿ ...."ಎಂದು ಹೆಣ್ಣು ಧ್ವನಿ ಕೂಗಿದರೆ ."ಒಂದಕ್ಕೊಂದು ಪ್ರೀ ..."ಎಂದು ಗಂಡು ಧ್ವನಿ ಕೂಗುತ್ತಿತ್ತು ಸೂರ್ಯ ನೆತ್ತಿಯ ಮೇಲೆ ಬಂದಂತೆ ತರಕಾರಿಯ ಮೇಲಿನ ಡೇರೆಗಳು ಕಾವಲಿಯಂತೆ ಬಿಸಿ ಏರಿದರೆ, ಕೂಗುವವರ ಸ್ವರ ಇಳಿದಿತ್ತು .
ಅದು ಯರಬಳ್ಳಿ ಸಂತೆ . ಪ್ರತಿ ವ್ಯಾಪಾರಮಾಡುವವರೊಂದಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ವಸೂಲು ಮಾಡಿದ ಮುಕುಂದಯ್ಯ ಸಹೋದರರು ಸಂಜೆ ಮನೆಗೆ ಬಂದು ನೆಲವಳಿ ಹಣ ಎಣಿಕೆ ಮಾಡಿದರು ಮೊದಲ ವಾರವೇ ಬರೊಬ್ಬರಿ ೮೯೩ ರೂ ಬಂದಿತ್ತು ಅಣ್ಣನೆಡೆಗೆ ಮೆಚ್ಚುಗೆಯ ನೋಟ ಬೀರಿದ ಮುರಾರಿ ,ಸರಸ್ವತಜ್ಜಿ ಇದೆಲ್ಲಾ ಆ ದೇವಿ ಮಹಿಮೆ ಕಣ್ರಪ್ಪ ಎಂದು ಲೈಟ್ ಹಾಕಿ ದೀಪ ಬೆಳಗಿಸಲು ದೇವರ ಮನೆ ಕಡೆ ಹೆಜ್ಜೆ ಹಾಕಿದರು.
ಮುಂದುವರೆಯುವುದು....
ಸಿ ಜಿ ವೆಂಕಟೇಶ್ವರ
No comments:
Post a Comment